AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Migraine : ಕಿರಿಕಿರಿ ಉಂಟು ಮಾಡುವ ಮೈಗ್ರೇನ್​ ಪರಿಹಾರಕ್ಕೆ ಇಲ್ಲಿದೆ ಸಿಂಪಲ್​ ಟಿಪ್ಸ್​​

ನೀರಿನ ಸೇವನೆ ಕಡಿಮೆಯಾದರೂ ಮೈಗ್ರೇನ್​ ತಲೆನೋವು ಕಾಣಿಸಿಕೊಳ್ಳುತ್ತದೆ. ಪ್ರತಿದಿನ ಕನಿಷ್ಠ 3 ರಿಂದ 4 ಲೀ ನೀರು ಸೇವಿಸಿ. ಆದಷ್ಟು ದೇಹವನ್ನುನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ

Migraine : ಕಿರಿಕಿರಿ ಉಂಟು ಮಾಡುವ ಮೈಗ್ರೇನ್​ ಪರಿಹಾರಕ್ಕೆ ಇಲ್ಲಿದೆ ಸಿಂಪಲ್​ ಟಿಪ್ಸ್​​
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Mar 12, 2022 | 12:29 PM

ತಲೆನೋವು ಆರೋಗ್ಯವನ್ನು ಕಂಗೆಡಿಸುವದಂತೂ ಸುಳ್ಳಲ್ಲ. ಅದರಲ್ಲೂ ಅರೇ ತಲೆನೋವು ಅಥವಾ ಮೈಗ್ರೇನ್ (Migraine)​ ಬಂದರಂತೂ ಜೀವಕ್ಕೆ ಹಿಂಸೆ ನೀಡುತ್ತದೆ. ಇಡೀ ದಿನದ ಮೂಡ್​ ಹಾಳು ಮಾಡಿ ಕಿರಿಕಿರಿ ಉಂಟು ಮಾಡುವ ಮೈಗ್ರೇನ್​ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆಹಾರ ಸರಿಯಾಗಿ ಸೇವಿಸದಿರುವುದು, ಅತಿಯಾಗಿ ಕಂಪ್ಯೂಟರ್​ ಅಥವಾ ಇತರ ಗ್ಯಾಜೆಟ್​ಗಳನ್ನು ನೋಡುವುದು ಸೇರಿದಂತೆ ಒತ್ತಡ ಈ ಮೈಗ್ರೇನ್​ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ.  ತಲೆನೋವು ಆರಂಭವಾದರೆ ಹಾಸಿಗೆ ಹಿಡಿಯುವವರೂ ಇದ್ದಾರೆ. ಈ ಸಮಸ್ಯೆಯನ್ನು  ಆರಂಭದಲ್ಲಿಯೇ ಗುಣಮುಖವಾಗಿಸಿಕೊಳ್ಳದಿದ್ದರೆ ವಾಕರಿಕೆ, ತಲೆತಿರುಗುವಿಕೆ, ಕಿರಿಕಿರಿಯಂತಹ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಅರೆತಲೆನೋವನ್ನು ಕಡೆಗಣಿಸದೆ ಪರಿಹಾರ ಕಂಡುಕೊಳ್ಳಿ. ಅದಕ್ಕಾಗಿ ಇಲ್ಲಿವೆ ಒಂದಷ್ಟು ಸರಳ ಟಿಪ್ಸ್​ಗಳು.

ಬಿಸಿ ಬೆಳಕಿನಿಂದ ದೂರವಿರಿ: ಮೈಗ್ರೇನ್​ನಿಂದ ಬಳಲುತ್ತಿದ್ದರೆ ಬಿಸಿ ನೀಡುವ ಲೈಟ್​ಗಳಿಂದ ದೂರವಿರಿ. ಮಲಗುವಾಗ ಆದಷ್ಟು ಕತ್ತಲೆಯಲ್ಲಿ ಮಲಗಿ, ಚೆನ್ನಾಗಿ ಗಾಳಿ ಬರುವಲ್ಲಿ ಕುಳಿತುಕೊಳ್ಳಿ.  ಆದಷ್ಟು ಬಿಸಿ ಇರುವ ವಾತಾವರಣದಿಂದ ದೂರವಿರಿ. ಇದು ನಿಮ್ಮನ್ನು ಇನ್ನಷ್ಟು ಸಮಸ್ಯೆಗೆ ದೂಡಬಹುದು.

ತಾಪಮಾನ ಚಿಕಿತ್ಸೆ ಪಡೆದುಕೊಳ್ಳಿ: ಮೈಗ್ರೇನ್​ ಬೇಗ ಗುಣವಾಗಲು ತಾಪಮಾನದ ಥೆರಪಿ ಪಡೆದುಕೊಳ್ಳಿ. ಬಿಸಿ ಅಥವಾ ತಣ್ಣಗಿನ ಕಾಂಪ್ರಸದ್​ ಪ್ಯಾಡ್​ಗಳನ್ನು ಕುತ್ತಿಗೆ, ಹಣೆಯ ಭಾಗಗಳಲ್ಲಿ ಇಟ್ಟುಕೊಳ್ಳಿ. ಇದರಿಂದ ಆರಾಮವೆನಿಸಿ ತಲೆನೋವು ಕಡಿಮೆಯಾಗುತ್ತದೆ.

ಹೆಚ್ಚು ನೀರು ಸೇವಿಸಿ: ನೀರಿನ ಸೇವನೆ ಕಡಿಮೆಯಾದರೂ ಮೈಗ್ರೇನ್​ ತಲೆನೋವು ಕಾಣಿಸಿಕೊಳ್ಳುತ್ತದೆ. ಪ್ರತಿದಿನ ಕನಿಷ್ಠ 3 ರಿಂದ 4 ಲೀ ನೀರು ಸೇವಿಸಿ. ಆದಷ್ಟು ದೇಹವನ್ನುನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಆಗ ಅರೆತಲೆನೋವಿನ ಸಮಸ್ಯೆ ಇರುವುದಿಲ್ಲ.

ಹಣೆಯ ನೋವನ್ನು ಗಮನಿಸಿ: ಮೈಗ್ರೇನ್‌ನಿಂದ ಬಳಲುತ್ತಿರುವಾಗ, ಸರಳವಾದ ಕೆಲಸವೂ ಕಷ್ಟವೆನಿಸುತ್ತದೆ. ನೋವನ್ನು ತೊಡೆದುಹಾಕಲು, ನಿಮ್ಮ ಹಣೆಯನ್ನು ಮಸಾಜ್ ಮಾಡಿ. ಇದು ರಕ್ತಪರಿಚಲನೆಯನ್ನು ಸುಧಾರಿಸಲು ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಧ್ಯಾನ: ಧ್ಯಾನದಿಂದ ಇಂದ್ರಿಯಗಳನ್ನು ಶಾಂತಗೊಳಿಸಿ ಆರಾಮದಾಯಕ ಸ್ಥಿತಿಯನ್ನು ನೀಡುತ್ತದೆ. ಮೈಗ್ರೇನ್ ಬ್ಲೂಸ್ ಪ್ರಾರಂಭವಾದಾಗ, ನಿಮ್ಮ ಮೇಲೆ ಕೇಂದ್ರೀಕರಿಸಿ. ನಿಮ್ಮ ಉಸಿರಾಟವನ್ನು ನಿಯಂತ್ರಿಸುವ ಮೂಲಕ ಮತ್ತು ನಿಮ್ಮ ನೋವು ಮತ್ತು ದೇಹದ ವಿವಿಧ ಭಾಗಗಳ ಮೇಲೆ ಕೇಂದ್ರೀಕರಿಸುವ ಮೂಲಕ ಧ್ಯಾನ ಮಾಡಿ. ಅಸಹನೀಯ ನೋವಿನಿಂದಾಗಿ ಧ್ಯಾನ ಮಾಡುವುದು ಸುಲಭವಲ್ಲ, ಆದರೆ ಕೊನೆಯಲ್ಲಿ ಉತ್ತಮ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ:

ಕರುಳಿನ ಸಮಸ್ಯೆ ಬಗ್ಗೆ ಅಸಡ್ಡೆ ಬೇಡ: ಆಯರ್ವೇದದಲ್ಲಿದೆ ಪರಿಹಾರ