ಬೆಂಗಳೂರು: ಕೇರಳ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಕುಖ್ಯಾತ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಮುಖ್ಯ ಆರೋಪಿಗಳಾದ ಸ್ವಪ್ನ ಸುರೇಶ್ ಮತ್ತು ಸಂದೀಪ್ ನಾಯರ್ನ ರಾಷ್ಟ್ರೀಯ ತನಿಖಾ ದಳದ ತಂಡವೊಂದು ಶನಿವಾರ ಬೆಂಗಳೂರಿನ ಕೋರಮಂಗಲದಲ್ಲಿ ಬಂಧಿಸಿದೆ. ಆರೋಪಿಗಳನ್ನ ಇಂದು ಕೊಚ್ಚಿಯಲ್ಲಿರುವ NIA ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು.
ಕೇರಳದಿಂದ ಆರೋಪಿಗಳು ಬೆಂಗಳೂರು ತಲುಪಿದ್ದು ಹೇಗೆ?
ಉನ್ನತ ಮೂಲಗಳ ಪ್ರಕಾರ ಸಂದೀಪ್ ಮತ್ತು ಸ್ವಪ್ನ ಆಕೆಯ ಪತಿಯೊಟ್ಟಿಗೆ ಖಾಸಗಿ ಕಾರಿನಲ್ಲಿ ಬೆಂಗಳೂರಿಗೆ ತಲುಪಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳ ಜೊತೆ ಎರಡು ಮಕ್ಕಳು ಸಹ ಇದ್ದರು ಎಂದು ಹೇಳಲಾಗ್ತಿದೆ. ಹೀಗಾಗಿ, ಕೇರಳದಿಂದ ಅಷ್ಟು ಸುಲಭವಾಗಿ ಪಾರಾಗಲು ಇವರಿಗೆ ಅಲ್ಲಿನ ಕೆಲವು ಅಧಿಕಾರಿಗಳು ನೆರೆವಾಗಿರಬಹುದು ಎಂಬ ಗುಮಾನಿ ಶುರುವಾಗಿದೆ. ಮುಂದಿನ ದಿನಗಳಲ್ಲಿ ನಡೆಯುವ ತನಿಖೆಯಲ್ಲಿ ಇದರ ಬಗ್ಗೆ ಗೊತ್ತಾಗುವುದು ಎಂದು ಹೇಳಲಾಗಿದೆ.
Published On - 11:04 am, Sun, 12 July 20