DMart: ಡಿಮಾರ್ಟ್ ಸಿಇಒ ಇಗ್ನೇಷಿಯಸ್ ನವಿಲ್ ನರೊನ್ಹಾ ಈಗ ಶತಕೋಟ್ಯಧಿಪತಿ
ಡಿಮಾರ್ಟ್ ಸಿಇಒ ಇಗ್ನೇಷಿಯಸ್ ನವಿಲ್ ನರೊನ್ಹಾ ಬಿಲಿಯನೇರ್ ಆಗಿದ್ದಾರೆ. ಅದು ಹೇಗೆ, ಏನು ಎಂಬಿತ್ಯಾದಿ ಆಸಕ್ತಿಕರ ವಿವರಗಳು ಈ ಲೇಖನದಲ್ಲಿ ಇವೆ.

ಡಿಮಾರ್ಟ್ ರೀಟೇಲ್ ಸ್ಟೋರ್‌ಗಳನ್ನು ನಡೆಸುತ್ತಿರುವ ಅವೆನ್ಯೂ ಸೂಪರ್‌ಮಾರ್ಟ್ಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಗ್ನೇಷಿಯಸ್ ನವಿಲ್ ನರೊನ್ಹಾ ಅವರ ಸಂಪತ್ತು 100 ಬಿಲಿಯನ್ ಡಾಲರ್ಗೂ ಹೆಚ್ಚಾಗಿದೆ. ಈ ವರ್ಷ ರೀಟೇಲ್ ಉದ್ಯಮದ ಷೇರುಗಳು ಶೇ 113ರಷ್ಟು ವಿಸ್ಮಯಕಾರಿಯಾದ ಜಿಗಿತ ಕಂಡಿದ್ದರಿಂದ ನರೋನ್ಹಾ ಸಂಪತ್ತು ಇಂಥ ಬೆಳವಣಿಗೆ ಆಗಿದೆ. ಬಿಎಸ್‌ಇಯಲ್ಲಿ ಈ ಸ್ಟಾಕ್ 5,899 ರೂಪಾಯಿಯ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿತು ಮತ್ತು ಇಂಟ್ರಾಡೇಯಲ್ಲಿ ಶೇ 10.7ರಷ್ಟು ಲಾಭವನ್ನು ಗಳಿಸಿ, ಮಾರುಕಟ್ಟೆ ಬಂಡವಾಳ ಮೌಲ್ಯವು 3.54 ಲಕ್ಷ ಕೋಟಿ ಆಯಿತು. ಬೆಳಗ್ಗೆ 10 ಗಂಟೆಗೆ ಈ ಷೇರು ಶೇ 2ರಷ್ಟು ಏರಿಕೆಯಾಗಿ 5,431 ರೂಪಾಯಿಗೆ ತಲುಪಿತು. ಸತತ ಏಳು ಸೆಷನ್‌ಗಳಿಂದ ಈ ಷೇರು ಸತತ ಹೆಚ್ಚಳವಾಗಿದೆ ಹಾಗೂ ಈ ಅವಧಿಯಲ್ಲಿ ಸುಮಾರು ಶೇ 40ರಷ್ಟು ಪ್ರಗತಿ ಕಂಡಿದೆ.
ಇದರೊಂದಿಗೆ 47 ವರ್ಷ ವಯಸ್ಸಿನ ನರೊನ್ಹಾ ಅವರ ನಿವ್ವಳ ಮೌಲ್ಯವು 7,744 ಕೋಟಿ ರೂಪಾಯಿಗಳನ್ನು ಮೀರಿ, ಭಾರತದ ಅತ್ಯಂತ ಶ್ರೀಮಂತ ವೃತ್ತಿಪರ ವ್ಯವಸ್ಥಾಪಕರಾಗಿದ್ದಾರೆ. ಸದ್ಯಕ್ಕೆ ನರೊನ್ಹಾ ಅವರು ಕಂಪೆನಿಯಲ್ಲಿ 13.13 ಮಿಲಿಯನ್ ಷೇರುಗಳು ಅಥವಾ ಶೇ 2.03ರಷ್ಟು ಪಾಲನ್ನು ಹೊಂದಿದ್ದಾರೆ. ಅವೆನ್ಯೂ ಸೂಪರ್‌ಮಾರ್ಟ್‌ಗಳ ಷೇರಿನ ಬೆಲೆಯಲ್ಲಿ 19 ಪಟ್ಟು ಏರಿಕೆ ಆಗಿದ್ದರಿಂದ ನರೊನ್ಹಾ ಈ ಸಂಪತ್ತನ್ನು ಗಳಿಸಿದ್ದಾರೆ. ಈ ಷೇರು ಮಾರ್ಚ್ 21, 2017ರಲ್ಲಿ 299 ರೂಪಾಯಿಯೊಂದಿಗೆ ಲಿಸ್ಟಿಂಗ್ ಆಯಿತು. ಆ ನಂತರದಲ್ಲಿ ಷೇರಿನ ಬೆಲೆಯು ಶೇ 1,800ಕ್ಕಿಂತ ಹೆಚ್ಚಾಯಿತು.
2004ರಲ್ಲಿ ನೇಮಕ ಮುಂಬೈನಲ್ಲಿ ಹುಟ್ಟಿ ಬೆಳೆದ ನರೊನ್ಹಾ ಅವರು ನರ್ಸೀ ಮೊಂಜಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಿಂದ ಮ್ಯಾನೇಜ್‌ಮೆಂಟ್ ಪದವಿಯನ್ನು ಪೂರ್ಣಗೊಳಿಸಿದರು. ಡಿಮಾರ್ಟ್‌ಗೆ ಸೇರುವ ಮೊದಲು ನರೊನ್ಹಾ ಹಿಂದೂಸ್ತಾನ್ ಯುನಿಲಿವರ್‌ನೊಂದಿಗೆ ಕೆಲಸ ಮಾಡುತ್ತಿದ್ದರು. ಅವರನ್ನು 2004ರಲ್ಲಿ ವ್ಯವಹಾರದ ಮುಖ್ಯಸ್ಥರಾಗಿ ಅವೆನ್ಯೂ ಸೂಪರ್ ಮಾರ್ಟ್ಸ್ ಸಂಸ್ಥಾಪಕ ರಾಧಾಕೃಷ್ಣನ್ ದಮಾನಿ ನೇಮಿಸಿಕೊಂಡರು. 2007ರಲ್ಲಿ ಸಿಇಒ ಆಗಿ ಅವರು ಅಧಿಕಾರ ವಹಿಸಿಕೊಂಡರು. ಡಿಮಾರ್ಟ್ ಹೆಚ್ಚಿನ ವಿಭಾಗಗಳಲ್ಲಿ ಹೆಚ್ಚಿನ ರಿಯಾಯಿತಿ ನೀಡುವುದನ್ನು ಮುಂದುವರಿಸಿದೆ. ಅದಕ್ಕೆ ಪ್ರತಿಯಾಗಿ ಗ್ರಾಹಕರ ವಿಶ್ವಾಸವನ್ನು ಪಡೆಯುತ್ತಿದೆ. ಸಂಸ್ಥೆಯು ಕೆಳ-ಮಧ್ಯಮ, ಮಧ್ಯಮ ಮತ್ತು ಮಹತ್ವಾಕಾಂಕ್ಷೆಯ ಮೇಲ್ಮಧ್ಯಮ-ಆದಾಯದ ಗ್ರಾಹಕರನ್ನು ಗುರಿಯಾಗಿಸುತ್ತದೆ. ಅವರಿಗೆ ಹಣದ ಮೌಲ್ಯವು ಪ್ರಮುಖ ಪಾತ್ರ ವಹಿಸುತ್ತದೆ.
ಸ್ಪರ್ಧೆ ಎದುರಿಸುತ್ತಿದೆ ಸಂಸ್ಥೆಯು ಜಿಯೋಮಾರ್ಟ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಿಂದ ಹೆಚ್ಚಿನ ಸ್ಪರ್ಧೆಯ ಅಪಾಯವನ್ನು ಎದುರಿಸುತ್ತಿದೆ. ಆದರೆ ವಿಶ್ಲೇಷಕರ ಪ್ರಕಾರ, ಸಂಸ್ಥೆಯು ದೇಶೀಯ ರೀಟೇಲ್ ಉದ್ಯಮದಲ್ಲಿ ತನ್ನ ಉತ್ತಮ ಅನುಷ್ಠಾನ ಸಾಮರ್ಥ್ಯಗಳು, ಶಿಸ್ತುಬದ್ಧ ಕಡಿಮೆ ಬೆಲೆಗಳು ಮತ್ತು ಕಡಿಮೆ ವೆಚ್ಚದ ಕಾರ್ಯತಂತ್ರ, ಕಡಿಮೆ ಕಾರ್ಯಾಚರಣೆಯ ವೆಚ್ಚ, ಸಜ್ಜುಗೊಂಡ ವಿತರಣಾ ಜಾಲದಿಂದಾಗಿ ಸುವ್ಯವಸ್ಥಿತ ಸ್ಥಾನವನ್ನು ಹೊಂದಿದೆ. ಇದರಿಂದಾಗಿ ಡಿಮಾರ್ಟ್ ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ. ಶನಿವಾರಂದು ಸಂಸ್ಥೆಯು ನಿರೀಕ್ಷೆಗಿಂತ ಉತ್ತಮವಾದ ಗಳಿಕೆಯನ್ನು ವರದಿ ಮಾಡಿದೆ. ಆದಾಯವು ವರ್ಷದಿಂದ ವರ್ಷಕ್ಕೆ ಶೇ 46.6ಕ್ಕೆ ಹೆಚ್ಚಾಗಿದೆ. ಒಟ್ಟು ಮಾರ್ಜಿನ್ 25 ಬೇಸಿಸ್ ಪಾಯಿಂಟ್‌ಗಳಿಂದ y-o-y ನಿಂದ (ವರ್ಷದಿಂದ ವರ್ಷಕ್ಕೆ) ಶೇ 14.3ಕ್ಕೆ ವಿಸ್ತರಿಸಲಾಗಿದೆ. EBITA ಶೇ 106.3ರಷ್ಟು ಬೆಳೆದು, 670 ಕೋಟಿ ರೂಪಾಯಿಗೆ ತಲುಪಿದೆ. ಮಾರ್ಜಿನ್ 260bps ಹೆಚ್ಚಾಗಿ, ಶೇ 8.8ಕ್ಕೆ ವಿಸ್ತರಿಸಿದೆ. ಇತರ ಕಡಿಮೆ ವೆಚ್ಚಗಳಿಂದ (230bps) ಸಹಾಯ ಮಾಡುತ್ತದೆ. ಪಿಎಟಿ (ತೆರಿಗೆ ನಂತರದ ಲಾಭ) ಶೇ 113.2ರಷ್ಟು ಬೆಳೆದಿದೆ.
ಒಟ್ಟು ಮಳಿಗೆ ಸಂಖ್ಯೆ 246 MMR ಅನ್ನು ವ್ಯಾಪಕವಾಗಿ ಆವರಿಸಿದ ನಂತರ ಮತ್ತು ಅಹಮದಾಬಾದ್, ಪುಣೆ, ಬೆಂಗಳೂರು ಮತ್ತು ಹೈದರಾಬಾದ್‌ಗೆ ಪ್ರವೇಶಿಸಿದೆ. ಆ ನಂತರ DMart ರೆಡಿ ಸೂರತ್ ಮತ್ತು ವಡೋದರಾ ನಗರಗಳಲ್ಲಿ ಆರಂಭ ಮಾಡಿದೆ. ಡಿಮಾರ್ಟ್ ರೆಡಿ ತನ್ನ ಕೊಡುಗೆಯನ್ನು ಆಹಾರ ಮತ್ತು ದಿನಸಿಗಳಿಂದ ಸಾಮಾನ್ಯ ಸರಕುಗಳಿಗೆ ಮತ್ತು ತಾಜಾ ಹಣ್ಣುಗಳು ಹಾಗೂ ತರಕಾರಿಗಳಿಗೆ ವಿಸ್ತರಿಸಿದೆ. ಕಂಪೆನಿಯು ಎರಡನೇ ತ್ರೈಮಾಸಿಕದಲ್ಲಿ ಎಂಟು ಹೊಸ ಮಳಿಗೆಗಳನ್ನು ಸೇರಿಸಿದ್ದು, ಸೆಪ್ಟೆಂಬರ್ 2021ರ ಕೊನೆಯಲ್ಲಿ ಒಟ್ಟು ಸ್ಟೋರ್ ಎಣಿಕೆ 246 ಆಯಿತು.
ಇದನ್ನೂ ಓದಿ: Avenue Supermarts: ಅವೆನ್ಯೂ ಸೂಪರ್‌ಮಾರ್ಟ್ಸ್ ಲಾಭ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಶೇ 110ರಷ್ಟು ಏರಿಕೆ
D-Mart: 3 ಲಕ್ಷ ಕೋಟಿ ರೂ. ದಾಟಿದ ಡಿ-ಮಾರ್ಟ್ ಮಾರುಕಟ್ಟೆ ಮೌಲ್ಯ; ಈ ಸಾಧನೆ ಮಾಡಿದ 17ನೇ ಭಾರತೀಯ ಕಂಪೆನಿ