ರೈತರೊಂದಿಗೆ ವಿರೋಧ ಬೇಡ, ಅವರು ಹಿಂಸಾಚಾರಕ್ಕೂ ಹಿಂದೇಟು ಹಾಕುವುದಿಲ್ಲ: ಕೇಂದ್ರ ಸರ್ಕಾರಕ್ಕೆ ಸತ್ಯಪಾಲ್​ ಮಲಿಕ್​ ಎಚ್ಚರಿಕೆ

ಬಿಹಾರ, ಗೋವಾ ಮತ್ತು ಜಮ್ಮು-ಕಾಶ್ಮೀರಗಳ ರಾಜ್ಯಪಾಲರೂ ಆಗಿದ್ದ ಸತ್ಯಪಾಲ ಮಲಿಕ್ ಸದ್ಯ ಮೇಘಾಲಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಧಾನಿ ಮೋದಿ ಸರ್ಕಾರ ಹಿಂದೆ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ಕಟುವಾಗಿ ವಿರೋಧಿಸಿದವರಲ್ಲಿ ಇವರೂ ಒಬ್ಬರು.

ರೈತರೊಂದಿಗೆ ವಿರೋಧ ಬೇಡ, ಅವರು ಹಿಂಸಾಚಾರಕ್ಕೂ ಹಿಂದೇಟು ಹಾಕುವುದಿಲ್ಲ: ಕೇಂದ್ರ ಸರ್ಕಾರಕ್ಕೆ ಸತ್ಯಪಾಲ್​ ಮಲಿಕ್​ ಎಚ್ಚರಿಕೆ
ಸತ್ಯಪಾಲ್​ ಮಲಿಕ್​
Follow us
TV9 Web
| Updated By: Lakshmi Hegde

Updated on:Mar 12, 2022 | 9:35 AM

ಕೇಂದ್ರದ ವಿರುದ್ಧ ಆಗಾಗ ಟೀಕೆ ಮಾಡುವ, ಅದರಲ್ಲೂ ಕೃಷಿ ಕಾಯ್ದೆ ಜಾರಿಗೆ ತಂದಿದ್ದನ್ನು ವ್ಯಾಪಕವಾಗಿ ವಿರೋಧಿಸುತ್ತಲೇ ಬಂದಿದ್ದ ಮೇಘಾಲಯ ರಾಜ್ಯಪಾಲ ಸತ್ಯಪಾಲ ಮಲಿಕ್​ (Satya Pal Malik) ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೊಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಯಾವ ಕಾರಣಕ್ಕೂ ರೈತರ ವಿರೋಧ ಕಟ್ಟಿಕೊಳ್ಳಬೇಡಿ, ಅವರು ತಮಗೆ ಬೇಕಾಗಿದ್ದನ್ನು ಪಡೆಯಲು ಯಾವಾಗ ಬೇಕಾದರೂ ಹಿಂಸಾಚಾರ ಮಾರ್ಗ ಅನುಸರಿಸಬಹುದು ಎಂದು ಹೇಳಿದ್ದಾರೆ.

ರಾಜಸ್ಥಾನದ ಜೋಧ್​ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ರೈತರೊಂದಿಗೆ ಸರಿಯಾಗಿರಬೇಕು. ಅವರ ವಿರೋಧ ಕಟ್ಟಿಕೊಳ್ಳಬಾರದು ಎಂದು ನಾನು ದೆಹಲಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುತ್ತೇನೆ. ಏಕೆಂದರೆ ರೈತರು ತುಂಬ ಅಪಾಯಕಾರಿ ಜನರು. ಅವರಿಗೇನು ಬೇಕೋ ಅದನ್ನು ಪಡೆದೇ ತೀರುತ್ತಾರೆ. ಮಾತುಕತೆಯ ಮೂಲಕವಾದರೂ ಸರಿ, ಹೋರಾಟದ ಮುಖಾಂತರವಾದರೂ ಸರಿ ಅವರಿಗೇನು ಬೇಕೋ ಅದನ್ನು ಪಡೆಯುತ್ತಾರೆ. ಅಗತ್ಯ ಕಂಡರೆ ರೈತರು ಹಿಂಸಾಚಾರ ನಡೆಸಲೂ ಹಿಂದೇಟು ಹಾಕುವವರಲ್ಲ  ಎಂದು ಹೇಳಿದ್ದಾರೆ.

ಬಿಹಾರ, ಗೋವಾ ಮತ್ತು ಜಮ್ಮು-ಕಾಶ್ಮೀರಗಳ ರಾಜ್ಯಪಾಲರೂ ಆಗಿದ್ದ ಸತ್ಯಪಾಲ ಮಲಿಕ್ ಸದ್ಯ ಮೇಘಾಲಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಧಾನಿ ಮೋದಿ ಸರ್ಕಾರ ಹಿಂದೆ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ಕಟುವಾಗಿ ವಿರೋಧಿಸಿದವರಲ್ಲಿ ಇವರೂ ಒಬ್ಬರು. ಆ ಕೃಷಿ ಕಾಯ್ದೆಗಳನ್ನು ಕೇಂದ್ರ ವಾಪಸ್​ ಕೂಡ ಪಡೆದಿದೆ. ಆದರೆ  ಅದನ್ನು ವಿರೋಧಿಸುತ್ತಲೇ ಬಂದಿರುವ ಸತ್ಯಪಾಲ ಮಲಿಕ್​ ಈ ಕಾರ್ಯಕ್ರಮದಲ್ಲೂ ಹೀಗೇ ಹೇಳಿದ್ದಾರೆ. ಅದರಲ್ಲೂ ಪಂಜಾಬ್​​ನಲ್ಲಿ ಬಿಜೆಪಿ ನೆಲಕಚ್ಚಿದ ಬೆನ್ನಲ್ಲೇ ಸತ್ಯಪಾಲ್​ ಮಲಿಕ್ ಮತ್ತೆ ಕೃಷಿ ಕಾಯ್ದೆಗಳನ್ನು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ನಾನು ಪದೇಪದೆ ಈ ವಿಷಯ ಮಾತನಾಡುವುದರಿಂದ ನನ್ನ ಹುದ್ದೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆದರೆ ನನಗೆ ಯಾವುದೇ ಭಯವೂ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಮುಂದುವರಿದು ಮಾತನಾಡಿದ ಸತ್ಯಪಾಲ್ ಮಲಿಕ್​, ಸಾಗುವಳಿದಾರರಿಗೆ ಮೂಗುದಾರ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ತಮ್ಮ ಬೇಡಿಕೆಗಳನ್ನು ಹೇಗೆ ಈಡೇರಿಸಿಕೊಳ್ಳಬೇಕು ಎಂಬುದು ಅವರಿಗೆ ಗೊತ್ತು. ಸರ್ಕಾರಗಳು ಅವರಿಗೆ ಯಾವುದೇ ಭರವಸೆ ನೀಡಿದ್ದರೂ, ಅದನ್ನು ಆದಷ್ಟು ಬೇಗ ನೆರವೇರಿಸಬೇಕು ಎಂದೂ ಹೇಳಿದ್ದಾರೆ. ನನಗೆ ಕೇಂದ್ರ ಸರ್ಕಾರದ ಜತೆ ಶತ್ರುತ್ವ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಜನವರಿಯಲ್ಲಿ ಕೂಡ ಸತ್ಯಪಾಲ್ ಮಲಿಕ್​ ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ರೈತರ ವಿಚಾರದಲ್ಲಿ ತುಂಬ ಅಹಂಕಾರದಿಂದ ವರ್ತಿಸುತ್ತಿದ್ದಾರೆ. ಪ್ರಧಾನಿ ಮೋದಿಯವರ ವರ್ತನೆಗೆ ಅಮಿತ್​ ಶಾ ಕಾರಣ ಎಂದು ಪ್ರತಿಪಾದಿಸಿದ್ದರು.

ಇದನ್ನೂ ಓದಿ: ಪ್ರೀತಿ ಜಿಂಟಾ ಮುಂದೆ ಸೈಫ್​ ಅಲಿ ಖಾನ್​ ಸ್ಟಂಟ್​ ಎಡವಟ್ಟು​; ಸತ್ತು ಹೋದ್ರು ಅಂತ ಭಾವಿಸಿದ್ದ ನಟಿ

Published On - 8:32 am, Sat, 12 March 22

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ