AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೀಗಾದರೆ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ..’-ಮೇಘಾಲಯ ರಾಜ್ಯಪಾಲರಿಂದ ಎಚ್ಚರಿಕೆ

ಸತ್ಯಪಾಲ್​ ಮಲ್ಲಿಕ್  2018ರಿಂದ 2019ರವರೆಗೆ ಜಮ್ಮು-ಕಾಶ್ಮೀರದ  ಗವರ್ನರ್​ ಆಗಿದ್ದರು. ಈಗ ಅಲ್ಲಿ ನಾಗರಿಕರ ಹತ್ಯೆ ಆಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಅಲ್ಲಿದ್ದಾಗ  ಯಾವುದೇ ರೀತಿಯ ಕಲ್ಲುತೂರಾಟ, ಈ ತರಹದ ಉಗ್ರ ದಾಳಿ ಆಗುತ್ತಿರಲಿಲ್ಲ ಎಂದಿದ್ದಾರೆ.

‘ಹೀಗಾದರೆ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ..’-ಮೇಘಾಲಯ ರಾಜ್ಯಪಾಲರಿಂದ ಎಚ್ಚರಿಕೆ
ಸತ್ಯಪಾಲ್​​ ಮಲ್ಲಿಕ್​
TV9 Web
| Updated By: Lakshmi Hegde|

Updated on: Oct 18, 2021 | 2:48 PM

Share

ಪ್ರತಿಭಟನಾ ನಿರತ ರೈತರ ಮನವಿಯನ್ನು ಪೂರೈಸುವಂತೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್​  (Meghalaya Governor Satya Pal Malik) ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ರಾಜಸ್ಥಾನದಲ್ಲಿ ಝುನ್​ಝುನು ಜಿಲ್ಲೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ರೈತರ ಬೇಡಿಕೆಗಳನ್ನು ಈಗ ಕೇಂದ್ರ ಸರ್ಕಾರ ಪೂರೈಸದೆ ಇದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಖಂಡಿತ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.  ಅಷ್ಟೇ ಅಲ್ಲ, ಈಗ ರೈತರ ಅಗತ್ಯಗಳನ್ನು ಒದಗಿಸಿ ಕೊಡದೆ ಇದ್ದರೆ ಉತ್ತರಪ್ರದೇಶ (Uttar Pradesh)ದಲ್ಲಿ ಮುಂದಿನವರ್ಷದ ವಿಧಾನಸಭೆ ಚುನಾವಣೆ ಹೊತ್ತಿಗೆ ಬಿಜೆಪಿ ನಾಯಕರು ಹಲವು ಹಳ್ಳಿಗಳನ್ನು ಪ್ರವೇಶಿಸಲೂ ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ. ನನ್ನ ನಿವಾಸ ಮೀರತ್​​ನಲ್ಲಿದೆ..ಮೀರತ್, ಮುಜಾಫರ್​​ನಗರ, ಬಾಘ್​ಪತ್​​ಗಳ ಹಳ್ಳಿಗಳಲ್ಲಿ ಖಂಡಿತ ಬಿಜೆಪಿ ನಾಯಕರ ಪ್ರವೇಶಕ್ಕೆ ತಡೆಯಾಗಲಿದೆ ಎಂದಿದ್ದಾರೆ.   

ಮೂಲತಃ ಉತ್ತರಪ್ರದೇಶದವರಾದ ಸತ್ಯಪಾಲ್​ ಮಲ್ಲಿಕ್​ ತಮ್ಮ ನಿಲುವು ರೈತರ ಪರ ಎಂಬುದನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಹಾಗೇ, ರೈತರಿಗಾಗಿ ನಾನು ಪ್ರಧಾನಮಂತ್ರಿ, ಗೃಹ ಮಂತ್ರಿ ಸೇರಿ ಹಲವರೊಂದಿಗೆ ಜಗಳವಾಡಿಕೊಂಡಿದ್ದೇನೆ. ನೀವು ಮಾಡುತ್ತಿರುವುದು ಸರಿಯಲ್ಲ ಎಂದು ಪದೇಪದೆ ಹೇಳಿದ್ದೇನೆ. ಸರ್ಕಾರ ಕಾನೂನುಬದ್ಧವಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸಬೇಕು. ಆಗ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಹಾಗೇ, ನಾನು ಸಾರ್ವಜನಿಕವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇದುವರೆಗೆ ಏನೂ ಹೇಳಿಲ್ಲ. ಆದರೆ ವೈಯಕ್ತಿಕವಾಗಿ ಸಂದೇಶ ಕಳಿಸಿದ್ದೇನೆ. ಇನ್ನು ಅವರಿಗೆಲ್ಲ ಸಿಖ್ಖರ ಬಗ್ಗೆ ಸರಿಯಾಗಿ ಗೊತ್ತಿಲ್ಲ ಎನ್ನಿಸುತ್ತದೆ. ಸಿಖ್​​ ಸಮುದಾಯದವರು ಶಸ್ತ್ರಾಸ್ತ್ರಗಳಿಲ್ಲದೆ ಮೊಘಲರ ವಿರುದ್ಧ ಹೋರಾಡಿದವರು ಎಂಬುದು ನೆನಪಿರಲಿ ಎಂದು ಹೇಳಿದರು.

ಜಮ್ಮು-ಕಾಶ್ಮೀರದ ಬಗ್ಗೆ ಪ್ರತಿಕ್ರಿಯೆ ಸತ್ಯಪಾಲ್​ ಮಲ್ಲಿಕ್  2018ರಿಂದ 2019ರವರೆಗೆ ಜಮ್ಮು-ಕಾಶ್ಮೀರದ  ಗವರ್ನರ್​ ಆಗಿದ್ದರು. ಈಗ ಅಲ್ಲಿ ನಾಗರಿಕರ ಹತ್ಯೆ ಆಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಅಲ್ಲಿದ್ದಾಗ  ಯಾವುದೇ ರೀತಿಯ ಕಲ್ಲುತೂರಾಟ, ಈ ತರಹದ ಉಗ್ರ ದಾಳಿ ಆಗುತ್ತಿರಲಿಲ್ಲ.ಭಯೋತ್ಪಾದಕರು ಶ್ರೀನಗರದ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರವೇಶಿಸಲು ಧೈರ್ಯ ಮಾಡುತ್ತಿರಲಿಲ್ಲ. ಆದರೆ ಈಗೀಗ ನಗರದ ಒಳಗೇ ಧೈರ್ಯವಾಗಿ ನುಗ್ಗಿ ನಾಗರಿಕರ ಹತ್ಯೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: DMart: ಡಿಮಾರ್ಟ್ ಸಿಇಒ ಇಗ್ನೇಷಿಯಸ್ ನವಿಲ್ ನರೊನ್ಹಾ ಈಗ ಶತಕೋಟ್ಯಧಿಪತಿ

ಜನ ಮೆಚ್ಚಿಕೊಂಡ ‘ಕನ್ನಡತಿ’ ಜೋಡಿಗೆ ಸಿಕ್ತು ಅವಾರ್ಡ್​; ಸಂಭ್ರಮಿಸಿದ ಕಿರಣ್​ ರಾಜ್​, ರಂಜನಿ ರಾಘವನ್​

ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ