ಸ್ಥಳೀಯ ಫೋಟೋಗ್ರಾಫರ್ ಕ್ಯಾಮರಾದಲ್ಲಿ ಸೆರೆಯಾಗಿತ್ತು ಪಹಲ್ಗಾಮ್ ದಾಳಿಯ ಪೂರ್ಣ ವಿಡಿಯೋ : ಎನ್‌ಐಎ ಮಾಹಿತಿ
: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನ ಪಹಲ್ಗಾಮ್(Pahalgam)ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಅಲ್ಲೇ ಇದ್ದ ಸ್ಥಳೀಯ ಫೋಟೊಗ್ರಾಫರ್ ಒಬ್ಬರು ರೆಕಾರ್ಡ್ ಮಾಡಿದ್ದಾರೆ ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಯೋತ್ಪಾದಕರು AK-47 ಮತ್ತು M4 ರೈಫಲ್‌ಗಳಿಂದ ಶಸ್ತ್ರಸಜ್ಜಿತರಾಗಿದ್ದರು, ಕಾರ್ಟ್ರಿಡ್ಜ್‌ಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಟ್ರಿಡ್ಜ್‌ಗಳು ಪ್ರಮುಖ ಸಾಕ್ಷ್ಯವಾಗಿರುತ್ತವೆ. ಈ ಉಗ್ರರು ದಟ್ಟ ಕಾಡುಗಳ ಮೂಲಕ 22 ಗಂಟೆಗಳ ಕಾಲ ನಡೆದು ಪಹಲ್ಗಾಮ್ ತಲುಪಿದ್ದರು.

ಶ್ರೀನಗರ, ಏಪ್ರಿಲ್ 28: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನ ಪಹಲ್ಗಾಮ್(Pahalgam)ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಅಲ್ಲೇ ಇದ್ದ ಸ್ಥಳೀಯ ಛಾಯಾಗ್ರಾಹಕರೊಬ್ಬರು ಒಬ್ಬರು ರೆಕಾರ್ಡ್ ಮಾಡಿದ್ದಾರೆ ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಯೋತ್ಪಾದಕರು AK-47 ಮತ್ತು M4 ರೈಫಲ್‌ಗಳಿಂದ ಶಸ್ತ್ರಸಜ್ಜಿತರಾಗಿದ್ದರು, ಕಾರ್ಟ್ರಿಡ್ಜ್‌ಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಟ್ರಿಡ್ಜ್‌ಗಳು ಪ್ರಮುಖ ಸಾಕ್ಷ್ಯವಾಗಿರುತ್ತವೆ. ಈ ಉಗ್ರರು ದಟ್ಟ ಕಾಡುಗಳ ಮೂಲಕ 22 ಗಂಟೆಗಳ ಕಾಲ ನಡೆದು ಪಹಲ್ಗಾಮ್ ತಲುಪಿದ್ದರು.
ನಾಲ್ವರು ಭಯೋತ್ಪಾದಕರು ದಾಳಿಯಲ್ಲಿ ಭಾಗಿಯಾಗಿದ್ದರು, ಅದರಲ್ಲಿ ಮೂವರು ಪಾಕಿಸ್ತಾನದವರು ಮತ್ತು ಒಬ್ಬರು ಸ್ಥಳೀಯ ಭಯೋತ್ಪಾದಕ ಆದಿಲ್ ಥೋಕರ್. ದಾಳಿಯ ಸಮಯದಲ್ಲಿ, ಭಯೋತ್ಪಾದಕರು ಎರಡು ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡರು, ಒಂದು ಪ್ರವಾಸಿಗರಿಗೆ ಸೇರಿದ್ದು ಮತ್ತು ಇನ್ನೊಂದು ಸ್ಥಳೀಯ ನಿವಾಸಿಗೆ ಸೇರಿದ್ದು.
ಭಯೋತ್ಪಾದಕರು ಘಟನೆಯನ್ನು ನಡೆಸುತ್ತಿದ್ದಾಗ, ಸ್ಥಳೀಯ ಛಾಯಾಗ್ರಾಹಕರೊಬ್ಬರು ಇಡೀ ದಾಳಿಯ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಎನ್‌ಐಎ ಮೂಲಗಳು ಬಹಿರಂಗಪಡಿಸಿವೆ. ಆ ಸಮಯದಲ್ಲಿ ಅವರು ತನ್ನನ್ನು ತಾನು ಉಳಿಸಿಕೊಳ್ಳಲು ಮರವನ್ನು ಹತ್ತಿದ್ದರು. ಈ ವೀಡಿಯೊ ತನಿಖೆಗೆ ಬಹಳ ಮುಖ್ಯವಾಗಿದೆ. ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಸೇರಿದಂತೆ ಘಟನೆಯ ಇತರ ಸಾಕ್ಷಿಗಳು ಸ್ಥಳದಲ್ಲಿದ್ದರು. ಪಹಲ್ಗಾಮ್ನಲ್ಲಿ ನಡೆದ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು.
ಮತ್ತಷ್ಟು ಓದಿ: ಶಸ್ತ್ರಾಸ್ತ್ರಗಳ ಹಿಡಿದು 22 ಗಂಟೆಗಳ ಕಾಲ ನಡೆದು ಕಾಡುಗಳ ಮೂಲಕ ಪಹಲ್ಗಾಮ್ ತಲುಪಿದ್ದ ಉಗ್ರರು
ಭದ್ರತಾ ಪಡೆಗಳು ಭಯೋತ್ಪಾದಕರ ಹುಟುಕಾಟದಲ್ಲಿ ತೊಡಗಿದ್ದಾರೆ. ಅನೇಕರನ್ನು ವಶಕ್ಕೆ ಪಡೆಯಲಾಗಿದೆ. ದೇಶಾದ್ಯಂತ ಜನರು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ದಾಳಿಯ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದೆ. ಗೃಹ ಸಚಿವಾಲಯದ ಆದೇಶದ ನಂತರ, ಎನ್‌ಐಎ ಅಧಿಕೃತವಾಗಿ ತನಿಖೆಯನ್ನು ಪ್ರಾರಂಭಿಸಿದೆ.
ಆ ಸಮಯದಲ್ಲಿ ಆತ ತನ್ನನ್ನು ತಾನು ಉಳಿಸಿಕೊಳ್ಳಲು ಮರವನ್ನು ಹತ್ತಿದ್ದ. ಈ ವೀಡಿಯೊ ತನಿಖೆಗೆ ಬಹಳ ಮಹತ್ವದ್ದಾಗಿದೆ. ಈ ವೀಡಿಯೊದ ಮೂಲಕ, ತನಿಖಾ ಸಂಸ್ಥೆಯು ದಾಳಿಯ ನಿಖರವಾದ ಸಮಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ಭಯೋತ್ಪಾದಕರನ್ನು ಗುರುತಿಸುವಲ್ಲಿಯೂ ಸಹಾಯ ಮಾಡುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ








