ನೆಲೆ ಕಳೆದುಕೊಂಡ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿಗಳು
ಅಸ್ಸಾಂ: ರಾಜ್ಯದಲ್ಲಿ ಈಗಾಗಲೆ ಮುಂಗಾರು ರುದ್ರನರ್ತನ ತಾಳಿದ್ದು ಸುಮಾರು 21 ಲಕ್ಷ ಜನರು ತಮ್ಮ ನೆಲೆ ಕಳೆದೆಕೊಂಡು ಗೊಳಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅಸ್ಸಾಂನ ಶೋಕ ನದಿ ಬ್ರಹ್ಮಪುತ್ರ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜನರ ಬದುಕು ಬೀದಿಗೆ ಬಿದ್ದಿದೆ. ಅಲ್ಲದೆ ಈ ಭೀಕರ ಪ್ರವಾಹದಿಂದಾಗಿ ವನ್ಯಮೃಗಗಳು ನಲುಗಿ ಹೋಗಿವೆ. ಅಸ್ಸಾಂನ 27 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು ನಾಗಾಂವ್ ಜಿಲ್ಲೆಯಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಶೇ. 80ರಷ್ಟು ಮುಳುಗಡೆಯಾಗಿದೆ. ಇದರಿಂದ ಉದ್ಯಾನವನದಲ್ಲಿ ಸುಮಾರು 66 ಪ್ರಾಣಿಗಳು ಸಾವನ್ನಪ್ಪಿದ್ದು, 170 […]
ಅಸ್ಸಾಂ: ರಾಜ್ಯದಲ್ಲಿ ಈಗಾಗಲೆ ಮುಂಗಾರು ರುದ್ರನರ್ತನ ತಾಳಿದ್ದು ಸುಮಾರು 21 ಲಕ್ಷ ಜನರು ತಮ್ಮ ನೆಲೆ ಕಳೆದೆಕೊಂಡು ಗೊಳಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅಸ್ಸಾಂನ ಶೋಕ ನದಿ ಬ್ರಹ್ಮಪುತ್ರ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜನರ ಬದುಕು ಬೀದಿಗೆ ಬಿದ್ದಿದೆ. ಅಲ್ಲದೆ ಈ ಭೀಕರ ಪ್ರವಾಹದಿಂದಾಗಿ ವನ್ಯಮೃಗಗಳು ನಲುಗಿ ಹೋಗಿವೆ.
ಅಸ್ಸಾಂನ 27 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು ನಾಗಾಂವ್ ಜಿಲ್ಲೆಯಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಶೇ. 80ರಷ್ಟು ಮುಳುಗಡೆಯಾಗಿದೆ. ಇದರಿಂದ ಉದ್ಯಾನವನದಲ್ಲಿ ಸುಮಾರು 66 ಪ್ರಾಣಿಗಳು ಸಾವನ್ನಪ್ಪಿದ್ದು, 170 ಕ್ಕೂ ಹೆಚ್ಚು ಪ್ರಾಣಿಗಳನ್ನ ಪ್ರವಾಹದಿಂದ ರಕ್ಷಿಸಲಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಪ್ರವಾಹದಿಂದಾಗಿ ಉದ್ಯಾನವನದ ಪ್ರಾಣಿಗಳು ನೆಲೆ ಕಳೆದುಕೊಂಡಿದ್ದು, ಅವು ಹೇಳ ತೀರದ ಕಷ್ಟ ಪಡುತ್ತಿವೆ.
Published On - 5:04 pm, Wed, 15 July 20