LPG Subsidy: ದುರ್ಬಲ ವರ್ಗದ ಜನರಿಗೆ ಮಾತ್ರ ಎಲ್‌ಪಿಜಿ ಸಬ್ಸಿಡಿ ಒದಗಿಸಲು ಸರ್ಕಾರದ ಚಿಂತನೆ ಎನ್ನುತ್ತಿವೆ ಮೂಲಗಳು
ದುರ್ಬಲ ವರ್ಗದ ಜನರಿಗೆ ಮಾತ್ರ ಎಲ್‌ಪಿಜಿ ಸಬ್ಸಿಡಿ ನೀಡುವುದಕ್ಕೆ ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಆ ಬಗ್ಗೆ ವಿವರಗಳು ಇಲ್ಲಿವೆ.

ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಮೇಲಿನ ಸಬ್ಸಿಡಿಯನ್ನು ದುರ್ಬಲ ವರ್ಗದ ಜನರಿಗೆ ಮಾತ್ರ ನೀಡಬೇಕು ಎಂದು ಕೇಂದ್ರ ಸರ್ಕಾರವು ಬಯಸುತ್ತದೆ ಎಂಬುದಾಗಿ ಸರ್ಕಾರಿ ಮೂಲಗಳು ಅಕ್ಟೋಬರ್ 18ರಂದು ಸಿಎನ್‌ಬಿಸಿ ಟಿವಿ 18ಗೆ ತಿಳಿಸಿವೆ. ಸದ್ಯಕ್ಕೆ ಎಲ್‌ಜಿಪಿ ಸಬ್ಸಿಡಿಯನ್ನು ಪರಿಶೀಲಿಸಲಾಗುತ್ತಿದೆ. ಮೂಲಗಳು ಹೇಳುವಂತೆ, “ಎಲ್ಲ ಆರ್ಥಿಕ ನಿರ್ಧಾರಗಳು ಸುಸ್ಥಿರವಾಗಿರಬೇಕು”. ಹೆಚ್ಚಿನ ಇಂಧನ ಬೆಲೆಯಲ್ಲಿ, ಕೊವಿಡ್ -19 ಬಿಕ್ಕಟ್ಟಿನ ಆರಂಭದ ಅವಧಿಗೆ ಹೋಲಿಸಿದರೆ ಭಾರತದಲ್ಲಿ ಸಂಚಿತ ಇಂಧನ ಬಳಕೆ ಶೇ 15ರಿಂದ 16ರಷ್ಟು ಹೆಚ್ಚಾಗಿದೆ ಎಂದು ಮೂಲಗಳು ಸೂಚಿಸಿವೆ. ದೇಶೀಯ ಪೆಟ್ರೋಲಿಯಂ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದ ಸಮಯದಲ್ಲಿ ಕೊವಿಡ್-19ರ ಪೂರ್ವದ ಅವಧಿಯಲ್ಲಿ ಹೆಚ್ಚಿನ ಇಂಧನ ಬಳಕೆ ಬಗ್ಗೆ ಸರ್ಕಾರದ ಮೂಲಗಳು ಅಡಿಗೆರೆ ಎಳೆದು, ಗಮನ ಸೆಳೆದಿವೆ.
ದೆಹಲಿ ಮತ್ತು ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರವು ಗರಿಷ್ಠ ಮಟ್ಟವನ್ನು ತಲುಪಿದ್ದು, ಕ್ರಮವಾಗಿ ರೂ. 105.84 ಮತ್ತು ರೂ. 111.77ಕ್ಕೆ ತಲುಪಿದೆ. ಡೀಸೆಲ್ ಸದ್ಯಕ್ಕೆ ಮುಂಬೈನಲ್ಲಿ ಲೀಟರ್‌ಗೆ 102.52 ರೂಪಾಯಿ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 94.57 ರೂಪಾಯಿ ಇದೆ. ಮೂಲಗಳು ತಿಳಿಸಿರುವಂತೆ, ಯಾವುದೇ ಜಾಗತಿಕ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 70 ಯುಎಸ್ಡಿಗಿಂತ ಹೆಚ್ಚಿದ್ದರೆ ಅದು “ಭಾರತಕ್ಕೆ ಅಧಿಕ” ಎಂದು ಹೇಳಿದೆ. ಸದ್ಯಕ್ಕೆ ಬೆಂಚ್ಮಾರ್ಕ್ ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 85.53 ಡಾಲರ್ನಂತೆ ವಹಿವಾಟು ನಡೆಸುತ್ತಿದೆ.
ಒಪೆಕ್+ (ಒಪೆಕ್ ಸದಸ್ಯ ರಾಷ್ಟ್ರಗಳು ಮತ್ತು 10 ಪ್ರಮುಖ ಒಪೆಕ್ ಅಲ್ಲದ ತೈಲ-ರಫ್ತು ಮಾಡುವ ರಾಷ್ಟ್ರಗಳು) ಕಚ್ಚಾ ಪೂರೈಕೆಯು “ಬೇಡಿಕೆಗಿಂತ ಕಡಿಮೆ” ಎಂದು ಮೂಲಗಳು ತಿಳಿಸಿವೆ. ಗಮನಾರ್ಹ ಅಂಶ ಏನೆಂದರೆ, ಒಪೆಕ್+ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಹರಿವನ್ನು ನಿಯಂತ್ರಿಸಿದೆ, ಕೊರೊನಾ ಬಿಕ್ಕಟ್ಟಿನ ಆರಂಭದ ನಂತರ ಜಾಗತಿಕ ಬೆಲೆಯಲ್ಲಿನ ಪ್ರಮುಖ ಕುಸಿತವನ್ನು ತಡೆಯುವ ಸ್ಪಷ್ಟ ಪ್ರಯತ್ನದಲ್ಲಿದೆ. ಇಂಧನದ ಮೇಲೆ ವಿಧಿಸುವ ತೆರಿಗೆಗಳನ್ನು ಕೇಂದ್ರ ಮತ್ತು ರಾಜ್ಯಗಳು “ಒಟ್ಟಾಗಿ ಇಂಧನದ ಮೇಲಿನ ತೆರಿಗೆಯ ಪ್ರಮಾಣವನ್ನು ಕಡಿಮೆ ಮಾಡಬೇಕಾಗಿದೆ” ಎಂದು ಮೂಲಗಳು CNBC TV18ಗೆ ಹೇಳಿದೆ.
ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಇಂಧನ ಬೆಲೆಗಳ ಮೇಲೆ ತೆರಿಗೆ ವಿಧಿಸುವ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಂಪರ್ಕಿಸುತ್ತಿದ್ದಾರೆ. ತೈಲ ಸಚಿವಾಲಯವು ಪೆಟ್ರೋಲ್, ಡೀಸೆಲ್ ಬೆಲೆಗಳು ಕಡಿಮೆ ಆಗಬೇಕೆಂದು ಬಯಸಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: LPG Cylinder Price: ಮತ್ತೆ ಬೆಲೆ ಏರಿಕೆ ಬರೆ, ಎಲ್‌ಪಿಜಿ ಅಡುಗೆ ಸಿಲಿಂಡರ್ ಬೆಲೆ ಮತ್ತೆ 15 ರೂ. ಹೆಚ್ಚಳ