ಜೇನು ನೊಣಗಳಿಂದ ಚುಚ್ಚಿಸಿಕೊಳ್ಳಲೆಂದೇ ಈ ವ್ಯಕ್ತಿಯ ಬಳಿ ಬರುತ್ತಿರುವ ಜನರು

Madhukeshwar Hegde: ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸದಾಶಿವಳ್ಳಿ ಗ್ರಾಮದ ತಾರಗೋಡಿಯ ಜೇನು ಕೃಷಿಕ ಡಾ.ಮಧುಕೇಶ್ವರ ಹೆಗಡೆ ಅವರ ಬಳಿ ದೇಶ ವಿದೇಶಗಳಿಂದಲೂ ಜನರು ಬಂದು ಜೇನು ಚುಚ್ಚಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಮಧುಕೇಶ್ವರ ಅವರು ಉತ್ತಮ ಆದಾಯವನ್ನು ಕೂಡ ಗಳಿಸುತ್ತಿದ್ದಾರೆ.

ಜೇನು ನೊಣಗಳಿಂದ ಚುಚ್ಚಿಸಿಕೊಳ್ಳಲೆಂದೇ ಈ ವ್ಯಕ್ತಿಯ ಬಳಿ ಬರುತ್ತಿರುವ ಜನರು
ಜೇನು ಕೃಷಿಕ ಮಧುಕೇಶ್ವರ ಹೆಗಡೆ
Follow us
Rakesh Nayak Manchi
| Updated By: ರಶ್ಮಿ ಕಲ್ಲಕಟ್ಟ

Updated on:Aug 07, 2022 | 1:08 PM

ಜೇನು ನೊಣಗಳನ್ನು ಕಂಡಾಗ ಹತ್ತಿರಕ್ಕೆ ಹೋಗಲು ಮತ್ತು ಮುಟ್ಟಲು ಭಯಪಡುತ್ತಾರೆ. ಏಕೆಂದರೆ ಅದರ ಕಡಿತ ಅಷ್ಟೇ ನೋವು ತಂದುಕೊಂಡುತ್ತದೆ. ಅದಾಗ್ಯೂ ಕೆಲವು ಜನರು ಜೇನು ನೊಣಗಳನ್ನು ಚುಚ್ಚಿಸಿಕೊಳ್ಳುತ್ತಿದ್ದಾರೆ. ಅರೆ ಅವರಿಗೇನು ಹುಚ್ಚು ಅಂತ ಭಾವಿಸದಿರಿ. ಏಕೆಂದರೆ, ಜೇನು ನೊಣಗಳಿಂದ ಚುಚ್ಚಿಸಿಕೊಳ್ಳುವುದರ ಹಿಂದೆ ಆರೋಗ್ಯದ ಗುಟ್ಟು ಅಡಗಿದೆ. ಇದೇ ಕಾರಣಕ್ಕೆ ಉತ್ತರಕನ್ನಡ ಜಿಲ್ಲೆಯ  ಶಿರಸಿ ತಾಲೂಕಿನ ಸದಾಶಿವಳ್ಳಿ ಗ್ರಾಮದ ತಾರಗೋಡಿಯ ಜೇನು ಕೃಷಿಕ ಡಾ.ಮಧುಕೇಶ್ವರ ಹೆಗಡೆ ಅವರ ಬಳಿ ದೇಶ ವಿದೇಶಗಳಿಂದಲೂ ಜನರು ಬಂದು ಜೇನು ಚುಚ್ಚಿಸಿಕೊಂಡು ಹೋಗುತ್ತಿದ್ದಾರೆ.

ಬೀ ಥರಫಿ ಬಗ್ಗೆ ಮಧುಕೇಶ್ವರ ಅವರನ್ನು ಟಿವಿ9 ವಿಶೇಷ ಸಂದರ್ಶನ ನಡೆಸಿತು. ಈ ವೇಳೆ ಅವರು ಜೇನು ಚುಚ್ಚಿಸಿಕೊಳ್ಳುವುದರಿಂದ ಆಗುವ ಉಪಯೋಗಗಳು ಮತ್ತು ಅದರಿಂದ ಆಗುವ ಆರ್ಥಿಕ ಲಾಭದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲಗೆ ಬೀ ಥರಫಿ ಯಾಕೆ ಮಾಡಲಾಗುತ್ತದೆ ಮತ್ತ ಹೇಗೆ ಚಿಕಿತ್ಸೆ ನೀಡಲಾಗುತ್ತದೆ ಎಂಬುದನ್ನು ತಿಳಿಯೋಣ:

ಜೇನು ನೊಣಗಳಲ್ಲಿ ಆಂಟಿ ಬಯೋಟಿಕ್ ಸತ್ವವನ್ನು ಹೊಂದಿದೆ. ಹೀಗಾಗಿ ಜೇನು ನೊಣ ಚುಚ್ಚಿಸಿಕೊಳ್ಳುವುದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಇದರೊಂದಿಗೆ ಮತ್ತೊಂದು ಪ್ರಾಯೋಜನವೂ ಇದೆ. ಸಂಧೀವಾತ ಸಮಸ್ಯೆಯಿಂದ ಬಳಲುತ್ತಿದ್ದವರು ಜೇನು ನೊಣದಿಂದ ಚುಚ್ಚಿಸಿಕೊಂಡರೆ ಸಂಧೀವಾತ ನಿವಾರಣೆಯಾಗುತ್ತದೆ ಎಂದು ಮಧುಕೇಶ್ವರ್ ಹೇಳುತ್ತಾರೆ.

ಸಂಧೀವಾತ ಸಮಸ್ಯೆ ನಿವಾರಣೆಗೆ ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ನಿಟ್ಟಿನಲ್ಲಿ ಸಾವಿರಾರು ಜನರು ಮಧುಕೇಶ್ವರ್ ಬಳಿ ಬಂದು ಬೀ ಥರಫಿ ಪಡೆದುಕೊಂಡಿದ್ದಾರೆ. ಟಿಬೇಟಿಯನ್ನರು, ತಮಿಳಿಗರು, ಮಹಾರಾಷ್ಟ್ರದವರು ಕೂಡ ಬಂದು ಜೇನು ಚುಚ್ಚಿಸಿಕೊಳ್ಳುವಿಕೆಯ ಚಿಕಿತ್ಸೆ ಪಡೆದುಕೊಂಡು ಹೋಗಿದ್ದಾರೆ. ಸ್ವತಃ ಮಧುಕೇಶ್ವರ ಹೇಳುವಂತೆ, ಈವರೆಗೆ ಸುಮಾರು 4ರಿಂದ 5 ಸಾವಿರದಷ್ಟು ಜನರು ಬೀ ಥರಫಿ ಪಡೆದುಕೊಂಡಿದ್ದಾರೆ.

ಬೀ ಥರಫಿಯಲ್ಲಿ ಪಳಗಿದ ಮಧುಕೇಶ್ವರ

ಟಿವಿ ವಾಹಿನಿಗಳಲ್ಲಿ ಬೀ ಥರಫಿ ಬಗ್ಗೆ ನೋಡಿಕೊಂಡು ಅದರಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದ ಮಧುಕೇಶ್ವರ ಅವರು ಬೀ ಥರಫಿ ಆರಂಭಿಸಿದ್ದಾರೆ. ಆರಂಭದಲ್ಲಿ ಕೀಟ ಶಾಸ್ತ್ರಜ್ಞರಿಂದ ಬೀ ಥರಫಿ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕಲೆಹಾಕಿಕೊಂಡರು. ನಂತರ ಮಧುಕೇಶ್ವರ ಅವರು ತನ್ನ ಮೇಲೆಯೇ ಪ್ರಯೋಗ ನಡೆಸಿದರು. ಕ್ರಮೇಣ ಕುಟುಂಬಸ್ಥರ ಮೇಲೆ ಪ್ರಯೋಗ ನಡೆಸಿದರು. ಇದಾದ ಬಳಿಕ ಅವರ ಮನೆಯಲ್ಲಿದ್ದ ಕೃಷಿಕರು ಕೂಡ ಥರಫಿಗೆ ಒಳಗಾದರು. ಇದು ಪ್ರಚಾರ ಪಡೆಯುತ್ತಲೇ ಇದೀಗ ಸ್ಥಳೀಯರದಲ್ಲದೆ, ರಾಜ್ಯ, ಹೊರರಾಜ್ಯಗಳಿಂದಲೂ ಜನರು ಬೀ ಥರಫಿ ಪಡೆದುಕೊಳ್ಳುತ್ತಿದ್ದಾರೆ.

ಬೀ ಥರಫಿಯಲ್ಲಿ ಭರ್ಜರಿ ಆದಾಯ

ಬೀ ಥರಫಿ ಬಗ್ಗೆ ಉತ್ತಮ ಜ್ಞಾನ ಪಡೆದು ಇದನ್ನೇ ಉದ್ಯಮವನ್ನಾಗಿ ಮಾಡಿಕೊಂಡರೆ ಭರ್ಜರಿ ಆದಾಯ ಗಳಿಸಬಹುದು. ಸ್ವತಃ ಮಧುಕೇಶ್ವರ ಅವರು ಹೇಳುವಂತೆ, ಒಂದು ನೊಣ ಚುಚ್ಚಿಸಿಕೊಂಡರೆ ವಿದೇಶಿಗರು 400 ರೂಪಾಯಿ ಕೊಡುತ್ತಾರೆ. ಇನ್ನು ಹೊರರಾಜ್ಯಗಳಿಂದ, ಬೇರೆ ಜಿಲ್ಲೆಗಳಿಂದ ಅಥವಾ ಸ್ಥಳೀಯರಾದರೆ 100 ರೂ., 150 ರೂ., 200 ರೂಪಾಯಿ ವರೆಗೆ ನೀಡುತ್ತಾರೆ. ಇಂತಿಷ್ಟು ಹಣ ಎಂದು ನಿಗದಿ ಪಡಿಸಿಲ್ಲ, ಜನರು ಕೊಟ್ಟಷ್ಟು ಪಡೆಯುತ್ತೇನೆ ಎಂದು ಮಧುಕೇಶ್ವರ್ ಹೇಳುತ್ತಾರೆ. ಇವರ ಬಳಿ ಬಡವರು, ಕೂಲಿ ಕಾರ್ಮಿಕರು ಬೀ ಥರಫಿಗಾಗಿ ಬಂದರೆ ಉಚಿತವಾಗಿ ಜೇನು ಚುಚ್ಚಿಸುತ್ತಾರೆ. ಈವರೆಗೆ ಬೀ ಥರಫಿಯಿಂದ ಮಧುಕೇಶ್ವರ ಅವರು 70ರಿಂದ 80 ಲಕ್ಷ ಆದಾಯ ಗಳಿಸಿದ್ದಾರೆ.

ಯಾವ ನೊಣಗಳಿಂದ ಬೀ ಥರಫಿ

ಬೀ ಥರಫಿಯನ್ನು ಭಾರತೀಯ ತುಡುವೆ ಜೇನುಗಳಿಂದ ಮಾತ್ರ ನೀಡಲಾಗುತ್ತದೆ. ಇದನ್ನು ಅಪಿಸ್ ಸೆರಾನಾ ಇಂಡಿಕಾ ಅಂತಲೂ ಕರೆಯುತ್ತಾರೆ.

ಜೇನುನೊಣ ವಿಷ ಸಂಗ್ರಹಣೆ, ಕೈತುಂಬಾ ಆದಾಯ

ಜೇನು ಸಿಹಿಯನ್ನು ಮಾತ್ರ ನೀಡುವುದಲ್ಲದೆ ಆರೋಗ್ಯಕ್ಕೆ ಉಪಕಾರಿಯಾಗುವ ವಿಷವನ್ನೂ ನೀಡುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ನೊಣಗಳ ಸೂಚಿಯ ಬಳಿ ವಿಷದ ಚೀಲ ಇರುತ್ತದೆ. ಈ ವಿಷ ಸಂಧೀವಾತ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಚುಚ್ಚುಮದ್ದಿಗೆ ಬಳಸಲಾಗುತ್ತದೆ. ಈ ವಿಷಯವನ್ನು ಸಂಗ್ರಹಿಸಲು ಮಧುಕೇಶ್ವರ ಅವರು ಜೇನುನೊಣ ವಿಷ ಸಂಗ್ರಹಣ ಮಾಡುವ ಯಂತ್ರವನ್ನು ಖರೀದಿಸಿದ್ದಾರೆ. ಈ ಯಂತ್ರದ ಮೂಲಕ ಜೇನು ನೊಣಗಳು ಸಾಯದಂತೆ ವಿಷಯವನ್ನು ತೆಗೆಯಲಾಗುತ್ತದೆ.

ಜೇನಿನಿಂದ ತೆಗೆದ ವಿಷಕ್ಕೆ ಮಾರುಕಟ್ಟೆಯಲ್ಲಿ ಸಾವಿರಾರು ರೂಪಾಯಿ ಬೆಲೆಗೆ ಮಾರಾಟ ಆಗುತ್ತದೆ. ಮಧುಕೇಶ್ವರ ಅವರು ಹೇಳುವಂತೆ, 1 ಗ್ರಾಂ ವಿಷಕ್ಕೆ 80 ಸಾವಿರ ರೂಪಾಯಿವರೆಗೆ ಮಾರಾಟ ಆಗುತ್ತದೆ. ಬೀ ಥರಫಿಯೊಂದಿಗೆ ಜೇನು ವಿಷ ಮಾರಾಟದಲ್ಲೂ ತೊಡಗಿಕೊಂಡಿರುವ ಇವರು ಈವರೆಗೆ 8ರಿಂದ 10 ಗ್ರಾಂವರೆಗೆ ಮಾರಾಟ ಮಾಡಿದ್ದಾರೆ. ಈ ಹಿಂದೆ 1 ಗ್ರಾಂ ವಿಷಕ್ಕೆ ಖಾಸಗಿ ಕಂಪನಿಯವರು 40ಸಾವಿರ ರೂಪಾಯಿ ನೀಡಿದ್ದು ಕೂಡ ಇದೆ. ಬೆಲೆಯು ಬೇಡಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಸದ್ಯ ಮಧುಕೇಶ್ವರ ಅವರು ತಮ್ಮ ಫ್ರಿಜ್​ನಲ್ಲಿ 2ರಿಂದ 3 ಗ್ರಾಂನಷ್ಟು ಜೇನು ವಿಷವನ್ನು ಸಂಗ್ರಹಿಸಿಟ್ಟಿದ್ದಾರೆ.

ಜೇನುಗೂಡು ಕುಟುಂಬ

ಮಧುಕೇಶ್ವರ ಅವರಿಗೆ ಕಷ್ಟದ ಕಾಲದಲ್ಲಿ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದೇ ಜೇನು ಸಾಕಾಣಿಕೆ. ಹೀಗಾಗಿ ಇವರಿಗೆ ಜೇನಿನ ಮೇಲೆ ಅತೀವ ಪ್ರೀತಿ. ಇಂದು ಅವರ ಈ ಸ್ಥಿತಿಗೆ ಕಾರಣವಾಗಿರುವ ಜೇನು ಕೃಷಿಯ ಬಗ್ಗೆ ತಮ್ಮ ಮಕ್ಕಳು ಮರೆಯಬಾರದು ಎನ್ನುವ ಕಾರಣಕ್ಕೆ ಮಕ್ಕಳಿಗೂ ಜೇನಿಗೆ ಸಂಬಂಧಿಸಿದ ಹೆಸರನ್ನು ಇಟ್ಟುಕೊಂಡಿದ್ದಾರೆ. ಮಧುಕೇಶ್ವರ ಅವರ ಮಗನಿಗೆ ಪರಾಗ ಎಂದು ಹೆಸರಿಟ್ಟರೆ ಮಗಳಿಗೆ ಮಧು ಎಂದು ಹೆಸರಿಟ್ಟಿದ್ದಾರೆ. ಇನ್ನು ಮನೆಗೆ ಮಧುಬನ ಎಂದು ಹೆಸರು ಇಡಲಾಗಿದೆ. ಜೇನು ಕೃಷಿಯನ್ನು ‘ಬನ’ ಎಂದು ಉಲ್ಲೇಖಿಸಿ ಆ ಪದವನ್ನು ಮಧುಕೇಶ್ವರ ಹೆಸರಿನ ‘ಮಧು’ ಎಂಬ ಪದಕ್ಕೆ ಸೇರಿಸಿದ್ದಾರೆ. 

Published On - 8:00 am, Sun, 7 August 22

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’