ಕೇರಳ: ದೂರದರ್ಶನದ ನೇರ ಪ್ರಸಾರದ ವೇಳೆ ಕುಸಿದುಬಿದ್ದು ಕೃಷಿ ತಜ್ಞ ಸಾವು
ದೂರದರ್ಶನದ ನೇರ ಪ್ರಸಾರದ ವೇಳೆ ಕೃಷಿ ತಜ್ಞ ಅನಿ ಎಸ್ ದಾಸ್ (59) ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೃಷಿ ತಜ್ಞ ಅವರು ಶುಕ್ರವಾರ ದೂರದರ್ಶನದಲ್ಲಿ ನೇರ ಪ್ರಸಾರದ ವೇಳೆ ಕುಸಿದುಬಿದ್ದು ನಿಧನರಾಗಿದ್ದಾರೆ. ಕೇರಳದ ತಿರುವನಂತಪುರಂನಲ್ಲಿರುವ ದೂರದರ್ಶನ ವಾಹಿನಿಯಲ್ಲಿ ಕೃಷಿ ದರ್ಶನ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ.

ತಜ್ಞರನ್ನು ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ದಾಸ್ ಅವರು ಕೇರಳ ಫೀಡ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ (MD) ಸೇವೆ ಸಲ್ಲಿಸಿದರು ಮತ್ತು ಕೇರಳ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂವಹನ ಕೇಂದ್ರದ ಮುಖ್ಯಸ್ಥರಾಗಿದ್ದರು. ದೂರದರ್ಶನ ಕೃಷಿ ದರ್ಶನ ಕಾರ್ಯಕ್ರಮವು ಶುಕ್ರವಾರ ಸಂಜೆ 6.30ರ ಸುಮಾರಿಗೆ ನಡೆಯಿತು.
ಮತ್ತಷ್ಟು ಓದಿ: ಶಬರಿಮಲೆ ಪಾದಯಾತ್ರೆ ವೇಳೆ ಕುಸಿದುಬಿದ್ದು 12 ವರ್ಷದ ಬಾಲಕಿ ಸಾವು
ಲೈವ್ ಟಿವಿ ಕಾರ್ಯಕ್ರಮದ ಸಮಯದಲ್ಲಿ, ಕೃಷಿ ತಜ್ಞರು ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾರೆ. ದೂರದರ್ಶನದಲ್ಲಿ ಪ್ರಸಾರವಾಗುವ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ಆಗಾಗ ಭಾಗವಹಿಸುತ್ತಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ