ಬೆಂಗಳೂರಿನಲ್ಲಿ ಟೆಕ್ಕಿಯಾಗಿರುವ ಸಿಎಂ ಪಿಣರಾಯಿ ಮಗಳ ಮತ್ತೊಂದು ಮದುವೆ ಫಿಕ್ಸ್, ವರ ಯಾರು?
ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಟಿ ಅವರ ವಿವಾಹ, CPI(M) ರಾಜ್ಯ ಸಮಿತಿ ಸದಸ್ಯ ಪಿಎ ಮೊಹಮದ್ ರಿಯಾಸ್ ಜೊತೆ ಶೀಘ್ರದಲ್ಲೇ ನೆರವೇರಲಿದೆ. ಜೂನ್ 15ರಂದು ವೀಣಾ, ಮೊಹಮದ್ ಮದುವೆ ನಡೆಯಲಿದೆ ಎಂದು ಎರಡೂ ಕುಟುಂಬಸ್ಥರು ತಿಳಿಸಿದ್ದಾರೆ. ಮಹಾಮಾರಿ ಕೊರೊನಾದಿಂದ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಮದುವೆ ಕಾರ್ಯಕ್ರಮಗಳಿಗೆ 50ಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ. ಹಾಗಾಗಿ ಸರಳವಾಗಿ ಮದುವೆಯಾಗಲು ವೀಣಾ, ಮೊಹಮದ್ ಕಡೆಯ ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಮೊಹಮದ್ ರಿಯಾಸ್ ಅವರು CPI(M) ಯುವ […]
ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಟಿ ಅವರ ವಿವಾಹ, CPI(M) ರಾಜ್ಯ ಸಮಿತಿ ಸದಸ್ಯ ಪಿಎ ಮೊಹಮದ್ ರಿಯಾಸ್ ಜೊತೆ ಶೀಘ್ರದಲ್ಲೇ ನೆರವೇರಲಿದೆ. ಜೂನ್ 15ರಂದು ವೀಣಾ, ಮೊಹಮದ್ ಮದುವೆ ನಡೆಯಲಿದೆ ಎಂದು ಎರಡೂ ಕುಟುಂಬಸ್ಥರು ತಿಳಿಸಿದ್ದಾರೆ.
ಮಹಾಮಾರಿ ಕೊರೊನಾದಿಂದ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಮದುವೆ ಕಾರ್ಯಕ್ರಮಗಳಿಗೆ 50ಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ. ಹಾಗಾಗಿ ಸರಳವಾಗಿ ಮದುವೆಯಾಗಲು ವೀಣಾ, ಮೊಹಮದ್ ಕಡೆಯ ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಮೊಹಮದ್ ರಿಯಾಸ್ ಅವರು CPI(M) ಯುವ ಘಟಕ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (DYFI) ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದಾರೆ.
ಸಿಎಂ ಪಿಣರಾಯಿ ವಿಜಯನ್ ಮಗಳು ವೀಣಾ ಟೆಕ್ಕಿಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಮೊದಲಿನಿಂದಲೂ ರಾಜಕೀಯದಿಂದ ದೂರು ಉಳಿದಿದ್ದಾರೆ. ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಇಬ್ಬರಿಗೂ ಇದು ಎರಡನೇ ಮದುವೆ: ಇಬ್ಬರಿಗೂ ಸಹ ಇದು ಎರಡನೇ ಮದುವೆಯಾಗಿದೆ. ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ. ಮೊಹಮದ್ ರಿಯಾಸ್ ಅವರು 2015ರಲ್ಲಿ ಮೊದಲ ಪತ್ನಿ ಡಾ.ಸಮೀಹಾ ಅವರಿಂದ ದೂರವಾಗಿದ್ದರು. ರಿಯಾಸ್ಗೆ ಇಬ್ಬರು ಪುತ್ರಿಯರಿದ್ದಾರೆ. ವೀಣಾ ಅವರಿಗೂ ಒಬ್ಬ ಪುತ್ರನಿದ್ದು, ಪತಿಯಿಂದ 5 ವರ್ಷಗಳಿಂದಲೂ ದೂರವಿದ್ದಾರೆ.
Published On - 12:07 pm, Wed, 10 June 20