
ತಿರುವನಂತಪುರಂ, ಏಪ್ರಿಲ್ 28: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan) ಕಚೇರಿ, ನಿವಾಸ ಹಾಗೂ ಕೊಚ್ಚಿ ಏರ್ಪೋರ್ಟ್ಗೆ ಬಾಂಬ್ ಬೆದರಿಕೆ(Bomb Threat) ಕರೆ ಬಂದಿದೆ. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಇಂದು ಮುಂಜಾನೆ ಬಾಂಬ್ ಬೆದರಿಕೆ ಕರೆ ಬಂದಿದೆ. ಅಧಿಕಾರಿಗಳು ಎಲ್ಲಾ ಸಂಪೂರ್ಣ ಆವರಣದಲ್ಲಿ ಶೋಧ ಕಾರ್ಯ ನಡೆಸಲು ಬಾಂಬ್ ಸ್ಕ್ವಾಡ್‌ಗಳನ್ನು ನಿಯೋಜಿಸಿದ್ದರು.
ತಿರುವನಂತಪುರಂನಲ್ಲಿರುವ ಮುಖ್ಯಮಂತ್ರಿ ಕಚೇರಿ ಮತ್ತು ನಿವಾಸಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಮೂಲಕ ಬಂದಿದ್ದು, ಕೇರಳ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪೀಡಿತ ಪ್ರದೇಶಗಳನ್ನು ಸುತ್ತುವರೆದಿದ್ದಾರೆ. ಸ್ನಿಫರ್ ನಾಯಿಗಳು ಮತ್ತು ವಿಶೇಷ ತಂಡಗಳೊಂದಿಗೆ, ಸಂಪೂರ್ಣ ತಪಾಸಣೆ ನಡೆಯುತ್ತಿದೆ. ಆದಾಗ್ಯೂ, ಇಲ್ಲಿಯವರೆಗೆ, ಎರಡೂ ಸ್ಥಳಗಳಲ್ಲಿ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ.
ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆಯನ್ನು pro@cial.aero ಗೆ ಬೆಳಗ್ಗೆ 07.53 ಕ್ಕೆ achimuthu_ahmed_shankar@outlook.com ಇಮೇಲ್ ಐಡಿಯಿಂದ ಕಳುಹಿಸಲಾಗಿತ್ತು, ಅದರಲ್ಲಿ “CIAL ನಲ್ಲಿ RDX ಆಧಾರಿತ ಸ್ಫೋಟಕ ಸಾಧನವನ್ನು ರಹಸ್ಯವಾಗಿ ಇಡಲಾಗಿದೆ. ಮಧ್ಯಾಹ್ನ 2 ಗಂಟೆಯೊಳಗೆ ಎಲ್ಲರೂ ಓಡಿ ಹೋಗಿ ಎಂದು ಅದರಲ್ಲಿ ಬರೆಯಲಾಗಿತ್ತು.
ಮತ್ತಷ್ಟು ಓದಿ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: 10 ಪ್ರಕರಣಗಳು ದಾಖಲು
ವಿಮಾನ ನಿಲ್ದಾಣದ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ (BTAC) ಬೆಳಗ್ಗೆ 8.55 ಕ್ಕೆ ಸಭೆ ಸೇರಿ, ತಕ್ಷಣದ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಯಿತು. ಸಿಐಎಸ್ಎಫ್ ಎಲ್ಲಾ ಟರ್ಮಿನಲ್‌ಗಳಲ್ಲಿ ವಿಧ್ವಂಸಕ ಕೃತ್ಯ ನಡೆಯದಂತೆ ತಡೆಯಲು ತಪಾಸಣೆ ನಡೆಸಿತು, ರಾಜ್ಯ ಪೊಲೀಸರು ನಗರಾದ್ಯಂತ ತಪಾಸಣೆ ನಡೆಸಿದ್ದಾರೆ.
ದಕ್ಷಿಣದ ಎಲ್ಲಾ ವಿಮಾನಗಳಿಗೆ ಭದ್ರತಾ ಕ್ರಮಗಳನ್ನು ಹೆಚ್ಚಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಯಿತು. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (CIAL) ರಾಜ್ಯ ಪೊಲೀಸರಿಗೆ ದೂರು ನೀಡಿದೆ ಮತ್ತು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ