ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 5ರಂದು ಉತ್ತರಾಖಂಡ ರಾಜ್ಯದ ಕೇದಾರನಾಥಕ್ಕೆ ಭೇಟಿ ನೀಡಲಿದ್ದಾರೆ. ನ. 5ರಂದು ಕೇದಾರನಾಥದಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಳವನ್ನು ಭಕ್ತರ ದರ್ಶನಕ್ಕೆ ಅನಾವರಣಗೊಳಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೇದಾರನಾಥಕ್ಕೆ ಭೇಟಿ ನೀಡುವ ದಿನವೇ ಬಿಜೆಪಿ ನಾಯಕರು ದೇಶದ ನೂರು ಪವಿತ್ರ ಸ್ಥಳಗಳಿಗೆ ಭೇಟಿ ನೀಡುವರು. ಕರ್ನಾಟಕದ ಶೃಂಗೇರಿಗೆ ನವೆಂಬರ್ 5ರಂದು ಭಕ್ತರು ಭೇಟಿ ನೀಡುವಂತೆ ಬಿಜೆಪಿ ಆಹ್ವಾನಿಸಿದೆ.
ಶ್ರೀನಗರದ ಪ್ರಸಿದ್ಧ ಶಂಕರಾಚಾರ್ಯ ದೇವಸ್ಥಾನದಿಂದ ಹಿಡಿದು ಕೇರಳದ ಎರ್ನಾಕುಲಂನ ಆದಿ ಶಂಕರಾಚಾರ್ಯರ ಜನ್ಮಸ್ಥಳ ಮತ್ತು ಗುಜರಾತ್‌ನ ಸೋಮನಾಥ ದೇವಸ್ಥಾನದವರೆಗೆ ಹಲವಾರು ಕೇಂದ್ರ ಸಚಿವರು, ಬಿಜೆಪಿ ಸಂಸದರು ಮತ್ತು ಬಿಜೆಪಿಯ ಹಿರಿಯ ನಾಯಕರು ನವೆಂಬರ್ 5ರಂದು ದೇಶದ 100ಕ್ಕೂ ಹೆಚ್ಚು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ನವೆಂಬರ್ 5ರಂದು ಉತ್ತರಾಖಂಡದ ಕೇದಾರನಾಥಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಅಂದೇ 100ಕ್ಕೂ ಹೆಚ್ಚು ಪವಿತ್ರ ಸ್ಥಳಗಳಿಗೆ ಬಿಜೆಪಿ ನಾಯಕರು ಭೇಟಿ ನೀಡುವಂತೆ ಸೂಚನೆ ನೀಡಲಾಗಿದೆ. ಇದಕ್ಕಾಗಿ ಬೇಕಾದ ಸಿದ್ಧತೆಗಳನ್ನು ಬಿಜೆಪಿ ಮಾಡಿಕೊಂಡಿದೆ.
ರಾಷ್ಟ್ರವ್ಯಾಪಿ ಕಾರ್ಯಕ್ರಮದ ಭಾಗವಾಗಿ, ಬಿಜೆಪಿಯು 12 ಜ್ಯೋತಿರ್ಲಿಂಗಗಳನ್ನು ಹೊರತುಪಡಿಸಿ ಪುರಿ (ಒಡಿಶಾ), ಶೃಂಗೇರಿ (ಕರ್ನಾಟಕ), ದ್ವಾರಕಾ (ಗುಜರಾತ್) ಮತ್ತು ಜ್ಯೋತಿರ್ಮಠ (ಉತ್ತರಾಖಂಡ)ದಲ್ಲಿರುವ ಆದಿ ಶಂಕರಾಚಾರ್ಯರಿಗೆ ಸಂಬಂಧಿಸಿದ ನಾಲ್ಕು ಧಾಮಗಳಿಗೆ ಸಾಧುಗಳು ಮತ್ತು ಭಕ್ತರನ್ನು ಆಹ್ವಾನಿಸಿದೆ. ಗುಜರಾತಿನ ಸೋಮನಾಥ ದೇವಾಲಯ ಮತ್ತು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಮತ್ತು 87 ಇತರ ಪ್ರಮುಖ ದೇವಾಲಯಗಳನ್ನು ಆದಿ ಶಂಕರಾಚಾರ್ಯರು ದೇಶಾದ್ಯಂತ ತಮ್ಮ ಪ್ರಯಾಣದ ಸಮಯದಲ್ಲಿ ನಡೆದ ಮಾರ್ಗದಲ್ಲಿ ಸ್ಥಾಪಿಸಲಾಯಿತು.
ಪಕ್ಷದ ಮೂಲಗಳು ಹೇಳುವ ಪ್ರಕಾರ, ಕೇಂದ್ರ ಸಚಿವರು ಮತ್ತು ಹಿರಿಯ ಬಿಜೆಪಿ ಸಂಸದರು ಮತ್ತು ಪಕ್ಷದ ಮುಖಂಡರು ಪ್ರಮುಖ ಸ್ಥಳಗಳಿಗೆ ಪ್ರಯಾಣಿಸಲಿದ್ದಾರೆ. ನವೆಂಬರ್ 5ರಂದು ಬೆಳಿಗ್ಗೆ ಕೇದಾರನಾಥದಲ್ಲಿ ಪ್ರಧಾನ ಮಂತ್ರಿ ಮೋದಿ ಎರಡು ಗಂಟೆಗಳ ಕಾಲ ಅಲ್ಲಿ ಉಪಸ್ಥಿತರಿರುತ್ತಾರೆ. ಈ ಹೆಚ್ಚಿನ ನಾಯಕರು ತಮ್ಮ ತವರು ರಾಜ್ಯಗಳಲ್ಲಿರುವ ಪವಿತ್ರ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಕೇದಾರನಾಥದಿಂದ ಪ್ರಧಾನಮಂತ್ರಿ ಕಾರ್ಯಕ್ರಮದ ನೇರಪ್ರಸಾರಕ್ಕಾಗಿ ಈ ಎಲ್ಲಾ ಸ್ಥಳಗಳಲ್ಲಿ ಎಲ್‌ಇಡಿಗಳು ಮತ್ತು ದೊಡ್ಡ ಪರದೆಗಳನ್ನು ಹಾಕಲಾಗುತ್ತಿದೆ. ಪ್ರಧಾನಮಂತ್ರಿ ಮೋದಿ, ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪುನರ್ನಿರ್ಮಾಣದ ಸಮಾಧಿ (2013ರ ಪ್ರವಾಹದ ನಂತರ) ಮತ್ತು ಅವರ ಪ್ರತಿಮೆ ಸೇರಿದಂತೆ ಹಲವಾರು ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಾಷಣವನ್ನೂ ಮಾಡಲಿದ್ದಾರೆ.
ಉತ್ತರಾಖಂಡ ಸರ್ಕಾರದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹಲವಾರು ವಿಐಪಿಗಳು ಮತ್ತು ಇತರ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪ್ರಧಾನಿಯವರ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸುವುದರೊಂದಿಗೆ ಎಲ್ಲ ಕೆಲಸಗಳನ್ನು ಮಾಡಿದ್ದಾರೆ. ದೇಶದ ವಿವಿಧ ಅಖಾಡಗಳ ಮಹಾಮಂಡಲೇಶ್ವರರನ್ನು (ಮುಖ್ಯಸ್ಥರು) ಕೇದಾರನಾಥದಲ್ಲಿ ಪ್ರಧಾನಮಂತ್ರಿ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಆಹ್ವಾನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಭೇಟಿ ಮತ್ತು ದೇಶದಾದ್ಯಂತ ಬಿಜೆಪಿಯ ಮೆಗಾ ಕಾರ್ಯಕ್ರಮವು ಉತ್ತರಾಖಂಡ ಚುನಾವಣೆಗೆ ತಿಂಗಳುಗಳ ಮುಂಚಿತವಾಗಿ ನಡೆಯುತ್ತಿದೆ. ಚಾರ್ ಧಾಮ್‌ಗಳನ್ನು ನಿರ್ವಹಿಸಲು ದೇವಸ್ಥಾನ ಕಾಯ್ದೆಯನ್ನು ಸ್ಥಾಪಿಸುವ ಕುರಿತು ಬಿಜೆಪಿಯು ರಾಜ್ಯದ ಸ್ಥಳೀಯ ಅರ್ಚಕರಿಂದ ಆಕ್ಷೇಪಣೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಪ್ರಧಾನಿ ಮೋದಿ ಕೇದಾರನಾಥಕ್ಕೆ ಭೇಟಿ ನೀಡುತ್ತಿದ್ದಾರೆ. ಮೊನ್ನೆ ಕೇದಾರನಾಥ್ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದ ಉತ್ತರಾಖಂಡ್ ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಗೆ ಕೇದಾರನಾಥ್ ದೇವಸ್ಥಾನದ ಬಳಿ ಅರ್ಚಕರು ಘೇರಾವ್ ಹಾಕಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇದಾರನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಮತ್ತು ನಂತರ ಶ್ರೀ ಆದಿ ಶಂಕರಾಚಾರ್ಯ ಸಮಾಧಿಯನ್ನು ಉದ್ಘಾಟಿಸಲಿದ್ದಾರೆ ಮತ್ತು ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ ಎಂದು ಪಿಎಂಒ ಅಧಿಕೃತವಾಗಿ ಹೇಳಿಕೆಯಲ್ಲಿ ತಿಳಿಸಿದೆ.
2013ರ ಪ್ರವಾಹದಲ್ಲಿ ನಾಶವಾದ ನಂತರ ಸಮಾಧಿಯನ್ನು ಪುನರ್ ನಿರ್ಮಿಸಲಾಯಿತು. ಪ್ರಧಾನಮಂತ್ರಿಯವರ ಮಾರ್ಗದರ್ಶನದಲ್ಲಿ ಸಂಪೂರ್ಣ ಪುನರ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ, ಅವರು ಯೋಜನೆಯ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿದ್ದಾರೆ ಮತ್ತು ಮೇಲ್ವಿಚಾರಣೆ ಮಾಡಿದ್ದಾರೆ ಎಂದು ಪಿಎಂಒ ಹೇಳಿದೆ. ಪ್ರಧಾನಮಂತ್ರಿಯವರು ಸರಸ್ವತಿ ಆಸ್ತಪಥದ ಉದ್ದಕ್ಕೂ ಕಾರ್ಯಗತಗೊಂಡ ಮತ್ತು ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸುತ್ತಾರೆ . ಸಾರ್ವಜನಿಕ ಱಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ. ಪ್ರಧಾನಿಯಾಗಿ ಮೋದಿಯವರು ಕೇದಾರನಾಥಕ್ಕೆ ನೀಡುತ್ತಿರುವ ಐದನೇ ಭೇಟಿ ಇದಾಗಿದೆ. ಸರಸ್ವತಿ ತಡೆಗೋಡೆ ಆಸ್ಥಾಪತ್ ಮತ್ತ ಘಾಟ್ ಗಳ ತಡೆಗೋಡೆ ಆಸ್ಥಾಪತ್, ತೀರ್ಥ ಪುರೋಹಿತ ಮನೆಗಳು ಮತ್ತು ಮಂದಾಕಿನಿ ನದಿಯ ಗರುಡ್ ಚಟ್ಟಿ ಸೇತುವೆ ಸೇರಿದಂತೆ ಪೂರ್ಣಗೊಂಡಿರುವ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. 130 ಕೋಟಿಗೂ ಅಧಿಕ ವೆಚ್ಚದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.
ಸಂಗಮ ಘಾಟ್‌ನ ಪುನರಾಭಿವೃದ್ಧಿ, ಪ್ರಥಮ ಚಿಕಿತ್ಸೆ ಮತ್ತು ಪ್ರವಾಸಿ ಸೌಲಭ್ಯ ಕೇಂದ್ರ, ಆಡಳಿತ ಕಚೇರಿ ಮತ್ತು ಆಸ್ಪತ್ರೆ, ಎರಡು ಅತಿಥಿ ಗೃಹಗಳು, ಪೊಲೀಸ್ ಠಾಣೆ, ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್, ಮಂದಾಕಿನಿ ಆಸ್ಥಾಪತ್ ಸರತಿ ಸೇರಿದಂತೆ 180 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹು ಯೋಜನೆಗಳಿಗೆ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ. ರೈನ್‌ಶೆಲ್ಟರ್ ಮತ್ತು ಸರಸ್ವತಿ ನಾಗರಿಕ ಮೂಲಸೌಕರ್ಯ ಬಿಲ್ಡಿಂಗ್ ಸೇರಿದಂತೆ ವಿವಿಧ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವರು ಎಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ನವೆಂಬರ್ 1 ಆರು ರಾಜ್ಯಗಳ ಸಂಸ್ಥಾಪನಾ ದಿನ; ಪ್ರತಿ ರಾಜ್ಯಗಳ ಜನರಿಗೂ ಶುಭಕೋರಿದ ಪ್ರಧಾನಮಂತ್ರಿ ಮೋದಿ