AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯನಾಡ್ ಭೂಕುಸಿತ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಲು ಕೇಂದ್ರ ವಿಳಂಬ ಪ್ರಶ್ನಿಸಿದ ಕೇರಳ ಹೈಕೋರ್ಟ್

ಇದು ಎನ್‌ಡಿಆರ್‌ಎಫ್ ಮತ್ತು ಪಿಎಂಎನ್‌ಆರ್‌ಎಫ್‌ನಿಂದ ವಿತರಣೆಯನ್ನು ನಿಯಂತ್ರಿಸುವ ಅಧಿಕಾರಿಗಳು ಪರಿಗಣಿಸಬೇಕಾದ ಅಂಶವಾಗಿದೆ ಎಂದು ಹೈಕೋರ್ಟ್ ಪೀಠವು ಗಮನಿಸಿದೆ. ಭಾರತದ ಸಹಾಯಕ ಸಾಲಿಸಿಟರ್ ಜನರಲ್ ಅವರು ಅಮಿಕಸ್ ಕ್ಯೂರಿ ಎತ್ತಿದ ಅಂಶಗಳ ಬಗ್ಗೆ ಪ್ರತಿಕ್ರಿಯಿಸಲು ಅಕ್ಟೋಬರ್ 18 ರವರೆಗೆ ಸಮಯ ಕೋರಿದರು.

ವಯನಾಡ್ ಭೂಕುಸಿತ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಲು ಕೇಂದ್ರ ವಿಳಂಬ ಪ್ರಶ್ನಿಸಿದ ಕೇರಳ ಹೈಕೋರ್ಟ್
ವಯನಾಡ್ ದುರಂತ
Follow us
ರಶ್ಮಿ ಕಲ್ಲಕಟ್ಟ
|

Updated on: Oct 05, 2024 | 2:53 PM

ಎರ್ನಾಕುಲಂ ಅಕ್ಟೋಬರ್ 05: ಅಮಿಕಸ್ ಕ್ಯೂರಿ ಸಲ್ಲಿಸಿದ ವರದಿಗೆ ಪ್ರತಿಕ್ರಿಯಿಸಿದ ಕೇರಳ ಹೈಕೋರ್ಟ್ (Kerala High Court), ವಯನಾಡ್‌ನ ಭೂಕುಸಿತ ಪರಿಹಾರಕ್ಕೆ ಸಂಬಂಧಿಸಿದಂತೆ ಎನ್‌ಡಿಆರ್‌ಎಫ್ ಮತ್ತು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (PMNRF) ನಿಂದ ಯಾವುದೇ ಮೊತ್ತವನ್ನು ಬಿಡುಗಡೆ ಮಾಡಿಲ್ಲ ಎಂಬುದಕ್ಕೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸೂಚಿಸಿದೆ. ವಿಪತ್ತು ಸಂಭವಿಸಿ 57 ದಿನಗಳು ಕಳೆದರೂ, ವಯನಾಡ್‌ಗೆ ಭೇಟಿ ನೀಡಿದ ಪ್ರಧಾನಿ ಭರವಸೆ ನೀಡಿದ ಯಾವುದೇ ಅನುದಾನ ಅಥವಾ ಮೊತ್ತವನ್ನು ಕೇಂದ್ರ ಸರ್ಕಾರ ನೀಡಿಲ್ಲ ಎಂದು ಅಮಿಕಸ್ ಕ್ಯೂರಿ ಹಿರಿಯ ವಕೀಲ ರಂಜಿತ್ ತಂಬಾನ್ ಸಲ್ಲಿಸಿದರು.

ಇದು ಎನ್‌ಡಿಆರ್‌ಎಫ್ ಮತ್ತು ಪಿಎಂಎನ್‌ಆರ್‌ಎಫ್‌ನಿಂದ ವಿತರಣೆಯನ್ನು ನಿಯಂತ್ರಿಸುವ ಅಧಿಕಾರಿಗಳು ಪರಿಗಣಿಸಬೇಕಾದ ಅಂಶವಾಗಿದೆ ಎಂದು ಹೈಕೋರ್ಟ್ ಪೀಠವು ಗಮನಿಸಿದೆ. ಭಾರತದ ಸಹಾಯಕ ಸಾಲಿಸಿಟರ್ ಜನರಲ್ ಅವರು ಅಮಿಕಸ್ ಕ್ಯೂರಿ ಎತ್ತಿದ ಅಂಶಗಳ ಬಗ್ಗೆ ಪ್ರತಿಕ್ರಿಯಿಸಲು ಅಕ್ಟೋಬರ್ 18 ರವರೆಗೆ ಸಮಯ ಕೋರಿದರು.

ಪ್ರತಿಕ್ರಿಯೆ ಮತ್ತು ಪರಿಹಾರ ಕ್ರಮಗಳಿಗಾಗಿ ಅಂದಾಜು ಮೊತ್ತದ ವೆಚ್ಚದ ವಿವರವನ್ನು ನೀಡುವಂತೆ ಪೀಠವು ರಾಜ್ಯ ಸರ್ಕಾರವನ್ನು ಕೇಳಿದೆ. ಪರಿಹಾರ ಕ್ರಮಗಳ ಅಂದಾಜು ಮೊತ್ತವನ್ನು ಒಳಗೊಂಡಿರುವ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಮೆಮೊರಾಂಡಮ್‌ನ ತಿರುಚಿದ ಆವೃತ್ತಿಯನ್ನು ಮಾಧ್ಯಮಗಳು ನೀಡಿವೆ ಎಂದು ಅಡ್ವೊಕೇಟ್ ಜನರಲ್ ಸಲ್ಲಿಸಿದರು.

ವಯನಾಡ್ ಪರಿಹಾರ ನಿಧಿ ಕೇರಳ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಚೂರಲ್ ಮಲ ದುರಂತದಲ್ಲಿ ಮಡಿದವರಿಗೆ ರಾಜ್ಯ ವಿಧಾನಸಭೆಯ ಸದಸ್ಯರು ಶ್ರದ್ಧಾಂಜಲಿ ಅರ್ಪಿಸಿದಾಗ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ವಿ.ಡಿ.ಸತೀಶ, ‘ತಮ್ಮ ಮನೆ ಮತ್ತು ಆಸ್ತಿಯನ್ನು ಕಳೆದುಕೊಂಡ ವಯನಾಡಿನ ಜನರಿಗೆ ಕೇಂದ್ರ ಸರ್ಕಾರ ಸಾವಿರಾರು ಜನರ ಪುನರ್ವಸತಿಗೆ ಹಣ ಮಂಜೂರು ಮಾಡದಿರುವುದು ಖಂಡನೀಯ.

ಇದನ್ನೂ ಓದಿ: ಸಾವರ್ಕರ್ ಮಾನನಷ್ಟ ಪ್ರಕರಣ: ಪುಣೆ ನ್ಯಾಯಾಲಯಕ್ಕೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಸೂಚನೆ

ಏತನ್ಮಧ್ಯೆ, ವಯನಾಡಿನಲ್ಲಿ 1200 ಕೋಟಿ ರೂಪಾಯಿ ಮತ್ತು ಕೋಯಿಕ್ಕೋಡ್‌ನ ವಿಲಂಗಾಡ್‌ನಲ್ಲಿ 217 ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಗೆ ಮಾಹಿತಿ ನೀಡಿದರು, ಈ ಪ್ರದೇಶಗಳಲ್ಲಿ ಭೂಕುಸಿತವು ನಂತರ 400 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಅಂದಹಾಗೆ ರಾಜ್ಯ ಸರ್ಕಾರದ ಬೇಡಿಕೆಗೆ ಕೇಂದ್ರ ಸರ್ಕಾರ ಇನ್ನೂ ಸ್ಪಂದಿಸಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ