ಸಂಘಟನೆ, ಸಿದ್ಧಾಂತ, ನೇತೃತ್ವ ಮೂರೂ ಸರಿ ಇಲ್ಲದಿದ್ದಾಗ ಆಗಬೇಕಾಗಿದ್ದೆ ಆಗಿದೆ: ಜೆಡಿಎಸ್ ಸೋಲಿನ ಬಗ್ಗೆ ಸಿಟಿ ರವಿ ಪ್ರತಿಕ್ರಿಯೆ

CT Ravi: ಮುಂದೆ ಪ್ರಾದೇಶಿಕ ಪಕ್ಷಕ್ಕೆ ಜನರ ಬೆಂಬಲ ಎಂದು ಆಶಾವಾದ ಇರುವವರು ಆಲೋಚಿಸಬೇಕು ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಸಂಘಟನೆ, ಸಿದ್ಧಾಂತ, ನೇತೃತ್ವ ಮೂರೂ ಸರಿ ಇಲ್ಲದಿದ್ದಾಗ ಆಗಬೇಕಾಗಿದ್ದೆ ಆಗಿದೆ: ಜೆಡಿಎಸ್ ಸೋಲಿನ ಬಗ್ಗೆ ಸಿಟಿ ರವಿ ಪ್ರತಿಕ್ರಿಯೆ
ಸಿ.ಟಿ ರವಿ
Follow us
TV9 Web
| Updated By: ganapathi bhat

Updated on:Nov 02, 2021 | 6:56 PM

ಚಿಕ್ಕಮಗಳೂರು: ಆರ್ಗನೈಸೇಷನ್​, ಐಡಿಯಾಲಜಿ, ನೇತೃತ್ವ ಸರಿ ಇರಬೇಕು. ಈ ಮೂರು ಸರಿ ಇಲ್ಲದಿದ್ದಾಗ ಆಗಬೇಕಾಗಿದ್ದೆ ಆಗಿದೆ ಎಂದು ಜೆಡಿಎಸ್ ಸೋಲಿನ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾರ್ಮಿಕ ನುಡಿ ಆಡಿದ್ದಾರೆ. ಕರ್ನಾಟಕದ ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಉಪಚುನಾವಣೆಯ ಜೆಡಿಎಸ್ ಫಲಿತಾಂಶದ​ ಬಗ್ಗೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.

ಸತ್ಯ ಯಾವಾಗಲು ಕಹಿ, ಸತ್ಯ ಹೇಳಿದ್ರೆ ಬೇಸರವಾಗುತ್ತೆ. ಎರಡೂ ಕ್ಷೇತ್ರದಲ್ಲೂ ಜೆಡಿಎಸ್ ಸಂಘಟನೆ ಇರಲಿಲ್ಲ. ಮಾಜಿ ಶಾಸಕರ ನಿಧನದ ಸಿಂಪತಿ ಕಾರಣಕ್ಕೆ ಜಯ ಸಿಕ್ಕಿತ್ತು. ಈ ಸಲ ಅವರ ಮಗನೇ ‘ಕೈ’ ಅಭ್ಯರ್ಥಿಯಾದ್ರು ಗೆಲ್ಲಲಿಲ್ಲ. ಹಾನಗಲ್‍ನಲ್ಲಿ ಜೆಡಿಎಸ್​ಗೆ 1000ಕ್ಕಿಂತ ಕಡಿಮೆ ಮತ ಬಂದಿವೆ. ಭವಿಷ್ಯದ ರಾಜಕಾರಣದ ಬಗ್ಗೆ ಮಾತಾಡುವರು ಯೋಚಿಸಲಿ. ಮುಂದೆ ಪ್ರಾದೇಶಿಕ ಪಕ್ಷಕ್ಕೆ ಜನರ ಬೆಂಬಲ ಎಂದು ಆಶಾವಾದ ಇರುವವರು ಆಲೋಚಿಸಬೇಕು ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳಲು ಯಾವುದೇ ಸಂಕೋಚವಿಲ್ಲ: ಸಿ.ಟಿ. ರವಿ ರಾಜಕೀಯ ಅಸ್ತಿತ್ವ ಕೊಟ್ಟ ದೇವೇಗೌಡರಿಗೆ ಸಿದ್ದರಾಮಯ್ಯ ಕ್ಷಮೆಯಾಚಿಸಲಿ. ನಾನೂ ಕ್ಷಮೆ ಕೇಳುತ್ತೇನೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ರಾಜ್ಯದಿಂದ ಹೊರಗೆ ಸಿದ್ದರಾಮಯ್ಯರನ್ನ ಗುರುತಿಸುವವರು ಯಾರು? ವಿಶ್ವದ ಬಹುತೇಕ ದೇಶಗಳಲ್ಲಿ ಮೋದಿಯನ್ನು ಸ್ವಾಗತಿಸುತ್ತಾರೆ. 14 ದೇಶಗಳು ಮೋದಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿವೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ಏನಾದರೂ ಕೊಟ್ಟಿದ್ದಾರಾ? ಅಂತಹ ಪ್ರಧಾನಿ ಬಗ್ಗೆ ಹೆಬ್ಬೆಟ್ಟು ಅಂತ ಹೇಳೋದು ಸಂಸ್ಕೃತಿನಾ? ಕಂಬಳಿ ಹಾಕಿಕೊಳ್ಳುವುದು ಜಾತಿ ಕಾರಣ ಅನ್ನುವುದಾದರೆ. ಟೋಪಿ ಹಾಕುವುದು ಜಾತಿ ಇರಬೇಕಲ್ಲವೇ ಎಂದಿದ್ದೆ. ನಾನು ಆರೋಪಿಸಿಲ್ಲ, ಸಿದ್ದರಾಮಯ್ಯ ಭಾವಿಸಿರುವಂತೆ ಎಂದಿದ್ದೆ. ನಾನು ಕುರುಬ ಸಮುದಾಯದ ಬಗ್ಗೆ ಮಾತನಾಡಿಲ್ಲ ಎಂದು ಸಿ.ಟಿ. ರವಿ ಹೇಳಿದ್ದಾರೆ.

ಕಾಂಗ್ರೆಸ್​ಗೆ ಕರೆದರೆ ಯಾರೂ ಬರಲ್ಲವೆಂಬ ಕಾರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಜಾತಿ ವಿಚಾರ ಮುಂದಿಟ್ಟಿದ್ದಾರೆ. ಮೋದಿ, ಯಡಿಯೂರಪ್ಪ, ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಹೆಚ್.ಡಿ.ದೇವೇಗೌಡರಲ್ಲಿ ಸಿದ್ದರಾಮಯ್ಯ ಕ್ಷಮೆಯಾಚಿಸಲಿ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳಲು ಯಾವುದೇ ಸಂಕೋಚವಿಲ್ಲ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ.

ಜಾತಿ-ಧರ್ಮದ ಓಲೈಕೆಗೆ ಅವಸರದ ಮಾತಿಗೆ ಜನರಿಂದ ಪಾಠ: ಶೋಭಾ ಕರಂದ್ಲಾಜೆ ದ್ವೇಷ, ಜಾತಿ-ಧರ್ಮದ ರಾಜಕಾರಣ ಬಹಳ ದಿನ ನಡೆಯಲ್ಲ. ಜನ ಬುದ್ಧಿವಂತರಾಗಿದ್ದಾರೆ, ನಮ್ಮ ಮಾತು-ನಡೆ ಮೇಲೆ ಅಳತೆ ಮಾಡುತ್ತಾರೆ. ಜೆಡಿಎಸ್ ಇನ್ನಾದ್ರು ಜವಾಬ್ದಾರಿಯುತವಾಗಿ ಮಾತನಾಡಿ ಹಾಗೇ ನಡೆದುಕೊಳ್ಳಲಿ ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ. ಮತದಾರರನ್ನು ಹಗುರವಾಗಿ ಟೇಕನ್ ಫಾರ್ ಗ್ರಾಂಟೆಂಡ್ ಮಾಡಿಕೊಳ್ಳಬಾರದು. ಟೀಕೆ ಮಾಡುವಾಗ ಹಿನ್ನೆಲೆ-ಮುನ್ನೆಲೆ ತಿಳಿದು ಮಾಡಬೇಕು. ಆರ್​ಎಸ್​ಎಸ್ ಹೇಗೆ ದೇಶ, ಸಮಾಜ ಸೇವೆ ಮಾಡುತ್ತಿದೆ ಎಂದು ತಿಳಿದು ಮಾತನಾಡಬೇಕು. ವೋಟ್ ಬ್ಯಾಂಕ್ ರಾಜಕಾರಣ, ಜಾತಿ-ಧರ್ಮದ ಓಲೈಕೆಗೆ ಅವಸರದ ಮಾತಿಗೆ ಜನರಿಂದ ಪಾಠ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹಾನಗಲ್ ಉಪಚುನಾವಣೆ ಸೋಲನ್ನು ಸಿಎಂ ಒಬ್ಬರ ಮೇಲೆ ಹಾಕಲು ಆಗಲ್ಲ: ಬಿಎಸ್ ಯಡಿಯೂರಪ್ಪ

ಇದನ್ನೂ ಓದಿ: Hangal Byelection 2021: ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಗೆ ಕಾರಣಗಳು ಏನೇನು?

Published On - 4:24 pm, Tue, 2 November 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್