ಆಟೊರಿಕ್ಷಾವೇ ಆಂಬುಲೆನ್ಸ್; ಈವರೆಗೆ ತನ್ನ ಆಂಬುಲೆನ್ಸ್​ನಲ್ಲಿ 500 ಕೊವಿಡ್ ರೋಗಿಗಳನ್ನು ಕರೆದೊಯ್ದಿದ್ದಾರೆ ಕೇರಳದ ಈ ಆಟೊ ಚಾಲಕ

Covid 19: ಕೊವಿಡ್ ರೋಗ ಲಕ್ಷಣಗಳಿರುವ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಕೆಲಸವನ್ನು ಪ್ರೇಮಚಂದ್ರನ್ ಅವರಿಗೆ ಮೊದಲು ಮಾಡುತ್ತಿದ್ದರು. ಆಮೇಲೆ ಕೊವಿಡ್ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಿರುವ ಕರೆಗಳು ಬರುತ್ತಲೇ ಇದ್ದವು

ಆಟೊರಿಕ್ಷಾವೇ ಆಂಬುಲೆನ್ಸ್; ಈವರೆಗೆ ತನ್ನ ಆಂಬುಲೆನ್ಸ್​ನಲ್ಲಿ 500 ಕೊವಿಡ್ ರೋಗಿಗಳನ್ನು ಕರೆದೊಯ್ದಿದ್ದಾರೆ ಕೇರಳದ ಈ ಆಟೊ ಚಾಲಕ
ಪ್ರೇಮಚಂದ್ರನ್

Updated on: May 24, 2021 | 7:33 PM

ಪಯ್ಯನ್ನೂರ್: ಮುಂಬೈ ಮೂಲದ ಶಿಕ್ಷಕರೊಬ್ಬರು ತಾತ್ಕಾಲಿಕ ಆಂಬುಲೆನ್ಸ್ ಮತ್ತು ದಾಲ್ ಲೇಕ್‌ನ ತೇಲುವ ಆಂಬುಲೆನ್ಸ್ ಸೇವೆಯ ನಂತರ, ಕೇರಳದ ಆಟೊ ಡ್ರೈವರೊಬ್ಬರು ಕೊವಿಡ್ ರೋಗಿಗಳನ್ನು ತನ್ನ ಆಟೊರಿಕ್ಷಾದಲ್ಲಿ ಆಸ್ಪತ್ರೆಗಳಿಗೆ ಕರೆದೊಯ್ಯುತ್ತಿರುವ ಕಾರ್ಯಕ್ಕೆ ನೆಟ್ಟಿಗರು ಪ್ರಶಂಸಿಸಿದ್ದಾರೆ.

ಕೇರಳದ ಪಯ್ಯನ್ನೂರ್ ಬಳಿಯ ವೆಲ್ಲೂರಿನ 51 ವರ್ಷದ ಪ್ರೇಮಚಂದ್ರನ್ ತಾತ್ಕಾಲಿಕ ಆಂಬ್ಯುಲೆನ್ಸ್‌ನಲ್ಲಿ ಈವರೆಗೆ ಸುಮಾರು 500 ರೋಗಿಗಳನ್ನು ಕರೆದೊಯ್ದಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.


ಕೊವಿಡ್ ರೋಗ ಲಕ್ಷಣಗಳಿರುವ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಕೆಲಸವನ್ನು ಪ್ರೇಮಚಂದ್ರನ್ ಅವರಿಗೆ ಮೊದಲು ಮಾಡುತ್ತಿದ್ದರು. ಆಮೇಲೆ ಕೊವಿಡ್ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಿರುವ ಕರೆಗಳು ಬರುತ್ತಲೇ ಇದ್ದವು. ಅಂತಹ ರೋಗಿಗಳೊಂದಿಗೆ ಸಂಪರ್ಕ ಸಾಧಿಸಲು ಸ್ಥಳೀಯ ಅಧಿಕಾರಿಗಳು ಸಹಾಯ ಮಾಡಿದ್ದಾರೆ ಆಂತಾರೆ ಪ್ರೇಮಚಂದ್ರನ್.

ಆಶಾ ಕಾರ್ಮಿಕರು ಮತ್ತು ಸ್ಥಳೀಯ ಅಧಿಕಾರಿಗಳು ನನಗೆ ವೈದ್ಯಕೀಯ ನೆರವು ಅಗತ್ಯವಿರುವವರ ಪ್ರಯಾಣದ ಬಗ್ಗೆ ಮಾಹಿತಿ ನೀಡಿದರು. ಲಾಕ್‌ಡೌನ್ ಸಮಯದಲ್ಲಿ ಈ ರೀತಿಯ ಪ್ರಯಾಣ ಹೆಚ್ಚಿವೆ. ಪ್ರತಿ ಪ್ರಯಾಮದ ನಂತರ ನಾನು ಆಟೊವ್ನನು ಸೋಂಕುರಹಿತಗೊಳಿಸುತ್ತೇನೆ ಎಂದು ಪ್ರೇಮಚಂದ್ರನ್ ಹೇಳಿದ್ದಾರೆ.
51 ವರ್ಷದ ಪ್ರೇಮಚಂದ್ರನ್ ಅವಕ ಅವರ ಉದಾತ್ತ ಸೇವೆಯನ್ನು ನೆಟ್ಟಿಗರು ಜನರು ಶ್ಲಾಘಿಸಿದ್ದಾರೆ.

ಇತ್ತೀಚೆಗೆ, ಭೋಪಾಲ್ ವ್ಯಕ್ತಿಯೊಬ್ಬರು ತಮ್ಮ ಪ್ರದೇಶದಲ್ಲಿ ರಿಕ್ಷಾವನ್ನು ಆಂಬುಲೆನ್ಸ್ ಆಗಿ ಮಾರ್ಪಡಿಸಿದ ನಂತರ ಆನ್‌ಲೈನ್‌ನಲ್ಲಿ ಪ್ರಶಂಸೆ ಗಳಿಸಿದರು. ಕೊವಿಡ್ -19 ಪ್ರಕರಣಗಳು ತಮ್ಮ ಪ್ರದೇಶದಲ್ಲಿ ಹೆಚ್ಚಾಗಿದ್ದರಿಂದ ತುರ್ತು ಪ್ರತಿಕ್ರಿಯೆ ವಾಹನಗಳ ಕೊರತೆಯನ್ನು ಪೂರೈಸುತ್ತವೆ.

ಇದನ್ನೂ ಓದಿ: ಕೊವಿಡ್​ 19 ಸೋಂಕಿತರ ಸೇವೆ ಮಾಡುತ್ತಿರುವ ಇಂಗ್ಲಿಷ್ ಶಿಕ್ಷಕ; ಬಡ ರೋಗಿಗಳಿಗೆ ಇವರ ಆಟೋವೇ ಆಂಬುಲೆನ್ಸ್​

ಕೇರಳದಲ್ಲಿ ಕಮರ್ಷಿಯಲ್ ಪೈಲಟ್ ಆದ ಮೊದಲ ಮಹಿಳೆ ಜೆನಿ ಜೆರೊಮ್, ಈಕೆ ನಿಜವಾದ ಸ್ಫೂರ್ತಿ ಎಂದು ಶ್ಲಾಘಿಸಿದ ಶಶಿ ತರೂರ್