ತಮಿಳುನಾಡಿನಿಂದ 83 ಕಿ.ಮೀ. ದೂರದ ಕೊಯಮತ್ತೂರಿಗೆ ಹೋಗಿ ಹೆಂಡತಿಯನ್ನು ಕೊಂದು ಬಂದ ಗಂಡ!

52 ವರ್ಷದ ವ್ಯಕ್ತಿಯೊಬ್ಬರು ಪತ್ನಿಯನ್ನು ಕೊಂದು ನಂತರ ತಮಿಳುನಾಡಿನ ಕೊಯಮತ್ತೂರಿಗೆ 83 ಕಿ.ಮೀ ಕಾರು ಚಲಾಯಿಸಿ, ಕೇರಳದ ತಮ್ಮ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದ ವ್ಯಕ್ತಿಯೊಬ್ಬರು ಸೋಮವಾರ ತನ್ನ ಪತ್ನಿಯನ್ನು ಕೊಂದು ನಂತರ ಮನೆಯ ಹೊರಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 52 ವರ್ಷದ ಕೃಷ್ಣಕುಮಾರ್ ತನ್ನ ಹೆಣ್ಣುಮಕ್ಕಳನ್ನು ಭೇಟಿ ಮಾಡಲು ಕೇರಳದ ವಂಡಾಜಿಯಲ್ಲಿರುವ ತನ್ನ ಕುಟುಂಬದ ಮನೆಯಿಂದ ತಮಿಳುನಾಡಿನ ಕೊಯಮತ್ತೂರಿಗೆ 83 ಕಿ.ಮೀ ಕಾರು ಚಲಾಯಿಸಿದ್ದಾರೆ.

ತಮಿಳುನಾಡಿನಿಂದ 83 ಕಿ.ಮೀ. ದೂರದ ಕೊಯಮತ್ತೂರಿಗೆ ಹೋಗಿ ಹೆಂಡತಿಯನ್ನು ಕೊಂದು ಬಂದ ಗಂಡ!
Murder

Updated on: Mar 04, 2025 | 10:42 PM

ಕೊಯಮತ್ತೂರು (ಮಾರ್ಚ್ 4): ಕೇರಳದ ವ್ಯಕ್ತಿಯೊಬ್ಬರು ಸೋಮವಾರ ತನ್ನ ಪತ್ನಿಯನ್ನು ಕೊಂದು ನಂತರ ಮನೆಯ ಹೊರಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 52 ವರ್ಷದ ಕೃಷ್ಣಕುಮಾರ್ ತನ್ನ ಪತ್ನಿ ಸಂಗೀತಾ ಜೊತೆ ವಾಸಿಸುತ್ತಿದ್ದ ಹೆಣ್ಣುಮಕ್ಕಳನ್ನು ಭೇಟಿ ಮಾಡಲು ಕೇರಳದ ವಂಡಾಜಿಯಲ್ಲಿರುವ ತನ್ನ ಕುಟುಂಬದ ಮನೆಯಿಂದ ತಮಿಳುನಾಡಿನ ಕೊಯಮತ್ತೂರಿಗೆ 83 ಕಿ.ಮೀ ಕಾರು ಚಲಾಯಿಸಿದ್ದಾರೆ. ಆದರೆ, ದಂಪತಿಗಳ ನಡುವೆ ಜಗಳ ನಡೆದಿದ್ದು, ನಂತರ 52 ವರ್ಷದ ವ್ಯಕ್ತಿ ತನ್ನ ಹೆಂಡತಿಯನ್ನು ಗುಂಡಿಕ್ಕಿ ಕೊಂದಿದ್ದಾನೆ.

ಈ ದಂಪತಿಗಳ ಇಬ್ಬರು ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನವರಾಗಿದ್ದು, ಕೃಷ್ಣ ಕುಮಾರ್ ತನ್ನ ಮಕ್ಕಳನ್ನು ಭೇಟಿ ಮಾಡಲು ಹೋಗಿದ್ದರು. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಅವರ ಹೆಣ್ಣುಮಕ್ಕಳು ಶಾಲೆಗೆ ಹೋದ ನಂತರ, ಕೃಷ್ಣಕುಮಾರ್ ಮತ್ತು ಸಂಗೀತಾ ನಡುವೆ ಜಗಳವಾಯಿತು. ಕೋಪದ ಭರದಲ್ಲಿ ಅವರು ತನ್ನ ಪಿಸ್ತೂಲಿನಿಂದ ತನ್ನ ಹೆಂಡತಿಯ ಮೇಲೆ ಹಲವು ಬಾರಿ ಗುಂಡು ಹಾರಿಸಿದರು. ಅವಳು ಸ್ಥಳದಲ್ಲೇ ಸಾವನ್ನಪ್ಪಿದಳು.

ಇದನ್ನೂ ಓದಿ: ಹರ್ಯಾಣ: ಸೂಟ್​ಕೇಸ್​ನಲ್ಲಿ ಕಾಂಗ್ರೆಸ್​ ಕಾರ್ಯಕರ್ತೆಯ ಶವ ಪತ್ತೆ ಪ್ರಕರಣ, ಆರೋಪಿಯ ಬಂಧನ

ತನ್ನ ಹೆಂಡತಿಯನ್ನು ಕೊಂದ ನಂತರ, ಕೃಷ್ಣಕುಮಾರ್ ತನ್ನ ಮನೆಗೆ ಹಿಂತಿರುಗಿ ನಂತರ ತನ್ನ ತಂದೆಯ ಮುಂದೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಅವರು ಏರ್ ಗನ್ ಬಳಸಿದ್ದಾರೆ ಎಂದು ವರದಿಯಾಗಿದೆ. ಗುಂಡಿನ ಸದ್ದು ಕೇಳಿದ ನಂತರ ಸಂಗೀತಾಳ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು, ಪೊಲೀಸರು ರಕ್ತದ ಮಡುವಿನಲ್ಲಿ ಸಂಗೀತಾಳ ಶವವನ್ನು ವಶಪಡಿಸಿಕೊಂಡರು. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

ಇದನ್ನೂ ಓದಿ: ಹಿಮಾನಿ ನರ್ವಾಲ್ ಶವವನ್ನು ಆರೋಪಿ ಸೂಟ್‌ಕೇಸ್‌ನಲ್ಲಿ ಎಳೆದೊಯ್ಯುತ್ತಿರುವ ಸಿಸಿಟಿವಿ ವಿಡಿಯೋ ಪತ್ತೆ

ಕೃಷ್ಣಕುಮಾರ್ ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದರು. ಭಾರತಕ್ಕೆ ಬಂದ ನಂತರ ಅವರು ಕೊಯಮತ್ತೂರಿನಲ್ಲಿ ನೆಲೆಸಿದ್ದರು. ಪೊಲೀಸರ ಪ್ರಕಾರ, ಕಳೆದ ಎರಡು ವರ್ಷಗಳಿಂದ, ದಂಪತಿಗಳ ನಡುವೆ ಜಗಳವಾಗುತ್ತಿತ್ತು. ಕೃಷ್ಣಕುಮಾರ್ ಸಂಗೀತಾಗೆ ವಿವಾಹೇತರ ಸಂಬಂಧವಿದೆ ಎಂದು ಅನುಮಾನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಮತ್ತು ಡೈವೋರ್ಸ್ ಬಗ್ಗೆ ಚರ್ಚಿಸುತ್ತಿದ್ದರು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:47 pm, Tue, 4 March 25