ಕೇರಳ ಕಲಾಮಂಡಲಂ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಪತಿ ಸ್ಥಾನದಿಂದ ರಾಜ್ಯಪಾಲರನ್ನು ತೆರವು ಮಾಡಿದ ಪಿಣರಾಯಿ ವಿಜಯನ್ ಸರ್ಕಾರ

| Updated By: ರಶ್ಮಿ ಕಲ್ಲಕಟ್ಟ

Updated on: Nov 10, 2022 | 9:46 PM

ರಾಜ್ಯಪಾಲರು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾಗಿದ್ದಾರೆ ಎಂದು ಕೇರಳ ರಾಜ್ಯದ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಆಡಳಿತ ಆರೋಪಿಸಿದೆ.

ಕೇರಳ ಕಲಾಮಂಡಲಂ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಪತಿ ಸ್ಥಾನದಿಂದ ರಾಜ್ಯಪಾಲರನ್ನು ತೆರವು ಮಾಡಿದ ಪಿಣರಾಯಿ ವಿಜಯನ್ ಸರ್ಕಾರ
ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್
Follow us on

ತಿರುವನಂತಪುರಂ: ಕೇರಳ ಕಲಾಮಂಡಲಂ ಡೀಮ್ಡ್ ವಿಶ್ವವಿದ್ಯಾನಿಲಯದ(Kerala Kalamandalam deemed university) ಕುಲಪತಿ ಸ್ಥಾನದಿಂದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್(Arif Mohammed Khan) ಅವರನ್ನು ರಾಜ್ಯ ಸರ್ಕಾರ ಗುರುವಾರ ತೆಗೆದು ಹಾಕಿದೆ. ಖಾನ್ ಅವರಿದ್ದ ಕುಲಪತಿ ಸ್ಥಾನಕ್ಕೆ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಗಣ್ಯ ವ್ಯಕ್ತಿಯನ್ನು ನೇಮಿಸಲು ವಿಶ್ವವಿದ್ಯಾಲಯದ ನಿಯಮಗಳನ್ನು ಬದಲಾಯಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ರಾಜ್ಯಪಾಲರು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾಗಿದ್ದಾರೆ ಎಂದು ಕೇರಳ ರಾಜ್ಯದ ಡೆಮಾಕ್ರಟಿಕ್ ಫ್ರಂಟ್ (LDF) ಆಡಳಿತ ಆರೋಪಿಸಿದೆ. ಕೇರಳ ಗವರ್ನರ್ ಮತ್ತು ರಾಜ್ಯ ಸರ್ಕಾರದ ನಡುವಿನ ಜಟಾಪಟಿಯ ನಡುವೆಯೇ ಪಿಣರಾಯಿ ವಿಜಯನ್ (Pinarayi Vijayan)ಸರ್ಕಾರ ರಾಜ್ಯಪಾಲರನ್ನು ಕುಲಪತಿ ಸ್ಥಾನದಿಂದ ತೆರವು ಮಾಡುವ ನಿರ್ಧಾರ ಕೈಗೊಂಡಿದೆ.  ಬಿಜೆಪಿಯೇತರ ಆಡಳಿತವಿರುವ ಮೂರು ದಕ್ಷಿಣ ರಾಜ್ಯಗಳಲ್ಲಿ ಗವರ್ನರ್‌ಗಳು ಮತ್ತು ಸರ್ಕಾರಗಳ ನಡುವೆ ಜಟಾಪಟಿ ನಡೆಯುತ್ತಿದೆ. ತಮಿಳುನಾಡು ಆರ್‌ಎನ್ ರವಿಯನ್ನು ವಾಪಸು ಕರೆಸಿಕೊಳ್ಳಲು ಕೋರಿದೆ. ಕೇರಳವು ಖಾನ್ ಅವರನ್ನು ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನದಿಂದ ತೆರವು ಮಾಡಲು ವಿಶೇಷ ಸುಗ್ರೀವಾಜ್ಞೆಯನ್ನು ಪ್ರಸ್ತಾಪಿಸಿದೆ. ತಮಿಳಿಸೈ ಸೌಂದರರಾಜನ್ ತೆಲಂಗಾಣದಲ್ಲಿ ಆಕೆಯ ಫೋನ್ ಟ್ಯಾಪ್ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಡಳಿತವು ಇನ್ನು ಮುಂದೆ ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಯಾಗಿ ರಾಜ್ಯಪಾಲರು ಬೇಡವೇ ಬೇಡ ಎಂದು ಹೇಳಿದೆ. ಉಪಕುಲಪತಿಗಳ ನೇಮಕ ಸೇರಿದಂತೆ ವಿಶ್ವವಿದ್ಯಾನಿಲಯಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಗವರ್ನರ್ ಮತ್ತು ರಾಜ್ಯ ಸರ್ಕಾರ ಭಿನ್ನಾಭಿಪ್ರಾಯ ಹೊಂದಿದೆ.

ಡೀಮ್ಡ್ ವಿಶ್ವವಿದ್ಯಾಲಯದ ತಿದ್ದುಪಡಿ ನಿಯಮಗಳು ಕೇರಳ ಕಲಾಮಂಡಲದ ಆಡಳಿತ ವ್ಯವಸ್ಥೆ ಮತ್ತು ನಿರ್ವಹಣಾ ರಚನೆಯು ರಾಜ್ಯ ಸರ್ಕಾರದ ನಿರ್ಧಾರಗಳನ್ನು ಅನುಸರಿಸುತ್ತದೆ ಎಂದು ಹೇಳುತ್ತದೆ.

Published On - 9:41 pm, Thu, 10 November 22