AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂದಿದ್ದು ಬಾಂಬ್ ಬೆದರಿಕೆ, ಕಚ್ಚಿದ್ದು ಜೇನು ನೊಣಗಳು, 70 ಮಂದಿಗೆ ಗಾಯ

ಬಾಂಬ್​ಗಾಗಿ ಶೋಧ ನಡೆಸುತ್ತಿದ್ದಾಗ, 70 ಮಂದಿಗೆ ಜೇನು ನೊಣಗಳು ಕಚ್ಚಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ತಿರುವನಂತಪುರಂ ಕಲೆಕ್ಟರೇಟ್‌ಗೆ ಬಾಂಬ್ ಬೆದರಿಕೆ ಬಂದಿತ್ತು. ಹೀಗಾಗಿ ಅಲ್ಲಿ ಬಾಂಬ್​ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಜೇನು ನೊಣಗಳು ದಾಳಿ ನಡೆಸಿ 70 ಮಂದಿಯನ್ನು ಗಾಯಗೊಳಿಸಿದೆ. ಬಾಂಬ್ ಹುಡುಕಾಟದಲ್ಲಿ ಪೊಲೀಸ್ ಹಾಗೂ ಬಾಂಬ್ ನಿಷ್ಕ್ರಿಯ ದಳ ತೊಡಗಿತ್ತು, ಈ ಸಂದರ್ಭದಲ್ಲಿ ಜೇನು ನೊಣಗಳ ಗೂಡಿಗೆ ಯಾವುದೋ ವಸ್ತು ತಾಕಿದೆ

ಬಂದಿದ್ದು ಬಾಂಬ್ ಬೆದರಿಕೆ, ಕಚ್ಚಿದ್ದು ಜೇನು ನೊಣಗಳು, 70 ಮಂದಿಗೆ ಗಾಯ
ಜೇನು ನೊಣImage Credit source: Food and agricultural organisation
ನಯನಾ ರಾಜೀವ್
|

Updated on: Mar 19, 2025 | 10:48 AM

Share

ತಿರುವನಂತಪುರಂ, ಮಾರ್ಚ್​ 19: ಬಾಂಬ್​ಗಾಗಿ ಶೋಧ ನಡೆಸುತ್ತಿದ್ದಾಗ, 70 ಮಂದಿಗೆ ಜೇನು ನೊಣಗಳು ಕಚ್ಚಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ತಿರುವನಂತಪುರಂ ಕಲೆಕ್ಟರೇಟ್‌ಗೆ ಬಾಂಬ್ ಬೆದರಿಕೆ ಬಂದಿತ್ತು. ಹೀಗಾಗಿ ಅಲ್ಲಿ ಬಾಂಬ್​ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಜೇನು ನೊಣಗಳು ದಾಳಿ ನಡೆಸಿ 70 ಮಂದಿಯನ್ನು ಗಾಯಗೊಳಿಸಿದೆ.

ಬಾಂಬ್ ಹುಡುಕಾಟದಲ್ಲಿ ಪೊಲೀಸ್ ಹಾಗೂ ಬಾಂಬ್ ನಿಷ್ಕ್ರಿಯ ದಳ ತೊಡಗಿತ್ತು, ಈ ಸಂದರ್ಭದಲ್ಲಿ ಜೇನು ನೊಣಗಳ ಗೂಡಿಗೆ ಯಾವುದೋ ವಸ್ತು ತಾಕಿದೆ. ಆಗ ಒಮ್ಮೆಲೆ ನೊಣಗಳು ದಾಳಿ ಮಾಡಲು ಆರಂಭಿಸಿದ್ದವು. ಗಾಯಗೊಂಡವರಲ್ಲಿ ಸರ್ಕಾರಿ ಅಧಿಕಾರಿಗಳು, ಪೊಲೀಸರು, ಪತ್ರಕರ್ತರು ಸೇರಿದ್ದಾರೆ.

ಕಟ್ಟಡದ ಹಿಂಭಾಗದಲ್ಲಿರುವ ಜೇನುಗೂಡಿನಿಂದ ಜೇನುನೊಣಗಳು ಬಂದವು ಮತ್ತು ತೀವ್ರವಾದ ಕಡಿತದಿಂದ ಬಳಲುತ್ತಿದ್ದವರನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಕೆಲವು ಜನರಿಗೆ ಐವಿ ಡ್ರಿಪ್ಸ್ ಅಗತ್ಯವಿತ್ತು ಹಾಕಲಾಗಿದೆ. ಸಂದರ್ಭದಲ್ಲಿ, ಇಂತಹ ಘಟನೆ ಇದ್ದಕ್ಕಿದ್ದಂತೆ ಸಂಭವಿಸಬಹುದು ಎಂದು ನಾವು ನಿರೀಕ್ಷಿಸಿರಲಿಲ್ಲ. ಅದು ದುರದೃಷ್ಟಕರ.

ಮಂಗಳವಾರ ಮಧ್ಯಾಹ್ನ ಬಾಂಬ್ ನಿಷ್ಕ್ರಿಯ ದಳವು ಸಪಾಸಣೆಯ ಮಧ್ಯದಲ್ಲಿದ್ದಾಗ ದಾಳಿ ಸಂಭವಿಸಿದೆ. ಇ-ಮೇಲ್​ನಲ್ಲಿ ಪೈಪ್​ಗಳಲ್ಲಿ ಆರ್​ಡಿಎಕ್ಸ್​ನಂತಹ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ನಂತರ ಪೊಲೀಸರಿಗೆ ಕರೆ ಮಾಡಲಾಗಿತ್ತು.

ಮತ್ತಷ್ಟು ಓದಿ: ಜೇನು ನೊಣಗಳಿಂದ ಚುಚ್ಚಿಸಿಕೊಳ್ಳಲೆಂದೇ ಈ ವ್ಯಕ್ತಿಯ ಬಳಿ ಬರುತ್ತಿರುವ ಜನರು

ಸಂಪೂರ್ಣ ಪರಿಶೀಲನೆಯ ನಂತರ, ಬಾಂಬ್ ಬೆದರಿಕೆ ಸುಳ್ಳು ಎಂದು ಅಧಿಕಾರಿಗಳು ದೃಢಪಡಿಸಿದರು. ಪೊಲೀಸರು ಈಗ ಇಮೇಲ್‌ನ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದರೆ ಜೇನು ನೊಣ ಕಚ್ಚಿದ್ದು ಮಾತ್ರ ಸತ್ಯ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ