ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ; ಪ್ರಿಯ ವಿರಾಟ್, ಈ ಜನರು ದ್ವೇಷದಿಂದ ತುಂಬಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್
"ಪ್ರಿಯ ವಿರಾಟ್, ಈ ಜನರು ದ್ವೇಷದಿಂದ ತುಂಬಿದ್ದಾರೆ ಏಕೆಂದರೆ ಯಾರೂ ಅವರಿಗೆ ಯಾರೂ ಪ್ರೀತಿಯನ್ನು ನೀಡುವುದಿಲ್ಲ. ಅವರನ್ನು ಕ್ಷಮಿಸಿ. ತಂಡವನ್ನು ರಕ್ಷಿಸಿ" ಎಂದು ರಾಹುಲ್ ಗಾಂಧಿ ಮಂಗಳವಾರ ಸಂಜೆ ಟ್ವೀಟ್ ಮಾಡಿದ್ದಾರೆ.
ದೆಹಲಿ: ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಾಗ ಸಹ ಆಟಗಾರ ಮೊಹಮ್ಮದ್ ಶಮಿ ವಿರುದ್ಧ ಟೀಕಾಪ್ರಹಾರಗಳು ನಡೆದಿತ್ತು . ಈ ವೇಳೆ ಶಮಿಗೆ ಬೆಂಬಲವಾಗಿ ನಿಂತಿದ್ದಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಒಂಬತ್ತು ತಿಂಗಳ ಮಗಳ ಮೇಲೆ ಅತ್ಯಾಚಾರ ಬೆದರಿಕೆ ಬಂದಿದ್ದು, ವಿರಾಟ್ ಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. “ಪ್ರಿಯ ವಿರಾಟ್, ಈ ಜನರು ದ್ವೇಷದಿಂದ ತುಂಬಿದ್ದಾರೆ ಏಕೆಂದರೆ ಯಾರೂ ಅವರಿಗೆ ಯಾರೂ ಪ್ರೀತಿಯನ್ನು ನೀಡುವುದಿಲ್ಲ. ಅವರನ್ನು ಕ್ಷಮಿಸಿ. ತಂಡವನ್ನು ರಕ್ಷಿಸಿ” ಎಂದು ರಾಹುಲ್ ಗಾಂಧಿ ಮಂಗಳವಾರ ಸಂಜೆ ಟ್ವೀಟ್ ಮಾಡಿದ್ದಾರೆ.
Dear Virat,
These people are filled with hate because nobody gives them any love. Forgive them.
Protect the team.
— Rahul Gandhi (@RahulGandhi) November 2, 2021
ಇವತ್ತು ಬೆಳಗ್ಗೆ ದೆಹಲಿ ಮಹಿಳಾ ಆಯೋಗವು ದೆಹಲಿ ಪೊಲೀಸರಿಗೆ ನೋಟಿಸ್ ಕಳುಹಿಸಿದ್ದು, ಕೊಹ್ಲಿ ಮಗಳ ವಿರುದ್ಧ ಬೆದರಿಕೆಗಳ ತನಿಖೆಯ ಕುರಿತು ಕ್ರಮ ತೆಗೆದುಕೊಳ್ಳಲು ಹೇಳಿದೆ. ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಮಗಳ ವಿರುದ್ಧದ ಬೆದರಿಕೆಗಳು “ತುಂಬಾ ನಾಚಿಕೆಗೇಡಿನವು” ಎಂದು ಡಿಸಿಡಬ್ಲ್ಯೂ ಅಧ್ಯಕ್ಷರು ಹೇಳಿದ್ದು ಬೆದರಿಕೆ ಹಾಕುತ್ತಿರುವವರನ್ನು ತರಾಟೆಗೆ ತೆಗೆದುಕೊಂಡರು.
“ತಂಡವು ನಮಗೆ ಸಾವಿರಾರು ಬಾರಿ ಹೆಮ್ಮೆ ತಂದಿದೆ, ಸೋಲಿನಲ್ಲಿ ಏಕೆ ಈ ಮೂರ್ಖತನ?” ಎಂದು ಪ್ರಶ್ನಿಸಿದ ಡಿಸಿಡಬ್ಲ್ಯು ಈ ಬಗ್ಗೆ ತನಿಖೆ ಮತ್ತು ಬಂಧನಗಳ ಮಾಹಿತಿ ಕೇಳಿದೆ. “ಯಾವುದೇ ಆರೋಪಿಯನ್ನು ಬಂಧಿಸದಿದ್ದರೆ, ದಯವಿಟ್ಟು ಆರೋಪಿಯನ್ನು ಬಂಧಿಸಲು ದೆಹಲಿ ಪೊಲೀಸರು ತೆಗೆದುಕೊಂಡ ಕ್ರಮಗಳ ವಿವರಗಳನ್ನು ಒದಗಿಸಿ” ಎಂದು ನೋಟಿಸ್ ನಲ್ಲಿ ನಿರ್ದೇಶಿಸಲಾಗಿದೆ. ನವೆಂಬರ್ 8ರೊಳಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಕಳೆದ ವಾರ ಕೊಹ್ಲಿ ಧಾರ್ಮಿಕ ತಾರತಮ್ಯದ ವಿರುದ್ಧ ತೀವ್ರವಾಗಿಯೇ ಪ್ರತಿಕ್ರಿಯಿಸಿದ್ದರು. ” ಧರ್ಮದ ವಿಷಯದಲ್ಲಿ ಯಾರ ಮೇಲಾದರೂ ಆಕ್ರಮಣ ಮಾಡುವುದು ಒಬ್ಬ ಮನುಷ್ಯ ಮಾಡಬಹುದಾದ ಅತ್ಯಂತ ಕರುಣಾಜನಕ ವಿಷಯ. ಅದು ಅತ್ಯಂತ ಪವಿತ್ರ ಮತ್ತು ವೈಯಕ್ತಿಕ ವಿಷಯವಾಗಿದೆ. ಜನರು ತಮ್ಮ ಹತಾಶೆಯನ್ನು ಹೊರಹಾಕುತ್ತಾರೆ. ಏಕೆಂದರೆ ನಾವು ಏನು ಮಾಡುತ್ತೇವೆ ಎಂಬುದರ ಬಗ್ಗೆ ಅವರಿಗೆ ತಿಳುವಳಿಕೆ ಇಲ್ಲ” ಎಂದು ಅವರು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದ ಮೊದಲು ಸುದ್ದಿಗಾರರಿಗೆ ತಿಳಿಸಿದರು.
“ನಾವು ಮೈದಾನದಲ್ಲಿ ಆಡುತ್ತಿದ್ದೇವೆ, ನಾವು ಸಾಮಾಜಿಕ ಮಾಧ್ಯಮದಲ್ಲಿ ಬೆನ್ನುಮೂಳೆಯಿಲ್ಲದ ಜನರ ಗುಂಪಲ್ಲ, ಇದು ಕೆಲವು ಜನರಿಗೆ ಮನರಂಜನೆಯ ಮೂಲವಾಗಿದೆ, ಇದು ತುಂಬಾ ದುಃಖಕರವಾಗಿದೆ. ಈ ಎಲ್ಲಾ ನಾಟಕವು ಜನರ ಹತಾಶೆಯಿಂದಾಗಿದೆ”ನಾವು ಅವರ ಪರವಾಗಿ ಶೇಕಡಾ 200 ರಷ್ಟು ನಿಲ್ಲುತ್ತೇವೆ. ತಂಡದಲ್ಲಿನ ನಮ್ಮ ಸಹೋದರತ್ವವನ್ನು ಅಲುಗಾಡಿಸಲು ಸಾಧ್ಯವಿಲ್ಲ.” ಎಂದು ಕೊಹ್ಲಿ ಹೇಳಿದ್ದಾರೆ.
Mohammad #Shami we are all with you.
These people are filled with hate because nobody gives them any love. Forgive them.
— Rahul Gandhi (@RahulGandhi) October 25, 2021
ಮೊಹಮ್ಮದ್ ಶಮಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ ಗಾಂಧಿ, “ಅವರನ್ನು ಕ್ಷಮಿಸಿ… ಅವರು ದ್ವೇಷದಿಂದ ತುಂಬಿದ್ದಾರೆ” ಎಂದು ಕೇಳಿದ್ದರು. ಮೊಹಮ್ಮದ್ ಶಮಿ ನಾವೆಲ್ಲರೂ ನಿಮ್ಮೊಂದಿಗಿದ್ದೇವೆ. ಈ ಜನರು ದ್ವೇಷದಿಂದ ತುಂಬಿದ್ದಾರೆ ಏಕೆಂದರೆ ಯಾರೂ ಅವರಿಗೆ ಯಾವುದೇ ಪ್ರೀತಿಯನ್ನು ನೀಡುವುದಿಲ್ಲ. ಅವರನ್ನು ಕ್ಷಮಿಸಿ” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Virat Kohli: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ