Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಟ್ ಪೇಪರ್ ಸೋರಿಕೆಯಲ್ಲಿ ತೇಜಸ್ವಿ ಯಾದವ್ ಆಪ್ತನ ಕೈವಾಡ; ಬಿಹಾರದ ಡಿಸಿಎಂ ಆರೋಪ

ನೀಟ್ ಪೇಪರ್ ಲೀಕ್ ಮಾಸ್ಟರ್ ಮೈಂಡ್ ಆಗಿರುವ ಸಿಕಂದರ್ ಯಾದವೇಂದು ತೇಜಸ್ವಿ ಯಾದವ್ ಅವರ ಆಪ್ತ ಪ್ರೀತಮ್ ಕುಮಾರ್ ಅವರ ಹತ್ತಿರದ ಸಂಬಂಧಿಯಾಗಿದ್ದಾರೆ ಎಂದು ಬಿಹಾರದ ಉಪ ಮುಖ್ಯಮಂತ್ರಿ ವಿಜಯ್ ಸಿನ್ಹಾ ಹೇಳಿದ್ದಾರೆ. ತೇಜಸ್ವಿ ಯಾದವ್ ಅವರ ಪಿಎಸ್ ಪ್ರೀತಮ್ ಯಾದವೇಂದು ಅವರಿಗಾಗಿ ರೂಂ ಒಂದನ್ನು ಕಾಯ್ದಿರಿಸಿದ್ದಾರೆ ಎಂದು ಡಿಸಿಎಂ ವಿಜಯ್ ಸಿನ್ಹಾ ಹೇಳಿಕೊಂಡಿದ್ದಾರೆ.

ನೀಟ್ ಪೇಪರ್ ಸೋರಿಕೆಯಲ್ಲಿ ತೇಜಸ್ವಿ ಯಾದವ್ ಆಪ್ತನ ಕೈವಾಡ; ಬಿಹಾರದ ಡಿಸಿಎಂ ಆರೋಪ
ತೇಜಸ್ವಿ ಯಾದವ್
Follow us
ಸುಷ್ಮಾ ಚಕ್ರೆ
|

Updated on: Jun 20, 2024 | 8:21 PM

ನವದೆಹಲಿ: ದೇಶಾದ್ಯಂತ NEET ಪರೀಕ್ಷೆ ಬಗ್ಗೆ ವಿವಾದ ಭುಗಿಲೆದ್ದಿದೆ. ಇದೀಗ ಪೇಪರ್ ಸೋರಿಕೆ ವಿಚಾರವಾಗಿ ಬಿಹಾರದ ಉಪಮುಖ್ಯಮಂತ್ರಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ನೀಟ್ ಪೇಪರ್ ಸೋರಿಕೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರ ಆಪ್ತರೊಬ್ಬರು ಭಾಗಿಯಾಗಿದ್ದಾರೆ ಎಂದು ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ (Vijay Sinha) ಹೇಳಿದ್ದಾರೆ.

ನೀಟ್ ಪೇಪರ್ ಸೋರಿಕೆ ವಿವಾದ ತೀವ್ರಗೊಳ್ಳುತ್ತಿದೆ. ಒಂದೆಡೆ ದೇಶದ ಸುಪ್ರೀಂ ಕೋರ್ಟ್​ನಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದ್ದರೆ, ಇನ್ನೊಂದೆಡೆ ಈ ಪ್ರಕರಣದ ತನಿಖೆಯ ವ್ಯಾಪ್ತಿ ಕೂಡ ಹೆಚ್ಚುತ್ತಿದೆ. ಪೇಪರ್ ಸೋರಿಕೆಯನ್ನು ಪಾಟ್ನಾದ ವಿದ್ಯಾರ್ಥಿಯೊಬ್ಬರು ಒಪ್ಪಿಕೊಂಡಿದ್ದಾರೆ. ಈ ಮಧ್ಯೆ, ಈ ವಿಷಯಕ್ಕೆ ರಾಜಕೀಯ ಆಯಾಮವೂ ಸಿಕ್ಕಿದೆ. ಲಾಲು ಪ್ರಸಾದ್ ಯಾದವ್ ಕುಟುಂಬದ ವಿರುದ್ಧ ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ ಗಂಭೀರ ಆರೋಪ ಮಾಡಿದ್ದಾರೆ. ಪೇಪರ್ ಸೋರಿಕೆಗೂ ತೇಜಸ್ವಿ ಯಾದವ್ ಅವರ ಆಪ್ತ ಕಾರ್ಯದರ್ಶಿಗೂ ಸಂಬಂಧವಿದೆ ಎಂದು ವಿಜಯ್ ಸಿನ್ಹಾ ಹೇಳಿದ್ದಾರೆ.

NEET ಅಭ್ಯರ್ಥಿ ಅನುರಾಗ್ ಯಾದವ್ ತನ್ನ ಚಿಕ್ಕಪ್ಪ ಸಿಕಂದರ್ ಯಾದವೇಂದು ತನಗೆ ಸೋರಿಕೆಯಾದ ಪತ್ರಿಕೆಯನ್ನು ನೀಡಿದ್ದಾನೆ. ಇದು ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳಂತೆಯೇ ಇತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ನೀಟ್ ಪೇಪರ್ ಸೋರಿಕೆಗೆ ತೇಜಸ್ವಿ ಯಾದವ್ ಅವರ ಸಹಾಯಕನೊಂದಿಗೆ ಸಂಬಂಧವಿದೆ ಎಂದು ಬಿಹಾರದ ಉಪಮುಖ್ಯಮಂತ್ರಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಸಲ್ಲಿಸಿದ ದಾಖಲೆಯೇ ನಕಲಿ; ಎನ್​​ಟಿಎ ವಿರುದ್ಧ ದೂರು ನೀಡಿದ್ದ ನೀಟ್ ಆಕಾಂಕ್ಷಿಯ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಆಪ್ತ ಪ್ರೀತಮ್ ಕುಮಾರ್ ಅವರು ನೀಟ್ ಪರೀಕ್ಷೆಯ ಪೇಪರ್ ಸೋರಿಕೆ ಮತ್ತು ಅವ್ಯವಹಾರಗಳಿಗೆ ಸಂಬಂಧ ಹೊಂದಿದ್ದಾರೆ ಎಂದು ಬಿಹಾರ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಹೇಳಿದ್ದಾರೆ.

ಬಿಹಾರ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ ಅವರು ನೀಟ್ ಪೇಪರ್ ಸೋರಿಕೆ ಪ್ರಕರಣದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಆಪ್ತ ಕಾರ್ಯದರ್ಶಿ ಅವರು ನೀಟ್ ಪೇಪರ್ ಸೋರಿಕೆಯ ಆರೋಪಿ ಸಿಕಂದರ್ ಯಾದವೇಂದು ಅವರಿಗೆ ಅತಿಥಿ ಗೃಹವನ್ನು ಕಾಯ್ದಿರಿಸಿದ್ದಾರೆ ಎಂದು ವಿಜಯ್ ಸಿನ್ಹಾ ಹೇಳಿದ್ದಾರೆ. ತೇಜಸ್ವಿ ಯಾದವ್ ಅವರ ಕಾರ್ಯದರ್ಶಿ ಪ್ರೀತಮ್ ಯಾದವ್ ಅವರ ಕೋರಿಕೆಯ ಮೇರೆಗೆ ಸಿಕಂದರ್ ಅವರಿಗೆ ಅತಿಥಿ ಗೃಹವನ್ನು ಕಾಯ್ದಿರಿಸಲಾಗಿದೆ ಎಂದು ವಿಜಯ್ ಸಿನ್ಹಾ ಹೇಳಿದ್ದಾರೆ.

ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಅವರ ಪಿಎ ಪ್ರೀತಮ್ ಕುಮಾರ್ ಅವರ ಆದೇಶದ ಮೇರೆಗೆ ನೀಟ್ ಪೇಪರ್ ಸೋರಿಕೆ ಆರೋಪಿ ಸಿಕಂದರ್ ಯಾದವೇಂದು ಹೆಸರಿನಲ್ಲಿ ಅತಿಥಿ ಗೃಹವನ್ನು ಕಾಯ್ದಿರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ ಹೇಳಿದ್ದಾರೆ. ಪ್ರೀತಮ್ ಕುಮಾರ್ ಅವರು ಮೇ 1ರಂದು ಮತ್ತು ಮೇ 4ರಂದು 2 ಬಾರಿ ಅತಿಥಿ ಗೃಹವನ್ನು ಕಾಯ್ದಿರಿಸುವಂತೆ ಕರೆ ನೀಡಿದ್ದಾರೆ ಎಂದು ವಿಜಯ್ ಸಿನ್ಹಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: NEET-UG 2024: ನೀಟ್ ಅಕ್ರಮ: 3 ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ತಡೆ

ತೇಜಸ್ವಿ ಯಾದವ್ ಅವರ ಪಿಎಸ್ ಪ್ರೀತಮ್ ಅವರಿಗೆ ಕೊಠಡಿ ಕಾಯ್ದಿರಿಸಲು ಕರೆ ಬಂದಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸಿಕಂದರ್ ಯಾದವೇಂದು ಎಂಬುವವರ ಹೆಸರಿನಲ್ಲಿ ಕೊಠಡಿ ಕಾಯ್ದಿರಿಸಲು ಕರೆ ಬಂದಿತ್ತು. ಇದರೊಂದಿಗೆ ವಿಜಯ್ ಸಿನ್ಹಾ ಅವರು ಪತ್ರಿಕಾಗೋಷ್ಠಿಯಲ್ಲಿಯೇ ಎಲ್ಲಾ ಮೂವರು ಪಿಡಬ್ಲ್ಯುಡಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಸಿಕಂದರ್ ಯಾದವೇಂದು ಮಂಜೂರಾತಿ ನೀಡದೆ ಹೇಗೆ ಆದೇಶ ಹೊರಡಿಸಿದ್ದಾರೆ? ವಾರಗಟ್ಟಲೇ ಸುದ್ದಿ ಹರಿದಾಡುತ್ತಿದ್ದರೂ ಏಕೆ ಮೌನವಾಗಿದ್ದಾರೆ? ಎಂಬ ಆರೋಪ ಅಧಿಕಾರಿಗಳ ಮೇಲಿದೆ.

ಕಳೆದ ಒಂದು ವರ್ಷದಲ್ಲಿ ಅತಿಥಿ ಗೃಹದಲ್ಲಿ ಉಳಿದುಕೊಂಡಿರುವವರ ವಿವರಗಳನ್ನು ಹುಡುಕಲಾಗುತ್ತಿದೆ ಎಂದು ವಿಜಯ್ ಸಿನ್ಹಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ತೇಜಸ್ವಿ ಯಾದವ್ ಅವರ ಪಿಎ ಪ್ರೀತಮ್ ಕುಮಾರ್ ಜನರನ್ನು ಇಲ್ಲಿಯೇ ಇರುವಂತೆ ಮಾಡಿದ್ದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿಜಯ್ ಸಿನ್ಹಾ ಹೇಳಿದ್ದಾರೆ.

ಆರೋಪಿ ಸಿಕಂದರ್ ಯಾರು?:

ನೀಟ್ ಪೇಪರ್ ಸೋರಿಕೆ ಕುರಿತು ಕ್ರಮ ಕೈಗೊಂಡಿರುವ ಪೊಲೀಸರು ಇತ್ತೀಚೆಗೆ ಸಿಕಂದರ್ ಯಾದವೇಂದು ಅವರನ್ನು ಬಂಧಿಸಿದ್ದಾರೆ. ಪೇಪರ್ ಲೀಕ್ ಪ್ರಕರಣದ ಕಿಂಗ್ ಪಿನ್ ಸಿಕಂದರ್ ಯಾದವೇಂದು ಎಂದು ಹೇಳಲಾಗುತ್ತಿದೆ. ಸಿಕಂದರ್ ಯಾದವೇಂದು ಅವರ ಹೆಸರು ಈ ಹಿಂದೆಯೂ ಹಲವು ಹಗರಣಗಳಲ್ಲಿ ದಾಖಲಾಗಿದೆ. ಸಿಕಂದರ್ 3 ಕೋಟಿ ರೂ.ಗಳ ಎಲ್ ಇಡಿ ಹಗರಣದಲ್ಲೂ ಆರೋಪಿಯಾಗಿದ್ದು, ಅದಕ್ಕಾಗಿ ಜೈಲು ಸೇರಬೇಕಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ