ಸೋಲಿಗೆ ಮಾಧ್ಯಮಗಳು ಕಾರಣವೆಂದ ಮಾಯಾವತಿ; ಟಿವಿ ಡಿಬೇಟ್ಗಳನ್ನು ಬಹಿಷ್ಕರಿಸಿದ ಬಹುಜನ ಸಮಾಜ ಪಕ್ಷ
ದೆಹಲಿ: ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ ಮಾಯಾವತಿ (BSP Chief Mayawati) ಸುದ್ದಿ ಮಾಧ್ಯಮಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಎಸ್ಪಿ ನೆಲಕಚ್ಚಲು ಮಾಧ್ಯಮಗಳೇ ಕಾರಣ ಎಂದು ಆರೋಪಿಸಿರುವ ಅವರು, ತಮ್ಮ ಪಕ್ಷ ಟಿವಿ ಡಿಬೇಟ್ಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಸಮಯದಲ್ಲಿ ಮಾಧ್ಯಮಗಳು ಜಾತಿ ಆಧಾರಿತ ವರದಿ ಮಾಡಿವೆ. ಇದು ಅಂಬೇಡ್ಕರ್ ತತ್ವಗಳನ್ನು ಅಳವಡಿಸಿಕೊಂಡಿರುವ ಬಿಎಸ್ಪಿಗೆ ತೀವ್ರ ಹಾನಿಯನ್ನುಂಟು ಮಾಡಿದೆ. ಹೀಗಾಗಿ ನಾವು ಇನ್ನು ಯಾವುದೇ ಟಿವಿ ಡಿಬೇಟ್ (ಮಾಧ್ಯಮಗಳಲ್ಲಿ ನಡೆಯುವ […]
ದೆಹಲಿ: ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ ಮಾಯಾವತಿ (BSP Chief Mayawati) ಸುದ್ದಿ ಮಾಧ್ಯಮಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಎಸ್ಪಿ ನೆಲಕಚ್ಚಲು ಮಾಧ್ಯಮಗಳೇ ಕಾರಣ ಎಂದು ಆರೋಪಿಸಿರುವ ಅವರು, ತಮ್ಮ ಪಕ್ಷ ಟಿವಿ ಡಿಬೇಟ್ಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಸಮಯದಲ್ಲಿ ಮಾಧ್ಯಮಗಳು ಜಾತಿ ಆಧಾರಿತ ವರದಿ ಮಾಡಿವೆ. ಇದು ಅಂಬೇಡ್ಕರ್ ತತ್ವಗಳನ್ನು ಅಳವಡಿಸಿಕೊಂಡಿರುವ ಬಿಎಸ್ಪಿಗೆ ತೀವ್ರ ಹಾನಿಯನ್ನುಂಟು ಮಾಡಿದೆ. ಹೀಗಾಗಿ ನಾವು ಇನ್ನು ಯಾವುದೇ ಟಿವಿ ಡಿಬೇಟ್ (ಮಾಧ್ಯಮಗಳಲ್ಲಿ ನಡೆಯುವ ಪ್ಯಾನಲ್ ಡಿಸ್ಕಶನ್)ಗಳಲ್ಲೂ ಪಾಲ್ಗೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ಮಾಯಾವತಿ, ಬಿಎಸ್ಪಿ ನಿರೀಕ್ಷೆಗೆ ವಿರುದ್ಧವಾಗಿ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಆದರೆ ನಿರಾಸೆಯಾಗಿದ್ದರೂ, ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ಚುನಾವಣೆ ಸಂದರ್ಭದಲ್ಲಿ ಇಲ್ಲಿನ ಮಾಧ್ಯಮಗಳು ನಮ್ಮನ್ನು ಬಿಜೆಪಿಯ ಬಿ ಟೀಂನಂತೆ ಬಿಂಬಿಸಿದವು. ಹೀಗಾಗಿ ಸಹಜವಾಗಿಯೇ ಬಿಜೆಪಿ ವಿರೋಧಿಗಳು, ಮುಸ್ಲಿಮರು ತಮ್ಮ ಮತವನ್ನು ಬಿಎಸ್ಪಿಗೆ ಹಾಕಲಿಲ್ಲ. ಸೋತೆವೆಂದು ಸುಮ್ಮನೆ ಇರುವುದಿಲ್ಲ. ನಮ್ಮ ಪಕ್ಷಸಂಘಟನೆ, ಚಳವಳಿಯನ್ನು ಮುಂದುವರಿಸುತ್ತೇವೆ. ಖಂಡಿತ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದರು
ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ ಕೇವಲ ಒಂದು ಕ್ಷೇತ್ರದಲ್ಲಿ ಗೆದ್ದುಕೊಂಡಿದೆ. 403 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 255 ಸೀಟ್ಗಳನ್ನು ಗೆದ್ದಿದೆ. 1885ರ ನಂತರ ಉತ್ತರ ಪ್ರದೇಶದಲ್ಲಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಮೊದಲ ಪಕ್ಷ ಎಂಬ ಹೆಗ್ಗಳಿಕೆ ಬಿಜೆಪಿಯದ್ದಾದರೆ, ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ದಾಖಲೆ ಬರೆದವರು ಯೋಗಿ ಆದಿತ್ಯನಾಥ್. 2000ನೇ ಇಸ್ವಿಯಲ್ಲಿ ಒಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೆ ಆ ಸರ್ಕಾರ ತುಂಬ ದಿನ ಉಳಿಯಲಿಲ್ಲ. ಆಗ ರಾಜನಾಥ್ ಸಿಂಗ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದರು. ಅಲ್ಲಿಂದ 2017ರವರೆಗೆ ಒಮ್ಮೆಯೂ ಬಿಜೆಪಿ ಆಡಳಿತಕ್ಕೆ ಬಂದಿರಲಿಲ್ಲ. ಈ ಅವಧಿಯಲ್ಲಿ ಸಮಾಜವಾದಿ ಪಕ್ಷ, ಬಿಎಸ್ಪಿಗಳು ಆಳಿವೆ. 2017ರಲ್ಲಿ ಸರ್ಕಾರ ರಚನೆ ಮಾಡಿದ ಬಿಜೆಪಿ ಇದೀಗ ಎರಡನೇ ಅವಧಿಗೆ ಅಧಿಕಾರ ಹಿಡಿದಿದೆ.
ಇದನ್ನೂ ಓದಿ: Migraine : ಕಿರಿಕಿರಿ ಉಂಟು ಮಾಡುವ ಮೈಗ್ರೇನ್ ಪರಿಹಾರಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್
Published On - 12:16 pm, Sat, 12 March 22