Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾನಿ ನರ್ವಾಲ್ ಶವವನ್ನು ಆರೋಪಿ ಸೂಟ್‌ಕೇಸ್‌ನಲ್ಲಿ ಎಳೆದೊಯ್ಯುತ್ತಿರುವ ಸಿಸಿಟಿವಿ ವಿಡಿಯೋ ಪತ್ತೆ

ಹಿಮಾನಿ ನರ್ವಾಲ್ ಶವವನ್ನು ಆರೋಪಿ ಸೂಟ್‌ಕೇಸ್‌ನಲ್ಲಿ ಎಳೆದೊಯ್ಯುತ್ತಿರುವ ಸಿಸಿಟಿವಿ ವಿಡಿಯೋ ಪತ್ತೆ

ಸುಷ್ಮಾ ಚಕ್ರೆ
|

Updated on:Mar 03, 2025 | 10:06 PM

ಹಿಮಾನಿಯ ನಿರಂತರ ಹಣದ ಬೇಡಿಕೆಯಿಂದ ನಾನು ಹತಾಶೆಗೊಂಡಿದ್ದೆ, ಆದ್ದರಿಂದ ನಾನು ಹರಿಯಾಣದ ರೋಹ್ಟಕ್‌ನಲ್ಲಿರುವ ಅವಳ ಪೂರ್ವಜರ ಮನೆಯಲ್ಲಿ ಅವಳನ್ನು ಕೊಂದಿದ್ದೇನೆ ಎಂದು ಆರೋಪಿ ಸಚಿನ್ ಪೊಲೀಸರಿಗೆ ತಿಳಿಸಿದ್ದಾನೆ. ಹಿಮಾನಿಯ ಕುಟುಂಬ ಈ ಆರೋಪಗಳನ್ನು ನಿರಾಕರಿಸಿದೆ ಮತ್ತು ಸಿಬಿಐ ತನಿಖೆಗೆ ಒತ್ತಾಯಿಸಿದೆ. ಹಿಮಾನಿ ನರ್ವಾಲ್ ಜೊತೆ ಸಂಬಂಧ ಹೊಂದಿದ್ದಾಗಿ ಹೇಳಿದ್ದಾನೆ. ಹಿಮಾನಿ ಹಣಕ್ಕಾಗಿ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು. ಲಕ್ಷಗಟ್ಟಲೆ ಸುಲಿಗೆ ಮಾಡಿದ್ದಳು. ಇದರಿಂದ ಬೇಸತ್ತು ಕೊಲೆ ಮಾಡಿದ್ದಾಗಿ ಆತ ಹೇಳಿಕೆ ನೀಡಿದ್ದಾನೆ.

ರೋಹ್ಟಕ್ (ಮಾರ್ಚ್ 3): ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಫೆಬ್ರವರಿ 28ರಂದು ರಾತ್ರಿ 10.16ಕ್ಕೆ ಆರೋಪಿ ಸಚಿನ್ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿಯ ಶವವಿದ್ದ ಸೂಟ್‌ಕೇಸ್ ಅನ್ನು ಎಳೆದುಕೊಂಡು ಹೋಗುತ್ತಿರುವ ಆಘಾತಕಾರಿ ಸಿಸಿಟಿವಿ ವಿಡಿಯೋ ಪೊಲೀಸರಿಗೆ ಸಿಕ್ಕಿದೆ. ವಿಚಾರಣೆಯ ಸಮಯದಲ್ಲಿ ಸಚಿನ್ ಈ ಕೊಲೆಯನ್ನು ತಾನೇ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹಿಮಾನಿ ನರ್ವಾಲ್ ಜೊತೆ ಸಂಬಂಧ ಹೊಂದಿದ್ದಾಗಿ ಹೇಳಿದ್ದಾನೆ. ಹಿಮಾನಿ ಹಣಕ್ಕಾಗಿ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು. ಲಕ್ಷಗಟ್ಟಲೆ ಸುಲಿಗೆ ಮಾಡಿದ್ದಳು. ಇದರಿಂದ ಬೇಸತ್ತು ಕೊಲೆ ಮಾಡಿದ್ದಾಗಿ ಆತ ಹೇಳಿಕೆ ನೀಡಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 03, 2025 10:01 PM