ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಆರೋಪಿ ಸ್ವಪ್ನಾ ಸುರೇಶ್ ಆರೋಪಗಳಿಗೆ ಪ್ರತಿಯಾಗಿ ವಿಡಿಯೊ ಬಿಡುಗಡೆ ಮಾಡಿದ ಕೇರಳ ಸಿಎಂ ಕಚೇರಿ

| Updated By: ರಶ್ಮಿ ಕಲ್ಲಕಟ್ಟ

Updated on: Jun 15, 2022 | 8:35 PM

Kerala gold smuggling case ಪತ್ರಿಕಾಗೋಷ್ಠಿಯಲ್ಲಿ ಪಿಣರಾಯಿ ವಿಜಯನ್ ಅವರು 13 ಅಕ್ಟೋಬರ್ 2020 ರಂದು ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಆಗಿನ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯದಿಂದ ಬಂಧಿಸಿದಾಗ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆಗಳನ್ನು ನೀಡಿದ್ದರು.

ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಆರೋಪಿ ಸ್ವಪ್ನಾ ಸುರೇಶ್ ಆರೋಪಗಳಿಗೆ ಪ್ರತಿಯಾಗಿ ವಿಡಿಯೊ ಬಿಡುಗಡೆ ಮಾಡಿದ ಕೇರಳ ಸಿಎಂ ಕಚೇರಿ
ಪಿಣರಾಯಿ ವಿಜಯನ್
Follow us on

ತಿರುವನಂತಪುರಂ: ಚಿನ್ನ ಕಳ್ಳಸಾಗಣೆ ಪ್ರಕರಣದ (gold smuggling case) ಆರೋಪಿ ಸ್ವಪ್ನಾ ಸುರೇಶ್ (Swapna Suresh) ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan)ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ನಡುವೆ, ಸಿಎಂ ಕಚೇರಿ ಬುಧವಾರ ಎರಡು ವರ್ಷಗಳ ಹಿಂದಿನ ಪತ್ರಿಕಾಗೋಷ್ಠಿಯ ವಿಡಿಯೊ ಬಿಡುಗಡೆ ಮಾಡಿದೆ. ಅಧಿಕೃತ ಉದ್ದೇಶಗಳಿಗಾಗಿ ಆಗಿನ ಯುಎಇ ಕಾನ್ಸುಲೇಟ್ ಜನರಲ್ ಜೊತೆಗೆ ಸುರೇಶ್ ತಮ್ಮ ಅಧಿಕೃತ ನಿವಾಸಕ್ಕೆ ಹಲವು ಬಾರಿ ಭೇಟಿ ನೀಡಿದ್ದರು ಎಂಬುದಕ್ಕೆ ಸಾಕ್ಷ್ಯವಾಗಿ ಈ ವಿಡಿಯೊ ಬಿಡುಗಡೆ ಮಾಡಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪಿಣರಾಯಿ ವಿಜಯನ್ ಅವರ ಕಚೇರಿ ಬಿಡುಗಡೆ ಮಾಡಿದ ಕಿರು ವಿಡಿಯೊದಲ್ಲಿ ಎರಡು ಭಾಗವಿದೆ. ನನ್ನನ್ನು ಗೊತ್ತಿಲ್ಲ ಎಂದು ಪಿಣರಾಯಿ ಹೇಳಿದ್ದು ಸುಳ್ಳು ಎಂದು ಮಂಗಳವಾರ ಸ್ವಪ್ನಾ ಸುರೇಶ್ ಹೇಳಿದ್ದರು. ಇದಕ್ಕೆ ಉತ್ತರವಾಗಿ ಸ್ವಪ್ನಾ ಕಾನ್ಸುಲೇಟ್ ಸಿಬ್ಬಂದಿ ಆಗಿ ಮಾತ್ರ ನನಗೆ ಗೊತ್ತು ಎಂದು ಪಿಣರಾಯಿ ಹೇಳುವ ಹೇಳಿಕೆ ಈ ವಿಡಿಯೊದಲ್ಲಿದೆ.  ತನಗೆ ಗೊತ್ತಿಲ್ಲ ಎಂಬ ವಿಜಯನ್ ಅವರ “ಸುಳ್ಳು” ಬಯಲು ಮಾಡುವುದಾಗಿ ಮಂಗಳವಾರ ಸುರೇಶ್ ಬೆದರಿಕೆ ಹಾಕಿದ್ದು, ಮತ್ತು ಸಿಎಂ ಅವರು ಕನ್ಸುಲೇಟ್ ಸಿಬ್ಬಂದಿಯಾಗಿ ಮಾತ್ರ ತಿಳಿದಿದ್ದಾರೆ ಎಂದು ಹೇಳುವ ಹಳೆಯ ಹೇಳಿಕೆ ವಿಡಿಯೊದಲ್ಲಿದೆ.

ಪತ್ರಿಕಾಗೋಷ್ಠಿಯಲ್ಲಿ ಪಿಣರಾಯಿ ವಿಜಯನ್ ಅವರು 13 ಅಕ್ಟೋಬರ್ 2020 ರಂದು ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಆಗಿನ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯದಿಂದ ಬಂಧಿಸಿದಾಗ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆಗಳನ್ನು ನೀಡಿದ್ದರು.
ಸ್ವಪ್ನಾ ಸುರೇಶ್ ಅವರು ತಿರುವನಂತಪುರಂನಲ್ಲಿರುವ ಸಿಎಂ ಅವರ ಅಧಿಕೃತ ನಿವಾಸ ಕ್ಲಿಫ್ ಹೌಸ್‌ಗೆ ಹಲವಾರು ಬಾರಿ ಭೇಟಿ ನೀಡಿದ್ದಾರಾ ಎಂದು ಪತ್ರಕರ್ತರೊಬ್ಬರು ಪಿಣರಾಯಿ ವಿಜಯನ್ ಅವರನ್ನು ಕೇಳಿದ್ದು, ವರು ವಿವಿಧ ಅಧಿಕೃತ ಉದ್ದೇಶಗಳಿಗಾಗಿ ಕಾನ್ಸುಲೇಟ್ ಜನರಲ್ ಜೊತೆಗೆ ಹಲವಾರು ಬಾರಿ ಬಂದಿದ್ದಾರೆ ಎಂದು ಸಿಎಂ ಉತ್ತರಿಸಿದ್ದರು.

ಕಾನ್ಸುಲೇಟ್ ಜನರಲ್ ಕ್ಲಿಫ್ ಹೌಸ್‌ಗೆ ಭೇಟಿ ನೀಡಿದಾಗಲೆಲ್ಲಾ ಸ್ವಪ್ನಾ ಅವರ ಕಾರ್ಯದರ್ಶಿಯಾಗಿ ಅವರೊಂದಿಗೆ ಹೋಗುತ್ತಿದ್ದರು. ಮುಖ್ಯಮಂತ್ರಿಯೊಬ್ಬರು ಕಾನ್ಸುಲೇಟ್ ಜನರಲ್ ಅನ್ನು ಭೇಟಿಯಾಗುವುದು ಅಸಹಜವಾದದ್ದೇನೂ ಅಲ್ಲಎಂದು ಅವರು ವಿಡಿಯೊದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಇದನ್ನೂ ಓದಿ
Kerala gold smuggling case ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ: ಪಿಣರಾಯಿ ವಿಜಯನ್ ಮೇಲೆ ಸ್ವಪ್ನಾ ಸುರೇಶ್ ಗಂಭೀರ ಆರೋಪ
ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಎಂ ಶಿವಶಂಕರ್ ವಿರುದ್ಧದ ಆರೋಪದ ನಂತರ ಸ್ವಪ್ನಾ ಸುರೇಶ್‌ಗೆ ಇಡಿ ಸಮನ್ಸ್
Gold Smuggling Case: ಕೇರಳ ಚಿನ್ನ ಸಾಗಣೆ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​ ಜೈಲಿನಿಂದ ಬಿಡುಗಡೆ

ವಿಜಯನ್ ಅವರು ಕಾನ್ಸುಲೇಟ್‌ಗೆ ಸಂಬಂಧಿಸಿದ ವಿಷಯಗಳ ಸಂಪರ್ಕ ಬಿಂದು ಎಂದು ಶಿವಶಂಕರ್ ಎಂದು ಪರಿಚಯಿಸಿದ್ದಾರೆಯೇ ಎಂದು ವರದಿಗಾರರು ಕೇಳಿದಾಗ, ಸಿಎಂ ನನಗದು ನೆನಪಿಲ್ಲ, ಆದರೆ ಅವರು ಹಾಗೆ ಹೇಳಿದ್ದರೂ ಅದರಲ್ಲಿ ಅಸಾಮಾನ್ಯ ಏನೂ ಇಲ್ಲ ಎಂದು ಹೇಳಿದರು. ‘ವಿವಾದಾತ್ಮಕ ಮಹಿಳೆ’ ಯಾರೆಂದು ನನಗೆ ತಿಳಿದಿಲ್ಲ ಎಂದು ಅವರು ಜೈಲಿನಲ್ಲಿದ್ದಾಗ ಸಿಎಂ ಹೇಳಿದ್ದರು ಎಂದು ಸ್ವಪ್ನಾ ಸುರೇಶ್ ಮಾಧ್ಯಮಗಳಿಗೆ ಹೇಳಿದ ಒಂದು ದಿನದ ನಂತರ ಸಿಎಂ ಕಚೇರಿ ಹಳೆಯ ವಿಡಿಯೊವನ್ನು ಬಿಡುಗಡೆ ಮಾಡಿದೆ. ಪಿಣರಾಯಿಸುಳ್ಳು ಹೇಳಿದ್ದಾರೆ. ಕ್ಲಿಫ್ ಹೌಸ್‌ನಲ್ಲಿ ಅವರನ್ನು ಮತ್ತು ಅವರ ಕುಟುಂಬ ಸದಸ್ಯರನ್ನು ಹಲವಾರು ಬಾರಿ ಭೇಟಿಯಾಗಿದ್ದೆ ಎಂದಿದ್ದರು ಸ್ವಪ್ನಾ ಸುರೇಶ್.

“ಅವರು ಈ ಎಲ್ಲ ವಿಷಯಗಳನ್ನು ಮರೆತಿರಬಹುದು. ಆದರೆ ಅಗತ್ಯವಿದ್ದಾಗ ಮಾಧ್ಯಮಗಳ ಮೂಲಕ ಅವರು ಮತ್ತು ಕುಟುಂಬ ಸದಸ್ಯರೊಂದಿಗೆ ಆ ಭೇಟಿ ಬಗ್ಗೆ ನಾನು ಅವರಿಗೆ ನೆನಪಿಸುತ್ತೇನೆ ಎಂದು ಸ್ವಪ್ನಾ ಮಂಗಳವಾರ ಕೊಚ್ಚಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನ್ ರಾಜೀನಾಮೆಗೆ ಒತ್ತಾಯಿಸಿ ವಿರೋಧ ಪಕ್ಷಗಳ ಸರಣಿ ಪ್ರತಿಭಟನೆ ನಡೆಸುತ್ತಿವೆ. ಕೇರಳದಲ್ಲಿರುವ ಯುಎಇ ದೂತಾವಾಸಕ್ಕೆ ಕಳುಹಿಸಲಾದ ರಾಜತಾಂತ್ರಿಕ ರವಾನೆಯೆಂದು ಮರೆಮಾಚುವ ಪ್ಯಾಕೇಜ್‌ನಲ್ಲಿ ಬಚ್ಚಿಟ್ಟಿದ್ದ 30 ಕೆಜಿ ಚಿನ್ನವನ್ನು ಕಸ್ಟಮ್ಸ್ ಇಲಾಖೆಯು ವಶಪಡಿಸಿಕೊಂಡ ನಂತರ ಕಳ್ಳಸಾಗಣೆ ಪ್ರಕರಣವು ಜುಲೈ 2020 ರಲ್ಲಿ ಬೆಳಕಿಗೆ ಬಂದಿತ್ತು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 8:32 pm, Wed, 15 June 22