ಸಿಖ್​ ಯಾತ್ರಾರ್ಥಿಗಳಿಗೆ ಶುಭ ಸಮಾಚಾರ; ಕರ್ತಾರ್​ಪುರ ಕಾರಿಡಾರ್​ನ್ನು ನಾಳೆಯಿಂದ ತೆರೆಯಲು ಕೇಂದ್ರ ಸರ್ಕಾರ ನಿರ್ಧಾರ

| Updated By: Lakshmi Hegde

Updated on: Nov 16, 2021 | 5:04 PM

ಪಂಜಾಬ್​​ನ ಗುರುದಾಸ್​​ಪುರದಲ್ಲಿರುವ ದೇರಾ ಬಾಬಾ ನಾನಕ್​ ಮತ್ತು ಪಾಕಿಸ್ತಾನದ ಕರ್ತಾರ್​ಪುರ್​​ನಲ್ಲಿರುವ ದರ್ಬಾರ್​ ಸಾಹೀಬ್​​ ಗುರುದ್ವಾರಗಳನ್ನು ಸಂಪರ್ಕಿರುವ ಈ ಕಾರಿಡಾರ್​ 2019ರಲ್ಲಿ ಉದ್ಘಾಟನೆಯಾಗಿದೆ.

ಸಿಖ್​ ಯಾತ್ರಾರ್ಥಿಗಳಿಗೆ ಶುಭ ಸಮಾಚಾರ; ಕರ್ತಾರ್​ಪುರ ಕಾರಿಡಾರ್​ನ್ನು ನಾಳೆಯಿಂದ ತೆರೆಯಲು ಕೇಂದ್ರ ಸರ್ಕಾರ ನಿರ್ಧಾರ
ಕರ್ತಾರ್​ಪುರ ಗುರುದ್ವಾರ
Follow us on

ನಾಳೆ (ಬುಧವಾರ-17-11-2021)ಕರ್ತಾರ್​ಪುರ ಸಾಹೀಬ್​ ಕಾರಿಡಾರ್​​ ತೆರೆಯಲು  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.  ನವೆಂಬರ್ 19ರಂದು ನಡೆಯಲಿರುವ ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ, ಲಕ್ಷಾಂತರ ಸಿಖ್​​ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಇದೀಗ ಕರ್ತಾರ್​ಪುರ ಸಾಹೀಬ್​ ಕಾರಿಡಾರ್​ ತೆರೆಯಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. 

ಈ ಬಗ್ಗೆ ಗೃಹ ಸಚಿವ ಅಮಿತ್​ ಶಾ ಎರಡು ಟ್ವೀಟ್​ಗಳ ಮೂಲಕ ತಿಳಿಸಿದ್ದಾರೆ. ಮೊದಲ ಟ್ವೀಟ್​ನಲ್ಲಿ, ನಾಳೆಯಿಂದ ಕರ್ತಾರ್​ಪುರ ಸಾಹೀಬ್​ ಕಾರಿಡಾರ್​ನ್ನು ಮತ್ತೆ ತೆರೆಯಲು ನರೇಂದ್ರ ಮೋದಿ ಸರ್ಕಾರ ನಿರ್ಧಾರ ಮಾಡಿದೆ. ಇದು ಗುರುನಾನಕ್​ ದೇವ್​ ಜಿ ಮತ್ತು ಸಿಖ್​ ಸಮುದಾಯದ ಬಗ್ಗೆ ಮೋದಿ ಸರ್ಕಾರಕ್ಕೆ ಇರುವ ಅಪಾರ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ. ಇನ್ನೊಂದು ಟ್ವೀಟ್​​ನಲ್ಲಿ,  ನವೆಂಬರ್​ 19ರಂದು ಗುರುನಾನಕ್​ ದೇವ್​ ಜಿ ಜನ್ಮಜಯಂತಿ ನಿಮಿತ್ತ ಪ್ರಕಾಶ ಉತ್ಸವ ಆಚರಿಸಲು ದೇಶದಲ್ಲಿ ಸಿದ್ಧತೆ ನಡೆಯುತ್ತಿದೆ. ಇದೇ ಹೊತ್ತಲ್ಲಿ ಕರ್ತಾರಪುರ ಕಾರಿಡಾರ್​ ತೆರೆಯಲು ಮೋದಿ ಸರ್ಕಾರ ನಿರ್ಧಾರ ಮಾಡಿದ್ದು, ಸಿಖ್​ ಸಮುದಾಯದವರಿಗೆ ಇನ್ನಷ್ಟು ಸಂತೋಷದಿಂದ ಉತ್ಸವ ಆಚರಿಸಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಪಂಜಾಬ್​​ನ ಗುರುದಾಸ್​​ಪುರದಲ್ಲಿರುವ ದೇರಾ ಬಾಬಾ ನಾನಕ್​ ಮತ್ತು ಪಾಕಿಸ್ತಾನದ ಕರ್ತಾರ್​ಪುರ್​​ನಲ್ಲಿರುವ ದರ್ಬಾರ್​ ಸಾಹೀಬ್​​ ಗುರುದ್ವಾರಗಳನ್ನು ಸಂಪರ್ಕಿರುವ ಈ ಕಾರಿಡಾರ್​ 2019ರಲ್ಲಿ ಉದ್ಘಾಟನೆಯಾಗಿದೆ. ಕರ್ತಾರಪುರ್​​ನಲ್ಲಿರುವ ಗುರುದ್ವಾರಕ್ಕೆ ಭಾರತದ ಸಿಖ್​ ಯಾತ್ರಾರ್ಥಿಗಳು ವೀಸಾ ಇಲ್ಲದೆ ಹೋಗಬಹುದಾದ ವ್ಯವಸ್ಥೆಯಾಗಿದೆ.  ಕೊವಿಡ್​ 19 ಕಾರಣದಿಂದಾಗಿ 2020ರ ಮಾರ್ಚ್​ 20ರಿಂದ ಈ ಕಾರಿಡಾರ್​ನ್ನು ಮುಚ್ಚಲಾಗಿತ್ತು. ಇದೀಗ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಮತ್ತೆ ಓಪನ್ ಮಾಡಲಾಗುತ್ತಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ನಿಮ್ಮ ವಿಡಿಯೋಗೆ ಯೂಟ್ಯೂಬ್ ವೇದಿಕೆಯಲ್ಲಿ ಡಿಸ್ಲೈಕ್​ಗಳು ಬರುತ್ತಿದ್ದರೆ ಚಿಂತೆ ಬೇಡ, ಇನ್ನು ಮುಂದೆ ಆ ಕೌಂಟರ್ ಕಾಣದಂತೆ ಮರೆಯಾಗುವುದು