ಕೇರಳ: ಯಾರೂ ವಾಸವಿಲ್ಲದ ಮನೆಯ ಫ್ರಿಡ್ಜ್​ನಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಪತ್ತೆ

ಕೇರಳದ ಎರ್ನಾಕುಲಂ ಜಿಲ್ಲೆಯ ಚೊಟ್ಟನಿಕ್ಕಾರಾ ಬಳಿಯ ಪಾಳುಬಿದ್ದ ಮನೆಯಲ್ಲಿ ತಲೆಬುರುಡೆ ಮತ್ತು ಮೂಳೆಗಳು ಸೇರಿದಂತೆ ಮಾನವ ಅವಶೇಷಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಶೇಷಗಳು ಮನೆಯೊಳಗಿನ ಫ್ರಿಡ್ಜ್‌ನಲ್ಲಿ ಶೇಖರಿಸಲ್ಪಟ್ಟಿರುವುದು ಕಂಡುಬಂದಿದೆ, ಈ ಮನೆ ಎರಡು ದಶಕಗಳಿಂದ ಖಾಲಿ ಇದೆ ಎಂಬುದು ತಿಳಿದುಬಂದಿದೆ. ಚೊಟ್ಟನಿಕ್ಕರ ಪೊಲೀಸ್ ಠಾಣೆಗೆ ದೊರೆತ ಸುಳಿವಿನ ಮೇರೆಗೆ ಪೊಲೀಸರು ಮನೆಯ ಪರಿಶೀಲನೆ ಆರಂಭಿಸಿದ್ದರು.

ಕೇರಳ: ಯಾರೂ ವಾಸವಿಲ್ಲದ ಮನೆಯ ಫ್ರಿಡ್ಜ್​ನಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಪತ್ತೆ
ಮನೆ
Image Credit source: Asianet news

Updated on: Jan 07, 2025 | 12:18 PM

ಯಾರೂ ವಾಸವಿಲ್ಲದ ಮನೆಯೊಂದರ ಫ್ರಿಡ್ಜ್​ನಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಪತ್ತೆಯಾಗಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಜನವಸತಿಯಿಲ್ಲದ ಮನೆಯೊಂದರ ಫ್ರಿಡ್ಜ್​ನಲ್ಲಿ ತಲೆಬುರುಡೆ ಹಾಗೂ ಮೂಳೆಗಳು ಪ್ಯಾಕ್​ನಲ್ಲಿ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಈ ಜಾಗವನ್ನು ಸಮಾಜಘಾತುಕ ಶಕ್ತಿಗಳ ತಾಣವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರದೇಶ ಪಂಚಾಯಿತಿ ಅಧಿಕಾರಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳವನ್ನು ಶೋಧಿಸಿದ್ದರು. ಹುಡುಕಾಟದ ಸಮಯದಲ್ಲಿ, ಪೊಲೀಸರು ಮನೆಯೊಳಗೆ ಪ್ರವೇಶಿಸಿದಾಗ, ಸುಮ್ಮನೆ ಕುತೂಹಲಕ್ಕೆಂದು ಫ್ರಿಡ್ಜ್​ ಬಾಗಿಲು ತೆರೆದಾಗ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾಗಿವೆ.

ಮೂಳೆಗಳನ್ನು ಮೂರು ಪ್ರತ್ಯೇಕ ಕವರ್‌ಗಳಲ್ಲಿ ಪ್ಯಾಕ್ ಮಾಡಿರುವುದು ಕಂಡುಬಂದಿದೆ. ತಲೆಬುರುಡೆಯು ಹಲವಾರು ವರ್ಷಗಳಷ್ಟು ಹಳೆಯದಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ನಿಖರವಾದ ವಯಸ್ಸನ್ನು ಪರೀಕ್ಷೆಯ ನಂತರವೇ ನಿರ್ಧರಿಸಬಹುದು. ಮನೆಯಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ ಮತ್ತು ಫ್ರಿಡ್ಜ್‌ನಲ್ಲಿ ಕಂಪ್ರೆಸರ್ ಇರಲಿಲ್ಲ.

ಮತ್ತಷ್ಟು ಓದಿ: ಕೆಲಸ ಸರಿ ಮಾಡಿಲ್ಲ ಎಂದಿದ್ದಕ್ಕೆ ಚಾಕುವಿನಿಂದ ಇರಿದು ಸಹೋದ್ಯೋಗಿಯ ಕೊಲೆ

ಪ್ರಸಿದ್ಧ ಚೊಟ್ಟಣಿಕ್ಕರ ಭಗವತಿ ದೇವಸ್ಥಾನದ ಉತ್ತರಕ್ಕೆ ಸುಮಾರು 4 ಕಿ.ಮೀ ದೂರದಲ್ಲಿರುವ ಚೊಟ್ಟನಿಕ್ಕಾರದ ಎರುವೇಲಿ ಬಳಿಯ ಅರಮನೆ ಚೌಕದಲ್ಲಿರುವ ಈ ಮನೆಗೆ ಹಲವು ವರ್ಷಗಳ ಹಿಂದೆಯೇ ಬೀಗ ಹಾಕಲಾಗಿತ್ತು.

14 ಎಕರೆ ಜಾಗದಲ್ಲಿರುವ ಈ ಮನೆಯು ಎರ್ನಾಕುಲಂ ಮೂಲದವರ ಒಡೆತನದಲ್ಲಿದೆ ಮತ್ತು ಸುಮಾರು 15-20 ವರ್ಷಗಳಿಂದ ವಾಸವಿರಲಿಲ್ಲ. ಪೊಲೀಸರು ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us