ದೆಹಲಿಯ ಕೆಂಪು ಕೋಟೆ, ಜಾಮಾ ಮಸೀದಿಗೆ ಹುಸಿ ಬಾಂಬ್ ಬೆದರಿಕೆ
ದೆಹಲಿಯಲ್ಲಿರುವ ಕೆಂಪು ಕೋಟೆ, ಜಾಮಾ ಮಸೀದಿಗೆ ಬಾಂಬ್ ಬೆದರಿಕೆ ಬಂದಿದೆ. ಆದರೆ, ಪರಿಶೀಲನೆಯ ಸಮಯದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೆಂಪು ಕೋಟೆ ಮತ್ತು ಜಾಮಾ ಮಸೀದಿಯನ್ನು ಗುರಿಯಾಗಿಸಿಕೊಂಡು ಹುಸಿ ಬಾಂಬ್ ಬೆದರಿಕೆ ಬಂದ ಕಾರಣ, ಭದ್ರತಾ ಸಂಸ್ಥೆಗಳು ಇಂದು ಸ್ಥಳಗಳಿಗೆ ಧಾವಿಸಿ ಸಂಪೂರ್ಣ ಪರಿಶೀಲನೆ ನಡೆಸಿವೆ. ಆದರೆ ಅನುಮಾನಾಸ್ಪದ ಏನೂ ಕಂಡುಬಂದಿಲ್ಲ, ಇದು ಹುಸಿ ಕರೆ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನವದೆಹಲಿ, ಏಪ್ರಿಲ್ 10: ಕೆಂಪು ಕೋಟೆ (Red Fort) ಮತ್ತು ಜಾಮಾ ಮಸೀದಿಯನ್ನು ಗುರಿಯಾಗಿಸಿಕೊಂಡು ಹುಸಿ ಬಾಂಬ್ ಬೆದರಿಕೆ ಬಂದಿದ್ದು, ದೆಹಲಿಯ ಭದ್ರತಾ ಸಂಸ್ಥೆಗಳು ಇಂದು ಬೆಳಿಗ್ಗೆ ಸ್ಥಳಗಳಿಗೆ ಧಾವಿಸಿ ಸಂಪೂರ್ಣ ಪರಿಶೀಲನೆ ನಡೆಸಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಐತಿಹಾಸಿಕ ಕೆಂಪು ಕೋಟೆ ಮತ್ತು ಜಾಮಾ ಮಸೀದಿಗೆ ಇಂದು ಬಾಂಬ್ ಬೆದರಿಕೆ ಕರೆ ಬಂದಿದೆ. ದೆಹಲಿ ಪೊಲೀಸರ ಪ್ರಕಾರ, ಪರಿಶೀಲನೆಯ ಸಮಯದಲ್ಲಿ ಅನುಮಾನಾಸ್ಪದ ಏನೂ ಕಂಡುಬಂದಿಲ್ಲ ಮತ್ತು ಇದು ಸುಳ್ಳು ಬೆದರಿಕೆ ಕರೆ ಎಂದು ಘೋಷಿಸಲಾಗಿದೆ.
ಕೆಂಪು ಕೋಟೆ ಮತ್ತು ಜಾಮಾ ಮಸೀದಿಗಳ ಆವರಣದಲ್ಲಿ ಬಾಂಬ್ ಇರುವ ಬಗ್ಗೆ ಇಂದು ಬೆಳಿಗ್ಗೆ 9 ಗಂಟೆಗೆ ಫೋನ್ ಕರೆ ಬಂದಿದ್ದು, ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ ಎಂದು ಅಧಿಕಾರಿ ಹೇಳಿದ್ದಾರೆ. “ನಾವು ಸ್ಥಳದಲ್ಲಿ ಒಂದು ಅಗ್ನಿಶಾಮಕ ದಳವನ್ನು ಧಾವಿಸಿ ಸಂಪೂರ್ಣ ಶೋಧ ನಡೆಸಿದ್ದೇವೆ. ಆದರೆ, ಆ ಎರಡೂ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ” ಎಂದು ಪೊಲೀಸರು ಹೇಳಿದ್ದಾರೆ.
Red Fort and Jama Masjid received bomb threat call. According to Delhi Police, nothing suspicious was found during the check and the call was declared as hoax: Delhi Police
— ANI (@ANI) April 10, 2025
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಶಾಸಕರ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ಯುವಕ
ಬೆದರಿಕೆ ಕರೆ ಸ್ವೀಕರಿಸಿದ ನಂತರ ಬಾಂಬ್ ನಿಷ್ಕ್ರಿಯ ತಂಡಗಳು ಮತ್ತು ಸಿಐಎಸ್ಎಫ್ ಇಡೀ ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸಿದವು. ಈ ಹಿಂದೆ ಕಳೆದ ತಿಂಗಳು ಅಂದರೆ ಮಾರ್ಚ್ ತಿಂಗಳಲ್ಲಿ ಕೂಡ ರಾಷ್ಟ್ರ ರಾಜಧಾನಿ ದೆಹಲಿಯ ತಮಿಳುನಾಡು ಭವನದಲ್ಲಿ ಬಾಂಬ್ ಬೆದರಿಕೆ ಬಂದಿತ್ತ. ತಕ್ಷಣ ದೆಹಲಿ ಪೊಲೀಸರು ಮತ್ತು ದೆಹಲಿ ಅಗ್ನಿಶಾಮಕ ಸೇವೆಗಳಂದ ತಪಾಸಣೆ ನಡೆಸಲಾಗಿತ್ತು. ಆಗಲೂ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿರಲಿಲ್ಲ. ಹಾಗೇ, ಫೆಬ್ರವರಿ 7ರಂದು ದೆಹಲಿ ಮತ್ತು ನೋಯ್ಡಾದ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ