‘ಅಪ್ಪು ಹುಟ್ಟಿದಾಗ ಅವನನ್ನು ಮೊದಲು ಎತ್ತಿಕೊಂಡಿದ್ದು ನಾನು’; ಎಸ್​.ಕೆ. ಭಗವಾನ್​ ಭಾವುಕ ನುಡಿ

ರಾಜ್​ಕುಮಾರ್ ಕುಟುಂಬದ ಜತೆ ಭಗವಾನ್​ ತುಂಬಾನೇ ಆಪ್ತವಾಗಿದ್ದರು. ರಾಜ್​ಕುಮಾರ್ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು ಭಗವಾನ್​.

TV9kannada Web Team

| Edited By: Rajesh Duggumane

Mar 12, 2022 | 9:31 AM

ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಖ್ಯಾತಿ ಹಿರಿಯ ನಿರ್ದೇಶಕ ಎಸ್​.ಕೆ. ಭಗವಾನ್​ ( S.K. Bhagawan ) ಅವರಿಗೆ ಇದೆ. ರಾಜ್​ಕುಮಾರ್ ಕುಟುಂಬದ ಜತೆ ಭಗವಾನ್​ ತುಂಬಾನೇ ಆಪ್ತವಾಗಿದ್ದರು. ರಾಜ್​ಕುಮಾರ್ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು ಭಗವಾನ್​. ‘ಪುನೀತ್​ (Puneth Rajkumar) ಹುಟ್ಟುವ ಹಿಂದಿನ ದಿನ ಪಾರ್ವತಮ್ಮ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ರಾಜ್​ಕುಮಾರ್ ಅವರು ಸಿನಿಮಾ ಶೂಟಿಂಗ್​ಗಾಗಿ ಮೈಸೂರಿಗೆ ತೆರಳಿದ್ದರು. ಮನೆಯಲ್ಲಿ ಏನೇ ಸಮಸ್ಯೆ ಆದರೂ ನನಗೆ ಕರೆ ಮಾಡಬೇಕು ಎಂದು ರಾಜ್​ಕುಮಾರ್ ಅವರ ಕುಟುಂಬದವರಿಗೆ ಸೂಚನೆ ನೀಡಿದ್ದರು. ಹೀಗಾಗಿ, ನನಗೆ ಕರೆ ಬಂತು. ನಾನು ಮತ್ತು ನನ್ನ ಹೆಂಡತಿ  ಇಬ್ಬರೂ ಪಾರ್ವತಮ್ಮ ಅವರನ್ನು ಕರೆದುಕೊಂಡು ಆಸ್ಪತ್ರೆಗೆ ಹೋದೆವು. ಮರುದಿನ ಅಪ್ಪು ಹುಟ್ಟಿದ. ನರ್ಸ್​ ಮಗುವನ್ನು ಎತ್ತಿಕೊಂಡು ಬಂದು ನನಗೆ ಕೊಟ್ಟರು. ಮಗುವನ್ನು ಮೊದಲು ಎತ್ತಿಕೊಂಡಿದ್ದು ನಾನು ಎನ್ನುವುದೇ ಖುಷಿ’ ಎಂದಿದ್ದಾರೆ ಭಗವಾನ್.

ಇದನ್ನೂ ಓದಿ: Puneeth Rajkumar: ‘ಪುನೀತ್​ ರಾಜ್​ಕುಮಾರ್ ರಸ್ತೆ’ ನಾಮಕರಣಕ್ಕೆ ಬಿಬಿಎಂಪಿ ಅಧಿಕೃತ ಅನುಮೋದನೆ

ಪುನೀತ್​ ರಾಜ್​ಕುಮಾರ್ ಕುರಿತು ಬಯೋಗ್ರಫಿ; ಈ ಪುಸ್ತಕದಲ್ಲಿ ಏನೆಲ್ಲ ಮಾಹಿತಿ ಇರಲಿದೆ?

Follow us on

Click on your DTH Provider to Add TV9 Kannada