Captain Amarinder Singh ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್
"ನನ್ನ ರಾಜ್ಯ ಮತ್ತು ನನ್ನ ದೇಶದ ಹಿತದೃಷ್ಟಿಯಿಂದ ನಾನು ಈ ಮೂಲಕ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತೇನೆ" ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
ದೆಹಲಿ: ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ (Captain Amarinder Singh) ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಸಿಂಗ್, “ನನ್ನ ತೀವ್ರವಾದ ಸಂಯಮದ ಹೊರತಾಗಿಯೂ ಮತ್ತು ಪಂಜಾಬ್‌ನ ಬಹುತೇಕ ಎಲ್ಲಾ ಸಂಸದರ ಒಮ್ಮತದ ಸಲಹೆಯ ಹೊರತಾಗಿಯೂ, ನೀವು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಸಾರ್ವಜನಿಕವಾಗಿ ಅಪ್ಪಿಕೊಂಡಿದ್ದ ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲು ಆಯ್ಕೆ ಮಾಡಿಕೊಂಡಿದ್ದೀರಿ. 1954ರಲ್ಲಿ ನಾವು ಶಾಲೆಯಲ್ಲಿ ಜತೆಯಾಗಿದ್ದೆವು, ಅಂದರೆ ಈಗ 67 ವರ್ಷಗಳು. ನಾನು ನನ್ನ ಮಕ್ಕಳಂತೆ ತೀವ್ರವಾಗಿ ಪ್ರೀತಿಸುವ ನಿಮ್ಮ ಮಕ್ಕಳ ಅಪ್ಪನನ್ನು ಚೆನ್ನಾಗಿ ಬಲ್ಲೆ. ನಿಮ್ಮ ನಡತೆಯಿಂದ ನನಗೆ ನೋವಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ. “ನನ್ನ ರಾಜ್ಯ ಮತ್ತು ನನ್ನ ದೇಶದ ಹಿತದೃಷ್ಟಿಯಿಂದ ನಾನು ಈ ಮೂಲಕ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತೇನೆ” ಎಂದು ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಟ್ವೇಟ್ ಮಾಡಿದ ಸಿಂಗ್ ರಾಜೀನಾಮೆಯ ಕಾರಣಗಳನ್ನು ಪಟ್ಟಿ ಮಾಡಿ ನಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನನ್ನ ರಾಜೀನಾಮೆ ಪತ್ರವನ್ನು ಇವತ್ತು ಕಳುಹಿಸಿದ್ದೇನೆ . ಹೊಸ ಪಕ್ಷದ ಹೆಸರು ಪಂಜಾಬ್ ಲೋಕ್ ಕಾಂಗ್ರೆಸ್ . ಚುನಾವಣಾ ಆಯೋಗ ಇನ್ನು ಅಂಗೀಕರಿಸಬೇಕಿದೆ. ಪಕ್ಷದ ಚಿಹ್ನೆಗೆ ಆಮೇಲೆ ಅನುಮತಿ ಸಿಗಲಿದೆ ಎಂದಿದ್ದಾರೆ.
I have today sent my resignation to @INCIndia President Ms Sonia Gandhi ji, listing my reasons for the resignation.
‘Punjab Lok Congress’ is the name of the new party. The registration is pending approval with the @ECISVEEP. The party symbol will be approved later. pic.twitter.com/Ha7f5HKouq
— Capt.Amarinder Singh (@capt_amarinder) November 2, 2021
ಕೆಲವು ದಿನಗಳ ಹಿಂದೆ, ಪಂಜಾಬ್ ಮಾಜಿ ಸಿಎಂನ ಮಾಧ್ಯಮ ಸಲಹೆಗಾರರ ರವೀನ್ ತುಕ್ರಾಲ್, ಸಿಂಗ್ ಪರವಾಗಿ ಟ್ವೀಟ್ ಮಾಡಿದ್ದು ಕಾಂಗ್ರೆಸ್ ಜೊತೆಗೆ ಬ್ಯಾಕ್ ಎಂಡ್ ಮಾತುಕತೆಯ ವರದಿ ತಪ್ಪಾಗಿದೆ. ಹೊಂದಾಣಿಕೆಯ ಸಮಯ ಮುಗಿದಿದೆ. ಪಕ್ಷದಿಂದ ದೂರ ಸರಿಯುವ ನಿರ್ಧಾರವನ್ನು ಸಾಕಷ್ಟು ಚಿಂತನೆಯ ನಂತರ ತೆಗೆದುಕೊಳ್ಳಲಾಗಿದ್ದು, ಅಂತಿಮವಾಗಿದೆ. ಸೋನಿಯಾ ಗಾಂಧಿ ಅವರ ಬೆಂಬಲಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ, ಆದರೆ ಈಗ ಕಾಂಗ್ರೆಸ್‌ನಲ್ಲಿ ಉಳಿಯುವುದಿಲ್ಲ’
ನಾನು ಶೀಘ್ರದಲ್ಲೇ ನನ್ನ ಸ್ವಂತ ಪಕ್ಷವನ್ನು ಪ್ರಾರಂಭಿಸುತ್ತೇನೆ ಮತ್ತು ರೈತರ ಸಮಸ್ಯೆ ಬಗೆಹರಿದ ನಂತರ ಬಿಜೆಪಿ ಮತ್ತು ಇತರರೊಂದಿಗೆ 2022 ಪಂಜಾಬ್ ಚುನಾವಣೆ ಸೀಟು ಹಂಚಿಕೆಗಾಗಿ ಮಾತುಕತೆ ನಡೆಸುತ್ತೇನೆ. ಪಂಜಾಬ್ ಮತ್ತು ಅದರ ರೈತರ ಹಿತಾಸಕ್ತಿಗಾಗಿ ನಾನು ಬಲವಾದ ಸಾಮೂಹಿಕ ಶಕ್ತಿಯನ್ನು ನಿರ್ಮಿಸಲು ಬಯಸುತ್ತೇನೆ’ ಎಂದು ಹೇಳಿದ್ದರು.
ಚುನಾವಣಾ ಆಯೋಗವು ಹೆಸರು ಮತ್ತು ಚಿಹ್ನೆಯನ್ನು ಅನುಮತಿಸಿದ ಕೂಡಲೇ ತನ್ನದೇ ಆದ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಸಿಂಗ್ ಕಳೆದ ವಾರ ಘೋಷಿಸಿದ್ದರು. ಪಂಜಾಬ್‌ನ ಎಲ್ಲಾ 117 ಸ್ಥಾನಗಳಲ್ಲೂ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಅವರು ಹೇಳಿದ್ದರು. ಪಂಜಾಬ್ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದೆ.
ಇದನ್ನೂ ಓದಿ:ಎಪಿಎಸ್ ಡಿಯೋಲ್ ರಾಜೀನಾಮೆ ತಿರಸ್ಕರಿಸುವ ಮೂಲಕ ನವಜೋತ್ ಸಿಂಗ್ ಸಿಧುಗೆ ಖಡಕ್ ಸಂದೇಶ ರವಾನಿಸಿದ ಪಂಜಾಬ್ ಮುಖ್ಯಮಂತ್ರಿ
Published On - 5:50 pm, Tue, 2 November 21