ಮಹಾರಾಷ್ಟ್ರ ಮಾಜಿ ಸಚಿವ ಅನಿಲ್​ ದೇಶ್​ಮುಖ್​​ಗೆ ನವೆಂಬರ್​ 6ರವರೆಗೆ ಇ ಡಿ ಕಸ್ಟಡಿ; ವಿಶೇಷ ಪಿಎಂಎಲ್​ಎ ಕೋರ್ಟ್​ ಆದೇಶ

Anil Deshmukh: ಇಂದು ಕೋರ್ಟ್​​ನಲ್ಲಿ ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಆಫ್​ ಇಂಡಿಯಾ ಅನಿಲ್​ ಸಿಂಗ್​ ಮತ್ತು ಹಿತೇನ್ ವೆನೆಗಾಂವ್ಕರ್ ಅವರು ವಾದಿಸಿದ್ದರು.

ಮಹಾರಾಷ್ಟ್ರ ಮಾಜಿ ಸಚಿವ ಅನಿಲ್​ ದೇಶ್​ಮುಖ್​​ಗೆ ನವೆಂಬರ್​ 6ರವರೆಗೆ ಇ ಡಿ ಕಸ್ಟಡಿ; ವಿಶೇಷ ಪಿಎಂಎಲ್​ಎ ಕೋರ್ಟ್​ ಆದೇಶ
ಅನಿಲ್​ ದೇಶ್​ಮುಖ್​​
Follow us
| Updated By: Lakshmi Hegde

Updated on:Nov 02, 2021 | 4:51 PM

ಅಕ್ರಮ ಹಣ ವಸೂಲಿ, ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್​ ಅವರನ್ನು ನವೆಂಬರ್​ 6ರವರೆಗೆ ಇಡಿ ಕಸ್ಟಡಿಗೆ ನೀಡಿ ಮುಂಬೈನ ವಿಶೇಷ ಪಿಎಂಎಲ್​ಎ (Prevention of Money Laundering Act Court) ನ್ಯಾಯಾಲಯ ಆದೇಶ ನೀಡಿದೆ. ಸತತ 12 ತಾಸುಗಳ ಕಾಲ ಅನಿಲ್​ ದೇಶ್​ಮುಖ್​​ರನ್ನು ವಿಚಾರಣೆ ನಡೆಸಿದ್ದ ಇ.ಡಿ.ಅಧಿಕಾರಿಗಳು ಬಳಿಕ ಅವರನ್ನು ಬಂಧಿಸಿದ್ದರು. ಅನಿಲ್​ ದೇಶ್​ಮುಖ್​ ವಿಚಾರಣೆಗೆ ಸರಿಯಾಗಿ ಸ್ಪಂದಿಸದ ಕಾರಣ ಬಂಧಿಸಿದ್ದಾಗಿ ಹೇಳಿಕೊಂಡಿದ್ದರು. ಅದಾದ ಬಳಿಕ ಅವರನ್ನು ವಿಶೇಷ ಪಿಎಂಎಲ್​ಎ ನ್ಯಾಯಾಲಯದ ಎದುರು ಹಾಜರು ಪಡಿಸಿ, 14 ದಿನಗಳ ಕಾಲ ತಮ್ಮ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದ್ದರು.  

ಅನಿಲ್ ದೇಶ್​ಮುಖ್​ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ವಿವಿಧ ಸೆಕ್ಷನ್​​ಗಳಡಿ ಪ್ರಕರಣ ದಾಖಲಾಗಿದೆ. ಅವರು ಗೃಹ ಸಚಿವರಾಗಿದ್ದಾಗ ಪೊಲೀಸರನ್ನು ಬಳಸಿಕೊಂಡು ಪ್ರತಿ ತಿಂಗಳಿಗೆ ಸುಮಾರು 100 ಕೋಟಿ ರೂಪಾಯಿಯನ್ನು ವಿವಿಧ ಮೂಲಗಳಿಂದ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಅನಿಲ್ ದೇಶ್​ಮುಖ್​ ವಿರುದ್ಧ ಆರೋಪ ಮಾಡಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದು ಮುಂಬೈನ ಮಾಜಿ ಪೊಲೀಸ್​ ಅಧಿಕಾರಿ ಪರಮ್​ ಬೀರ್​ ಸಿಂಗ್​. ಬರೀ ಇಡಿಯಷ್ಟೇ ಅಲ್ಲದೆ ಸಿಬಿಐ (ಕೇಂದ್ರೀಯ ತನಿಖಾ ದಳ) ಕೂಡ ಅನಿಲ್​ ದೇಶ್​ಮುಖ್​ ವಿರುದ್ಧ ಎಫ್​ಐಆರ್​ ದಾಖಲು ಮಾಡಿದೆ.

ಇಂದು ಕೋರ್ಟ್​​ನಲ್ಲಿ ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಆಫ್​ ಇಂಡಿಯಾ ಅನಿಲ್​ ಸಿಂಗ್​ ಮತ್ತು ಹಿತೇನ್ ವೆನೆಗಾಂವ್ಕರ್ ಅವರು ವಾದಿಸಿದ್ದರು. ಅನಿಲ್​ ದೇಶ್​ಮುಖ್​ ಪರ ಹಿರಿಯ ವಕೀಲರಾದ ವಿಕ್ರಮ್​ ಚೌಧರಿ ಮತ್ತು ಅನಿಕೇತ್​ ನಿಕಾಮ್​ ಪ್ರತಿವಾದ ಮಂಡನೆ ಮಾಡಿದ್ದರು.

ಈ ಮಧ್ಯೆ, ತಮ್ಮ ವಿರುದ್ಧದ ಆರೋಪಗಳೆಲ್ಲ ಸುಳ್ಳು ಎಂದು ಅನಿಲ್​ ದೇಶ್​ಮುಖ್​ ಹೇಳುತ್ತಲೇ ಬಂದಿದ್ದಾರೆ. ನಿನ್ನೆ ಕೂಡ ಇದನ್ನೇ  ಹೇಳಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಪರಮ್​ಬೀರ್​ ಸಿಂಗ್​ ವಿರುದ್ಧವೂ ಕೂಡ ಭ್ರಷ್ಟಾಚಾರ ಆರೋಪ ಇದೆ. ಅವರಿಗೆ ಲುಕ್​ಔಟ್​ ನೋಟಿಸ್​ ಕೂಡ ಜಾರಿ ಮಾಡಲಾಗಿದ್ದರೂ ಅವರ ಪತ್ತೆಯಿಲ್ಲ. ಈ ಬಗ್ಗೆ ನಿನ್ನೆ ಪ್ರಶ್ನೆ ಎತ್ತಿರುವ ಅನಿಲ್​ ದೇಶ್​ಮುಖ್​, ಪರಮ್​ ಬೀರ್​ ಸಿಂಗ್ ಎಲ್ಲಿ ಹೋಗಿದ್ದಾರೆ? ನನ್ನ ವಿರುದ್ಧ ಆರೋಪ ಮಾಡಿದವರೇ ಕಾಣುತ್ತಿಲ್ಲ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್​​ರನ್ನು ಅರೆಸ್ಟ್ ಮಾಡಿದ ಇ ಡಿ ಅಧಿಕಾರಿಗಳು; ಪರಮ್​ ಬೀರ್​ ಸಿಂಗ್​ ಎಲ್ಲಿ?

ಸಂಘಟನೆ, ಸಿದ್ಧಾಂತ, ನೇತೃತ್ವ ಮೂರೂ ಸರಿ ಇಲ್ಲದಿದ್ದಾಗ ಆಗಬೇಕಾಗಿದ್ದೆ ಆಗಿದೆ: ಜೆಡಿಎಸ್ ಸೋಲಿನ ಬಗ್ಗೆ ಸಿಟಿ ರವಿ ಪ್ರತಿಕ್ರಿಯೆ

Published On - 4:50 pm, Tue, 2 November 21

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ