Hangal Byelection 2021: ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಗೆ ಕಾರಣಗಳು ಏನೇನು?

Hangal Byelection 2021: ಹಲವು ಬಿಜೆಪಿ ನಾಯಕರ ಭರ್ಜರಿ ಪ್ರಚಾರದ ಬಳಿಕವೂ ಬಿಜೆಪಿಗೆ ಗೆಲ್ಲಲಾಗಿಲ್ಲ. ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಗೆ ಕಾರಣ ಏನು? ಈ ಬಗ್ಗೆ ವಿಶ್ಲೇಷಣೆ ಇಲ್ಲಿದೆ.

Hangal Byelection 2021: ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಗೆ ಕಾರಣಗಳು ಏನೇನು?
ಕಾಂಗ್ರೆಸ್
Follow us
| Updated By: ganapathi bhat

Updated on:Nov 02, 2021 | 2:52 PM

ಹಾವೇರಿ: ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಗೆಲುವು ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಹಾನಗಲ್​ನಲ್ಲಿ ಬಿಜೆಪಿ ಗೆಲ್ಲುವ ಕನಸನ್ನು ಸುಳ್ಳಾಗಿಸಿದೆ. ಸಿಂದಗಿ ಹಾಗೂ ಹಾನಗಲ್, ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಆಸೆ ಕೂಡ ಈಡೇರಿಲ್ಲ. ಸಿ.ಎಂ. ಉದಾಸಿ, ಶಿವಕುಮಾರ್ ಉದಾಸಿ ಹೀಗೆ ಉದಾಸಿ ಕುಟುಂಬದ ಬಲ ಹೊಂದಿದ್ದು, ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಹಿತ ಹಲವು ಬಿಜೆಪಿ ನಾಯಕರ ಭರ್ಜರಿ ಪ್ರಚಾರದ ಬಳಿಕವೂ ಬಿಜೆಪಿಗೆ ಗೆಲ್ಲಲಾಗಿಲ್ಲ. ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಗೆ ಕಾರಣ ಏನು? ಈ ಬಗ್ಗೆ ವಿಶ್ಲೇಷಣೆ ಇಲ್ಲಿದೆ.

ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಗೆ ಕಾರಣ ಏನು? ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಕಳೆದ ವಿಧಾನ ಸಭೆ ಸೋಲಿನ‌ ಬಳಿಕಕವೂ ಕ್ಷೇತ್ರದಲ್ಲೇ ಕೆಲಸ ಮಾಡಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಕ್ಷೇತ್ರದ ಜನರ ಜೊತೆ ಹೆಚ್ಚು ಒಡನಾಟ ಹೊಂದಿದ್ದರು. ಹಾನಗಲ್​ನಿಂದ ಹುಬ್ಬಳ್ಳಿಗೆ ತೆರಳುವ ಪ್ರತಿ ರೋಗಿಗೂ ವೈದ್ಯಕೀಯ ನೆರವು ನೀಡಿದ್ದರು. ಆದರೆ, ಅತ್ತ ಅನಾರೋಗ್ಯದ ಕಾರಣದಿಂದ ಬಿಜೆಪಿಯ ಉದಾಸಿ ಕೈಗೆ ಸಿಗದಂತೆ ಆಗಿದ್ದರು. ಸಂಸದ ಶಿವಕುಮಾರ್ ಉದಾಸಿ ಕೂಡ ಕೊವಿಡ್ ಸಮಯದಲ್ಲಿ ಹೆಚ್ಚಾಗಿ ಕಾಣಿಕೊಂಡಿಲ್ಲ. ಇದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರಿಗೆ ಗೆಲುವಿನ ನಗೆಬೀರಲು ಸಹಾಯ ಮಾಡಿದೆ.

ಹಾನಗಲ್​ನಲ್ಲಿ ವರ್ಕ್ ಔಟ್ ಆದ ಅಹಿಂದ ಮಾಡಲ್ ಕೈ ಪಕ್ಷವನ್ನು ಮುಸ್ಲಿಂ ಮತ್ತು ದಲಿತ ಸಮುದಾಯ ಸಂಪೂರ್ಣವಾಗಿ ಕೈ ಹಿಡಿದಿದೆ ಎಂದು ಹೇಳಲಾಗುತ್ತಿದೆ. ಇತ್ತ ಬಿಜೆಪಿ ಲಿಂಗಾಯತ ಮತಗಳನ್ನು ಕ್ರೋಢೀಕರಿಸಲು ವಿಫಲವಾಗಿದೆ. 60 ಸಾವಿರಕ್ಕೂ ಹೆಚ್ಚಿರುವ ಲಿಂಗಾಯತ ಮತಗಳನ್ನ ಕ್ರೋಢೀಕರಿಸುವಲ್ಲಿ ಬಿಜೆಪಿ ಸೋತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿವೈಡ್ ಸ್ಟ್ರಾಟಜಿ ಕೆಲಸ ಮಾಡಿಲ್ಲ. ಕಾಂಗ್ರೆಸ್​ನ ಎರಡನೇ ಹಂತದ ನಾಯಕರನ್ನು ತಟಸ್ಥಗೊಳಿಸಲು ತಂತ್ರ ಹೆಣೆದಿದ್ದ ಬೊಮ್ಮಾಯಿ ಕಾರ್ಯ ವಿಫಲವಾಗಿದೆ. ಹಾನಗಲ್​ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚರಿಷ್ಮಾ ಪ್ರಭಾವ ಬೀರಿದೆ.

ಕಾಂಗ್ರೆಸ್ ಕೈಹಿಡಿದ ಉದಾಸಿ ಕುಟುಂಬದ ನಿಷ್ಠಾವಂತ ಜಾತ್ಯಾತೀತ ಮತಗಳು ತೆರಮರೆಯಲ್ಲಿ ಸಣ್ಣ ಮುದಾಯಗಳು ಹಾಗೂ ಉಪ ಪಂಗಡಗಳನ್ನ ಒಗ್ಗೂಡಿಸುವಲ್ಲಿ ಕೃಷ್ಣಭೈರೆಗೌಡ ಪ್ಲಾನ್ ಯಶಸ್ವಿಯಾಗಿದೆ. ಕಳೆದ ಬಾರಿಯ ಸೋಲಿನ ಅನುಕಂಪ ಮಾನೆ ಮುನ್ನಡೆಗೆ ಪೂರಕವಾಗಿದೆ. ರೆಬೆಲ್ ಆಗಿದ್ದ ಮನೋಹರ್ ತಹಸೀಲ್ದಾರ್ ಮತ ಬ್ಯಾಂಕ್ ಕೆಡಿಸದಂತೆ ಕೈ ನಾಯಕರು ನೋಡಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಸಜ್ಜನವರ್ ಬಗ್ಗೆ ಸ್ಥಳಿಯ ಕಾರ್ಯಕರ್ತರಲ್ಲೇ ಅಸಮಾಧಾನ ಉಂಟಾಗಿತ್ತು. ಅಷ್ಟೇ ಅಲ್ಲದೆ, ಉದಾಸಿ ಕುಟುಂಬ ಮೇಲ್ನೋಟಕ್ಕಷ್ಟೆ ಚುನಾವಣೆಯಲ್ಲಿ ಭಾಗಿಯಾಗಿತ್ತು. ಇದರಿಂದಾಗಿ ಉದಾಸಿ ಕುಟುಂಬದ ನಿಷ್ಠಾವಂತ ಜಾತ್ಯಾತೀತ ಮತಗಳು ಈ ಬಾರಿ ಕಾಂಗ್ರೆಸ್ ಕೈ ಹಿಡಿದಿದೆ.

ಇದನ್ನೂ ಓದಿ: Hangal By Election Winner: ಹಾನಗಲ್​ನಲ್ಲಿ ಬಿಜೆಪಿಗೆ ಹೀನಾಯ ಸೋಲು; ಕಾಂಗ್ರೆಸ್​​ನ ಶ್ರೀನಿವಾಸ ಮಾನೆಗೆ ಮಣೆ ಹಾಕಿದ ಮತದಾರ?

ಇದನ್ನೂ ಓದಿ: ಹಾನಗಲ್​ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ 1 ಎಕರೆ ಜಮೀನು ಬೆಟ್ಟಿಂಗ್ ಕಟ್ಟಿದ ಅಭಿಮಾನಿ

Published On - 2:51 pm, Tue, 2 November 21