AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಮರಿಗೆ ಅವಹೇಳನ ಮಾಡಿದ್ದ ಬಿಜೆಪಿ ನಾಯಕನಿಗೆ ಶೋಕಾಸ್​ ನೋಟಿಸ್​ ನೀಡಿದ ಪಕ್ಷ; ಎಫ್​ಐಆರ್​ ದಾಖಲು

ಟಿ 20 ವಿಶ್ವಕಪ್​ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಗೆದ್ದಾಗ ಕಾಶ್ಮೀರದ ವಿವಿಧೆಡೆ ಸಂಭ್ರಮಿಸಿದ್ದನ್ನು ವಿರೋಧಿಸುವ ಭರದಲ್ಲಿ ವಿಕ್ರಮ್​ ರಾಂಧವ ಕಾಶ್ಮೀರದ ಮುಸ್ಲಿಮರ ಬಗ್ಗೆ ಕೀಳಾಗಿ ಕಾಮೆಂಟ್​ ಮಾಡಿದ್ದರು.

ಮುಸ್ಲಿಮರಿಗೆ ಅವಹೇಳನ ಮಾಡಿದ್ದ ಬಿಜೆಪಿ ನಾಯಕನಿಗೆ ಶೋಕಾಸ್​ ನೋಟಿಸ್​ ನೀಡಿದ ಪಕ್ಷ; ಎಫ್​ಐಆರ್​ ದಾಖಲು
ವಿಕ್ರಮ್​ ರಾಂಧವಾ
TV9 Web
| Updated By: Lakshmi Hegde|

Updated on: Nov 02, 2021 | 5:40 PM

Share

ಜಮ್ಮು: ಮುಸ್ಲಿಮರ ವಿರುದ್ಧ ಅನುಚಿತವಾಗಿ ಮಾತನಾಡಿದ ಬಿಜೆಪಿ ನಾಯಕ (BJP Leader) ವಿಕ್ರಮ್​ ರಾಂಧವಾ ವಿರುದ್ಧ ಜಮ್ಮು-ಕಾಶ್ಮೀರ (Jammu-Kashmir)ದಲ್ಲಿ ಪ್ರಕರಣ ದಾಖಲಾಗಿದೆ. ಇವರ ಹೇಳಿಕೆಯನ್ನು ಬಿಜೆಪಿ ಪಕ್ಷವೇ ವಿರೋಧಿಸಿದೆ. ರಾಂಧವಾ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಅವರು ಕೂಡಲೇ ಕ್ಷಮೆ ಕೋರಬೇಕು ಎಂದು ಪಕ್ಷ ಹೇಳಿದೆ. ಪಾಕಿಸ್ತಾನ ಟಿ-20 ವಿಶ್ವಕಪ್​ ಪಂದ್ಯದಲ್ಲಿ ಗೆದ್ದ ಬಳಿಕ,  ಜಮ್ಮು-ಕಾಶ್ಮೀರದ ಮಾಜಿ ಶಾಸಕ ವಿಕ್ರಮ್ ರಾಂಧವಾ ವಿಡಿಯೋ ಮೂಲಕ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದರು.

ವಿಕ್ರಮ್​ ರಾಂಧವ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್​ ನೀಡಿದೆ. ನಿಮ್ಮ ಹೇಳಿಕೆಯ ಬಗ್ಗೆ 48 ಗಂಟೆಗಳಲ್ಲಿ ಸ್ಪಷ್ಟನೆ ನೀಡಿ ಮತ್ತು ಸಾರ್ವಜನಿಕವಾಗಿ ಕ್ಷಮೆ ಕೇಳಿ ಎಂದು ಹೇಳಿದೆ.  ಟಿ 20 ವಿಶ್ವಕಪ್​ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಗೆದ್ದಾಗ ಕಾಶ್ಮೀರದ ವಿವಿಧೆಡೆ ಸಂಭ್ರಮಿಸಿದ್ದನ್ನು ವಿರೋಧಿಸುವ ಭರದಲ್ಲಿ ವಿಕ್ರಮ್​ ರಾಂಧವ ಕಾಶ್ಮೀರದ ಮುಸ್ಲಿಮರ ಬಗ್ಗೆ ಕೀಳಾಗಿ ಕಾಮೆಂಟ್​ ಮಾಡಿದ್ದರು. ಅದನ್ನು ವಿರೋಧಿಸಿರುವ ಪಕ್ಷ, ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ನೀವು ನಿರ್ದಿಷ್ಟ ಸಮುದಾಯವೊಂದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಕಾಣುತ್ತಿದೆ. ಇದನ್ನು ನಮ್ಮ ಪಕ್ಷ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ನಮ್ಮ ಪಕ್ಷಕ್ಕೆ ಮುಜುಗರ ತರುವಂತ ವಿಚಾರ ಎಂದು ನೋಟಿಸ್​​ನಲ್ಲಿ ಉಲ್ಲೇಖಿಸಿದೆ.

ಅಂದಹಾಗೆ ಬಿಜೆಪಿ ಈ ವರ್ಷದಲ್ಲೇ ಇದು ಎರಡನೇ ಬಾರಿಗೆ ರಾಂಧವಾಗೆ ಶೋಕಾಸ್​ ನೋಟಿಸ್​ ನೀಡುತ್ತಿದೆ. ಈ ಹಿಂದೆ ರಾಂಧವಾ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್​ ವಿರುದ್ಧ ಮಾತನಾಡಿದ್ದರು. ಜಿತೇಂದ್ರ ಸಿಂಗ್​ ಅಕ್ರಮ ಗಣಿಗಾರಿಕೆ ಮತ್ತು ಬೃಹತ್​ ಕಿಕ್​ಬ್ಯಾಕ್​ಗಳನ್ನು ಪೋಷಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಆಗಲೂ ಸಹ ಬಿಜೆಪಿ ಅಸಮಾಧಾನ ಹೊರಹಾಕಿತ್ತು. ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಕಳಂಕ ತಂದಿದ್ದೀರಿ ಎಂದು ಶೋಕಾಸ್ ನೋಟಿಸ್​ನಲ್ಲಿ ಹೇಳಿತ್ತು.

ಇದನ್ನೂ ಓದಿ: NEET ಫಲಿತಾಂಶ 2021: ಕಟ್ ಆಫ್ ಮಾರ್ಕ್, ಲಿಂಗ ಮತ್ತು ಜಾತಿ ಆಧಾರಿತ ವರ್ಗೀಕರಣ ಹೇಗಿದೆ?

ಹಾನಗಲ್, ಸಿಂದಗಿ ಉಪಚುನಾವಣೆ ಅಂತಿಮ ಫಲಿತಾಂಶ: ಯಾರಿಗೆ ಎಷ್ಟು ಅಂತರದ ಗೆಲುವು? ಇಲ್ಲಿದೆ ವಿವರ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?