ದೆಹಲಿ ಜೂನ್ 20: ವಿವಾದಿತ ಯೂಟ್ಯೂಬರ್ ಮತ್ತು ಸ್ವತಂತ್ರ ಪತ್ರಕರ್ತ ಅಜಿತ್ ಭಾರ್ತಿ (Ajeet Bharti) ಅವರಿಗೆ ನೋಟಿಸ್ ನೀಡಲು ಕರ್ನಾಟಕ ಪೊಲೀಸ್ (Karnataka Police) ಉತ್ತರ ಪ್ರದೇಶಕ್ಕೆ ಹೋಗಿದ್ದಾರೆ. ಇದರ ಬೆನ್ನಲ್ಲೇ ನೋಯ್ಡಾದಲ್ಲಿರುವ ಭಾರ್ತಿ ನಿವಾಸದ ಮುಂದೆ ಕರ್ನಾಟಕ ಪೊಲೀಸರು ನಿಂತಿರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.ಕರ್ನಾಟಕದ ಪೊಲೀಸರು ಇಲ್ಲೇನು ಮಾಡುತ್ತಿದ್ದಾರೆ? ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಮಂದಿ ಪ್ರಶ್ನಿಸಿದ್ದಾರೆ. ಅಂದ ಹಾಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಕರ್ನಾಟಕ ಪೊಲೀಸರು ಇತ್ತೀಚೆಗೆ ಬೆಂಗಳೂರಿನಲ್ಲಿ ಅಜೀತ್ ಭಾರ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನ್ನ ನಿವಾಸಕ್ಕೆ ಬಂದ ಕರ್ನಾಟಕ ಪೊಲೀಸರನ್ನು ನೋಯ್ಡಾ ಪೊಲೀಸರು ತಮ್ಮ ಜತೆ ಕರೆದೊಯ್ದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಯೂಟ್ಯೂಬರ್‌ನ ಮನೆಯ ಹೊರಗೆ ಕರ್ನಾಟಕ ಪೊಲೀಸರು ಮತ್ತು ನೋಯ್ಡಾ ಪೊಲೀಸರ ನಡುವೆ ಮುಖಾಮುಖಿಯಾಗಿದೆ. ಕರ್ನಾಟಕ ಪೊಲೀಸರನ್ನು ತನ್ನ ಮನೆಗೆ ಪ್ರವೇಶಿಸಲು ಅವರು ಅನುಮತಿಸಲಿಲ್ಲ ಎಂದು ಭಾರ್ತಿ ಹೇಳಿದ್ದು, ನೋಯ್ಡಾ ಪೊಲೀಸರು ಸಮಯಕ್ಕೆ ಮಧ್ಯಪ್ರವೇಶಿಸಿ ಕ್ರಮ ಕೈಗೊಂಡರು ಎಂದು ಹೇಳಿದ್ದಾರೆ. ಅದೇ ವೇಳೆ ಪತ್ರಕರ್ತ, ಫ್ಯಾಕ್ಟ್ ಚೆಕರ್ ಮೊಹಮ್ಮದ್ ಜುಬೇರ್ ವಿರುದ್ಧ ಪ್ರಕರಣ ದಾಖಲಿಸುವುದಾಗಿಯೂ ಯೂಟ್ಯೂಬರ್ ತನ್ನ ಕಾಮೆಂಟ್‌ನಲ್ಲಿ ಹೇಳಿದ್ದಾರೆ.
Karnataka Police has reportedly reached the Uttar Pradesh home of famous RW Journalist @ajeetbharti to arrest him !
Local @Uppolice is reportedly not accompanying them.
What is the plan?
CM @myogiadityanath kindly take cognizance pic.twitter.com/iWz1gK4OjO
— Megh Updates 🚨™ (@MeghUpdates) June 20, 2024
ಗುರುವಾರ ಅಜಿತ್ ಭಾರ್ತಿ ಅವರ ಮನೆಯ ಬಾಲ್ಕನಿಯಲ್ಲಿ ಮತ್ತು ಕರ್ನಾಟಕ ಪೊಲೀಸ್ ಅಧಿಕಾರಿಗಳು ಅವರ ಮನೆಯ ಗೇಟ್‌ನಲ್ಲಿ ನಿಂತಿರುವುದನ್ನು ತೋರಿಸುವ ವಿಡಿಯೊ ಎಕ್ಸ್‌ನಲ್ಲಿ ವೈರಲ್ ಆಗಿತ್ತು. ನನಗೆ ನೋಟಿಸ್ ನೀಡಲು ಕರ್ನಾಟಕ ಪೊಲೀಸರಿಂದ ಮೂವರು ಪೊಲೀಸರು ತಮ್ಮ ನೋಯ್ಡಾ ನಿವಾಸಕ್ಕೆ ಅನಿರೀಕ್ಷಿತವಾಗಿ ಬಂದಿದ್ದಾರೆ ಎಂದು ಭಾರ್ತಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಕೆಲಸವನ್ನು ಅವರು ಇಮೇಲ್‌ನಲ್ಲಿಯೂ ಮಾಡಬಹುದಿತ್ತು. ಇದು ನನ್ನನ್ನು ಬೆದರಿಸುವ ಪ್ರಯತ್ನ ಎಂದು ಸೂಚಿಸುತ್ತಿದೆ ಎಂದಿದ್ದರೆ ಭಾರ್ತಿ.
“ನಾನು ಅವರಿಗೆ ತಿಳಿಸಿದ ತಕ್ಷಣ ನೋಯ್ಡಾ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಇ-ಮೇಲ್ ಮೂಲಕ ಮಾಡಬಹುದಾದ ಕೆಲಸವನ್ನು ಮಾಡಲು ಮೂರು ಪೊಲೀಸರನ್ನು ಕಳುಹಿಸಲಾಗಿದೆ. ನೋಯ್ಡಾ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿದ್ದಾರೆ. ಕೆಲವು ಕಾನ್ಸ್‌ಟೇಬಲ್‌ಗಳು ಅವರನ್ನು ಕರೆದೊಯ್ದಿದ್ದಕ್ಕಾಗಿ ಯೋಗಿ ಆದಿತ್ಯನಾಥ್ ಮತ್ತು ನೋಯ್ಡಾ ಪೊಲೀಸರಿಗೆ ಧನ್ಯವಾದಗಳು ಎಂದು ಅಜಿತ್ ಭಾರ್ತಿ ಹೇಳಿದ್ದಾರೆ.
ಬಿಜೆಪಿ ನಾಯಕರು ಮತ್ತು ಬಿಜೆಪಿ ಬೆಂಬಲಿಗರು ಅಜಿತ್ ಭಾರ್ತಿ ಮನೆಯ ಗೇಟ್ ಮುಂದೆ ಕರ್ನಾಟಕದ ಪೊಲೀಸರು ನಿಂತಿರುವ ವಿಡಿಯೊವನ್ನು ಹಂಚಿಕೊಂಡಿದ್ದು, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಯುಪಿ ಪೊಲೀಸರನ್ನು ಟ್ಯಾಗ್ ಮಾಡಿ ಈ ವಿಷಯದಲ್ಲಿ ತ್ವರಿತ ಕ್ರಮಕ್ಕೆ ಒತ್ತಾಯಿಸಿದ್ದರು.
“ನಮಸ್ಕಾರ ಯುಪಿ ಪೊಲೀಸ್, ನೋಯ್ಡಾ ಪೊಲೀಸ್, ಯೋಗಿ ಆದಿತ್ಯನಾಥ್. ನೋಯ್ಡಾದಲ್ಲಿ ಅಜಿತ್ ಭಾರ್ತಿ ಅವರನ್ನು ಅಕ್ರಮವಾಗಿ ಬಂಧಿಸಲು ಕರ್ನಾಟಕ ಪೊಲೀಸರು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ. ಇದು ರಾಜ್ಯಗಳ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಅಪರಾಧಿಗಳನ್ನು ತಕ್ಷಣವೇ ಬಂಧಿಸಲು ನಿಮ್ಮನ್ನು ವಿನಂತಿಸುತ್ತೇವೆ ಎಂದು ಲೇಖಕ ಮತ್ತು ಸಾಮಾಜಿಕ ಮಾಧ್ಯಮ ವಿಮರ್ಶಕ ಅಭಿಜಿತ್ ಅಯ್ಯರ್-ಮಿತ್ರಾ ಪೋಸ್ಟ್ ಮಾಡಿದ್ದಾರೆ.
ನೂಪುರ್ ಶರ್ಮಾ ಟ್ವೀಟ್
As usual, Karnataka police has reached @ajeetbharti’s residence to harass him after Mohammad Zubair posted a video, where Ajeet was merely quoting Pramod Krishnam.
Using intimidatory tactics against those who don’t submit seems to be the norm. Needless to say, Ajeet has all my…
— Nupur J Sharma (@UnSubtleDesi) June 20, 2024
ಎಂದಿನಂತೆ, ಮೊಹಮ್ಮದ್ ಜುಬೈರ್ ವಿಡಿಯೊವನ್ನು ಪೋಸ್ಟ್ ಮಾಡಿದ ನಂತರ ಕರ್ನಾಟಕ ಪೊಲೀಸರು ಅಜಿತ್ ಭಾರ್ತಿ ಅವರ ನಿವಾಸಕ್ಕೆ ತಲುಪಿದ್ದಾರೆ. ಅಲ್ಲಿ ಅಜೀತ್ ಕೇವಲ ಪ್ರಮೋದ್ ಕೃಷ್ಣಂ ಅವರನ್ನು ಉಲ್ಲೇಖಿಸಿದ್ದಾರೆ. ಒಪ್ಪಿಸದವರ ವಿರುದ್ಧ ಬೆದರಿಸುವ ತಂತ್ರಗಳನ್ನು ಬಳಸುವುದು ರೂಢಿಯಂತೆ ತೋರುತ್ತದೆ. ಅಜೀತ್‌ಗೆ ನನ್ನ ಎಲ್ಲಾ ಬೆಂಬಲವಿದೆ ಎಂದು ಹೇಳಬೇಕಾಗಿಲ್ಲ” ಎಂದು OpIndia ಪ್ರಧಾನ ಸಂಪಾದಕಿ ನೂಪುರ್ ಜೆ ಶರ್ಮಾ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಹಸು ಸೇರಿದಂತೆ ಮೂಕ ಪ್ರಾಣಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಭೂರಾ ಶೇಖ್, ಯೋಗಿಗೆ ಪತ್ರ ಬರೆದ ವಿಎಚ್ಪಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧು ಸುಳ್ಳು ಆರೋಪ ಮಾಡಿದ್ದಕ್ಕಾಗಿ ಕರ್ನಾಟಕದ ಬೆಂಗಳೂರಿನಲ್ಲಿ ಯೂಟ್ಯೂಬರ್ ಅಜೀತ್ ಭಾರ್ತಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಉದ್ಘಾಟನೆಗೊಂಡ ಅಯೋಧ್ಯೆಯ ರಾಮಮಂದಿರದ ಜಾಗದಲ್ಲಿ ಬಾಬರಿ ಮಸೀದಿಯನ್ನು ಮರಳಿ ತರುವುದು ರಾಹುಲ್ ಗಾಂಧಿಯವರ ಭವಿಷ್ಯದ ಯೋಜನೆ ಎಂದು ಭಾರ್ತಿ ಹೇಳಿದ್ದರು.
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಕಾನೂನು ಘಟಕದ ಕಾರ್ಯದರ್ಶಿಯಾಗಿರುವ ಬಿಕೆ ಬೋಪಣ್ಣ ಅವರ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.ಭಾರ್ತಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ