Madhu Case Verdict: ಕಳ್ಳನೆಂದು ಆರೋಪಿಸಿ ಜನರು ಹೊಡೆದು ಕೊಂದ ಕೇರಳದ ಮಧು ಹತ್ಯೆ ಪ್ರಕರಣದಲ್ಲಿ 14 ಮಂದಿ ತಪ್ಪಿತಸ್ಥರು; ನಾಳೆ ಶಿಕ್ಷೆ ಪ್ರಕಟ

Attappadi Madhu lynching case: 2018ರ ಫೆ.22ರಂದು ಅಟ್ಟಪಾಡಿ ಚಿಂಡೇರಿ ಊರಿನ ಮಲ್ಲನ್‌ ಮತ್ತು ಮಲ್ಲಿ ದಂಪತಿಯ ಪುತ್ರ ಮಧು (30) ಗುಂಪು ದಾಳಿಗೆ ಬಲಿಯಾಗಿದ್ದರು. ಮಾನಸಿಕ ಅಸ್ವಸ್ಥನಾಗಿದ್ದ ಮಧು ತನ್ನ ಕುಟುಂಬದಿಂದ ದೂರವಿರುವ ಕಾಡಿನ ಗುಹೆಯಲ್ಲಿ ವಾಸಿಸುತ್ತಿದ್ದ. ಜನರ ಗುಂಪೊಂದು ಮಧುವನ್ನು ಕಳ್ಳ ಎಂದು ಆರೋಪಿಸಿ ಕಾಡಿನಿಂದ ಹಿಡಿದು ಮುಕ್ಕಾಲಿಗೆ ಕರೆತಂದಿತ್ತು

Madhu Case Verdict: ಕಳ್ಳನೆಂದು ಆರೋಪಿಸಿ ಜನರು ಹೊಡೆದು ಕೊಂದ ಕೇರಳದ ಮಧು ಹತ್ಯೆ ಪ್ರಕರಣದಲ್ಲಿ 14 ಮಂದಿ ತಪ್ಪಿತಸ್ಥರು; ನಾಳೆ ಶಿಕ್ಷೆ ಪ್ರಕಟ
ಗುಂಪುದಾಳಿಗೆ ಬಲಿಯಾಗಿದ್ದ ಮಧು
Follow us
|

Updated on: Apr 04, 2023 | 5:19 PM

ಮಣ್ಣಾರ್​​ಕ್ಕಾಡ್ (ಪಾಲಕ್ಕಾಡ್): ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಕೇರಳದ (Kerala) ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ ಮಧು ಹತ್ಯೆ ಪ್ರಕರಣದಲ್ಲಿ (Attappady Madhu lynching case) 14 ಆರೋಪಿಗಳು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ. ಇಬ್ಬರನ್ನು ಖುಲಾಸೆ ಮಾಡಲಾಯಿತು. ಈ ಪ್ರಕರಣದಲ್ಲಿ 4ನೇ ಮತ್ತು 11ನೇ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಪ್ರಕರಣದಲ್ಲಿ 16 ಮಂದಿ ಆರೋಪಿಗಳಿದ್ದಾರೆ. ತಪ್ಪಿತಸ್ಥರಿಗೆ ಬುಧವಾರ ಶಿಕ್ಷೆ ವಿಧಿಸಲಾಗುವುದು. ಘಟನೆ ನಡೆದು 5 ವರ್ಷಗಳ ಬಳಿಕ ಮಣ್ಣಾರ್​​ಕ್ಕಾಡ್ (mannarkkad)  ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಐದು ವರ್ಷಗಳ ಬಳಿಕ ಪ್ರಕರಣದ ತೀರ್ಪು ಪ್ರಕಟವಾಗಿದೆ. ಮಣ್ಣಾರ್​​ಕ್ಕಾಡ್ ಎಸ್ಸಿ-ಎಸ್ಟಿ ವಿಶೇಷ ನ್ಯಾಯಾಲಯದ  ನ್ಯಾಯಾಧೀಶ ಕೆ.ಎಂ.ರತೀಶ್ ಕುಮಾರ್ ಪ್ರಕರಣದ ತೀರ್ಪು ಪ್ರಕಟಿಸಿದ್ದಾರೆ.

ಮಧು ಹತ್ಯೆ ಪ್ರಕರಣದಲ್ಲಿ ಮಾರ್ಚ್ 10 ರಂದು ವಿಚಾರಣೆ ಪೂರ್ಣಗೊಂಡಿತು. ಮಾರ್ಚ್ 18 ರಂದು ತೀರ್ಪು ನೀಡುವುದಾಗಿ ಘೋಷಿಸಲಾಗಿತ್ತು, ಆದರೆ ನಂತರ ಅದನ್ನು ಮಾರ್ಚ್ 30 ಕ್ಕೆ ಮುಂದೂಡಲಾಯಿತು.ಮಾರ್ಚ್ 30ರಂದು ಪ್ರಕರಣದ ವಿಚಾರಣೆ ನಡೆದಾಗ ಏಪ್ರಿಲ್4ರಂದು ತೀರ್ಪು ಪ್ರಕಟಿಸಲು ಮತ್ತೆ ಮುಂದೂಡಲಾಗಿತ್ತು. ಮಧು ಅವರ ತಾಯಿ ಮಲ್ಲಿ ಹಾಗೂ ಸಹೋದರಿ ಸರಸು ಅವರಿಗೆ ವಿಶೇಷ ಪೊಲೀಸ್ ರಕ್ಷಣೆ ನೀಡಲಾಗಿತ್ತು. ಮಧು ಅವರ ತಾಯಿ ಪೊಲೀಸ್ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣದಲ್ಲಿ 16 ಆರೋಪಿಗಳಿದ್ದರು. ಹನ್ನೊಂದು ತಿಂಗಳ ಸಾಕ್ಷ್ಯದ ನಂತರ ಪ್ರಕರಣದ ತೀರ್ಪು ಪ್ರಕಟಿಸಲಾಗಿದೆ. ಪ್ರಕರಣದಲ್ಲಿ 127 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದ್ದರೂ, ಅವರಲ್ಲಿ 24 ಮಂದಿ ಮಾತು ಬದಲಿಸಿದ್ದಾರೆ. ಫೆಬ್ರವರಿ 22, 2018 ರಂದು ಅಟ್ಟಪಾಡಿಯಲ್ಲಿ ಮಧು ಎಂಬ ಬುಡಕಟ್ಟು ಯುವಕನನ್ನು ಕಳ್ಳತನದ ಆರೋಪದ ಮೇಲೆ ಗುಂಪೊಂದು ಹತ್ಯೆ ಮಾಡಿತ್ತು.

ಇದನ್ನೂ ಓದಿ: Sikkim Avalanche: ಸಿಕ್ಕಿಂನಲ್ಲಿ ಭಾರಿ ಹಿಮಕುಸಿತ: 6 ಪ್ರವಾಸಿಗರು ಸಾವು

ಏನಿದು ಪ್ರಕರಣ?

2018ರ ಫೆ.22ರಂದು ಅಟ್ಟಪಾಡಿ ಚಿಂಡೇರಿ ಊರಿನ ಮಲ್ಲನ್‌ ಮತ್ತು ಮಲ್ಲಿ ದಂಪತಿಯ ಪುತ್ರ ಮಧು (30) ಗುಂಪು ದಾಳಿಗೆ ಬಲಿಯಾಗಿದ್ದರು. ಮಾನಸಿಕ ಅಸ್ವಸ್ಥನಾಗಿದ್ದ ಮಧು ತನ್ನ ಕುಟುಂಬದಿಂದ ದೂರವಿರುವ ಕಾಡಿನ ಗುಹೆಯಲ್ಲಿ ವಾಸಿಸುತ್ತಿದ್ದ. ಜನರ ಗುಂಪೊಂದು ಮಧುವನ್ನು ಕಳ್ಳ ಎಂದು ಆರೋಪಿಸಿ ಕಾಡಿನಿಂದ ಹಿಡಿದು ಮುಕ್ಕಾಲಿಗೆ ಕರೆತಂದಿತ್ತು. ಮಧುವನ್ನು ಮುಕ್ಕಾಲಿ ಸಮೀಪದ ಕಾಡಿನೊಳಗಿಂದ ಹಿಡಿದು ಆರೋಪಿಗಳು ಅಮಾನುಷವಾಗಿ ಥಳಿಸಿದ್ದಾರೆ.  ಅಕ್ಕಿ ಕದ್ದಿದ್ದಾನೆಂದು ಆರೋಪಿಸಿ ಆಂಡಿಯಾಲಚಲದಲ್ಲಿ ಮಧು ವಾಸವಿದ್ದ ಸ್ಥಳದಿಂದ ಪತ್ತೆಯಾದ ಅಕ್ಕಿ, ಮಾಲನ್ನು ಮೂಟೆ ಕಟ್ಟಿ ಮಧು ಅವರ ಹೆಗಲ ಮೇಲೆ ಹಾಕಿ ಆರೋಪಿಗಳು ಮುಕ್ಕಾಲಿಗೆ ಕರೆತಂದು ಗುಂಪು ಸೇರಿ ಥಳಿಸಿದ್ದರು. ಮುಕ್ಕಾಲಿಗೆ ತಲುಪಿದ ಪೊಲೀಸರು ಮಧುವನ್ನು ವಶಕ್ಕೆ ತೆಗೆದುಕೊಂಡಿದ್ದರು. ಅಗಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಷ್ಟರಲ್ಲಿ ಮಧು ಮೃತಪಟ್ಟಿದ್ದಾನೆ. ಆರೋಪಿಗಳ ದಾಳಿಯಿಂದ ಮಧುಗೆ ಗಾಯಗಳಾಗಿದ್ದವು. ಕಾಡಿನಲ್ಲಿ ಮಧು ಇದ್ದಾನೆ ಎಂಬ ಮಾಹಿತಿ ಪಡೆದು ಆರೋಪಿಗಳು ಕಾಡಿಗೆ ನುಗ್ಗಿದ ಪ್ರಕರಣವೂ ಅರಣ್ಯ ಇಲಾಖೆಯಲ್ಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ