ಪಶ್ಚಿಮ ಬಂಗಾಳ: ಉಪಚುನಾವಣೆಯಲ್ಲಿ ಎಲ್ಲ 4 ಸ್ಥಾನ ಗೆದ್ದ ತೃಣಮೂಲ ಕಾಂಗ್ರೆಸ್​, 3 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಬಿಜೆಪಿ

‘ಪಶ್ಚಿಮ ಬಂಗಾಳವು ಸದಾ ಅಭಿವೃದ್ಧಿ ಮತ್ತು ಏಕತೆಯನ್ನು ಬಯಸುತ್ತದೆ. ಅಪಪ್ರಚಾರ ಮತ್ತು ದ್ವೇಷದ ರಾಜಕಾರಣವನ್ನು ಇಲ್ಲಿನ ಜನರು ಒಪ್ಪುವುದಿಲ್ಲ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪಶ್ಚಿಮ ಬಂಗಾಳ: ಉಪಚುನಾವಣೆಯಲ್ಲಿ ಎಲ್ಲ 4 ಸ್ಥಾನ ಗೆದ್ದ ತೃಣಮೂಲ ಕಾಂಗ್ರೆಸ್​, 3 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಬಿಜೆಪಿ
ಮಮತಾ ಬ್ಯಾನರ್ಜಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 02, 2021 | 6:57 PM

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಗೆಲುವಿನ ನಾಗಾಲೋಟ ಮುಂದುವರಿದಿದೆ. ಇಂದು ಪ್ರಕಟವಾದ ಉಪ ಚುನಾವಣೆ ಫಲಿತಾಂಶದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಎಲ್ಲ ನಾಲ್ಕೂ ಕ್ಷೇತ್ರಗಳಲ್ಲಿ ಜಯ ಗಳಿಸಿದ್ದರೆ, ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ. ಕೆಲ ಕ್ಷೇತ್ರಗಳಲ್ಲಿ ಮತ ಎಣಿಕೆ ಇನ್ನೂ ಮುಕ್ತಾಯವಾಗಿಲ್ಲ. ಆದರೆ ಗೆಲ್ಲುವವರು ಯಾರು ಎಂಬುದು ನಿಚ್ಚಳವಾಗಿದೆ. ವಿಜೇತರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿನಂದಿಸಿದ್ದಾರೆ. ‘ಪಶ್ಚಿಮ ಬಂಗಾಳವು ಸದಾ ಅಭಿವೃದ್ಧಿ ಮತ್ತು ಏಕತೆಯನ್ನು ಬಯಸುತ್ತದೆ. ಅಪಪ್ರಚಾರ ಮತ್ತು ದ್ವೇಷದ ರಾಜಕಾರಣವನ್ನು ಇಲ್ಲಿನ ಜನರು ಒಪ್ಪುವುದಿಲ್ಲ’ ಎಂದು ಹೇಳಿದ್ದಾರೆ.

ದಿನ್​ಹಟ ಮತ್ತು ಶಾಂತಿಪುರ ಕ್ಷೇತ್ರಗಳು ಬಿಜೆಪಿಗೆ ಪ್ರತಿಷ್ಠೆಯ ಕಣಗಳಾಗಿದ್ದವು. ಬಿಜೆಪಿ ಹಲವು ಹಿರಿಯ ನಾಯಕರು ಮತ್ತು ಶಾಸಕರು ಇದೀಗ ಪಕ್ಷಾಂತರ ಮಾಡಿ ಟಿಎಂಸಿಗೆ ಹಾರಿದ್ದಾರೆ. ಬಂಗಾಳದ ಕೂಚ್​ ಬೆಹಾರ್ ಜಿಲ್ಲೆಯ ದಿನ್​ಹಟ ಕ್ಷೇತ್ರವು ಬಿಜೆಪಿಯ ಭದ್ರಕೋಟೆ ಎಂದೇ ನಂಬಲಾಗಿತ್ತು. ಬಿಜೆಪಿಯ ನಿತೀಶ್ ಪ್ರಾಮಾಣಿಕ್ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಈ ಕ್ಷೇತ್ರ ತೆರವಾಗಿತ್ತು. ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉದಯನ್ ಗುಪ್ತ ದಿನ್​ಹಟ ಕ್ಷೇತ್ರದಲ್ಲಿ 91,000ಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ನಾಯಕ ಜಗನ್ನಾಥ್ ಸರ್ಕಾರ್ ರಾಜೀನಾಮೆ ಕಾರಣದಿಂದ ಶಾಂತಿಪುರ ಕ್ಷೇತ್ರವು ತೆರವಾಗಿತ್ತು.

ಖರ್ದಾ ಕ್ಷೇತ್ರದಲ್ಲಿ ಕೊಲ್ಕತ್ತಾದ ಮಾಜಿ ಮೇಯರ್ ಸೊವನ್​ದೇವ್ ಚಟ್ಟೋಪಾಧ್ಯಯ ಸ್ಪರ್ಧಿಸಿದ್ದಾರೆ. ಕೊಲ್ಕತ್ತಾದ ಭವಾನಿಪುರ ಕ್ಷೇತ್ರವನ್ನು ಇವರು ಮಮತಾ ಬ್ಯಾನರ್ಜಿಗೆ ಬಿಟ್ಟುಕೊಟ್ಟಿದ್ದರು. ನಂದಿಗ್ರಾಮದಲ್ಲಿ ಸೋತ ಆರು ತಿಂಗಳ ಒಳಗೆ ಮಮತಾ ಬ್ಯಾನರ್ಜಿ ಭವಾನಿಪುರ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದರು. ಪಶ್ಚಿಮ ಬಂಗಾಳದ ಸಾರ್ವತ್ರಿಕ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 213 ಸ್ಥಾನಗಳಲ್ಲಿ ಜಯಗಳಿಸಿತ್ತು. ಈ ಸಂಖ್ಯೆಗೆ ಇಂದಿನ ಜಯದೊಂದಿಗೆ ನಾಲ್ಕು ಸ್ಥಾನಗಳು ಹೆಚ್ಚುವರಿಯಾಗಿ ಸೇರ್ಪಡೆಯಾದಂತೆ ಆಗಿದೆ. ಮಮತಾರನ್ನು ಅಧಿಕಾರದಿಂದ ದೂರ ಇಡುವ ಪ್ರತಿಜ್ಞೆಯೊಂದಿಗೆ ಚುನಾವಣಾ ರಂಗ ಪ್ರವೇಶಿಸಿದ್ದ ಬಿಜೆಪಿ ಈ ಸೋಲಿನಿಂದ ಮತ್ತೊಮ್ಮೆ ಮುಖಭಂಗ ಅನುಭವಿಸಿದಂತೆ ಆಗಿದೆ.

ಇದನ್ನೂ ಓದಿ: ತಂಬಾಕು ಪ್ರಿಯರಿಗೆ ಶಾಕ್; ಪಶ್ಚಿಮ ಬಂಗಾಳದಲ್ಲಿ 1 ವರ್ಷ ಗುಟ್ಕಾ, ಪಾನ್ ಮಸಾಲ ಮಾರಾಟ ನಿಷೇಧ ಇದನ್ನೂ ಓದಿ: ಬಿಜೆಪಿ ಸೋಲಿಸೋಣ ಬನ್ನಿ; ಗೋವಾ ಫಾರ್ವರ್ಡ್​ ಪಾರ್ಟಿ ಅಧ್ಯಕ್ಷನಿಗೆ ಮಮತಾ ಬ್ಯಾನರ್ಜಿ ನೇರ ಆಮಂತ್ರಣ

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ