ಕೇರಳ: ಕಳಮಶ್ಶೇರಿ ಸ್ಫೋಟ; ಆರೋಪಿ ಡೊಮಿನಿಕ್ ಮನೆಯಲ್ಲೇ ತಯಾರಿಸಿದ್ದ ಬಾಂಬ್

|

Updated on: Oct 30, 2023 | 1:57 PM

Kalamassery bomb blast: ಟಿಫಿನ್ ಬಾಕ್ಸ್ ನಲ್ಲಿ ಬಾಂಬ್ ಇಡದೇ ಆರು ಪ್ಲಾಸ್ಟಿಕ್ ಕವರ್​​ಗಳಲ್ಲಿ ಬಾಂಬ್ ಇಡಲಾಗಿತ್ತು ಎಂದು ಡೊಮಿನಿಕ್ ಮಾರ್ಟಿನ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಪೆಟ್ರೋಲ್ ತುಂಬಿದ ಪ್ಲಾಸ್ಟಿಕ್ ಚೀಲಕ್ಕೆ ರಿಮೋಟ್ ಜೋಡಿಸಲಾಗಿತ್ತು. ಬ್ಯಾಟರಿಗೆ ಜೋಡಿಸಲಾದ ಗನ್ ಕಿಡಿಯನ್ನು ಸೃಷ್ಟಿಸಿದ್ದು, ನಂತರ ಸ್ಫೋಟಗೊಂಡಿತ್ತು

ಕೇರಳ: ಕಳಮಶ್ಶೇರಿ ಸ್ಫೋಟ; ಆರೋಪಿ ಡೊಮಿನಿಕ್ ಮನೆಯಲ್ಲೇ ತಯಾರಿಸಿದ್ದ ಬಾಂಬ್
ಡೊಮಿನಿಕ್ ಮಾರ್ಟಿನ್
Follow us on

ಕೊಚ್ಚಿ ಅಕ್ಟೋಬರ್ 30: ಕೇರಳದ (Kerala) ಕಳಮಶ್ಶೇರಿಯಲ್ಲಿ (Kalamassery Blast) ಭಾನುವಾರ ‘ಜೆಹೋವನ ಸಾಕ್ಷಿಗಳ’ ಸಮಾವೇಶದ ಸ್ಥಳದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಅಂದಹಾಗೆ ಆರೋಪಿ ಡೊಮಿನಿಕ್ ಮಾರ್ಟಿನ್ (Dominic Martin) ಸ್ಫೋಟಕ್ಕೆ ಬಳಸಿದ ಬಾಂಬ್ ನ್ನು ತಯಾರಿಸಿದ್ದು ತನ್ನ ಮನೆಯಲ್ಲೇ. ಇಂಟರ್‌ನೆಟ್ ನೋಡಿ ಬಾಂಬ್ ತಯಾರಿಸುವುದನ್ನು ಕಲಿತಿದ್ದೇನೆ ಎಂದು ಆತ ಪೊಲೀಸರಿಗೆ ಹೇಳಿದ್ದಾನೆಡೊಮಿನಿಕ್ ನ ಯೂಟ್ಯೂಬ್ ಲಾಗಿನ್ ಅನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಫಾರ್​​​ಮೆನ್ ಆಗಿರುವ ಈತನಿಗೆ ತಂತ್ರಜ್ಞಾನದ ಅರಿವೂ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಡೊಮಿನಿಕ್ ಮಾರ್ಟಿನ್ ನಿನ್ನೆ ಅಲುವಾ ಬಳಿಯ ಕುಟುಂಬ ಮನೆಗೆ ಬಂದಿದ್ದು, ಬಾಂಬ್ ತಯಾರಿಸಿದ ಬಳಿಕ ನೇರವಾಗಿ ಕಳಮಶ್ಶೇರಿಯಲ್ಲಿರುವ ಕನ್ವೆನ್ಷನ್ ಸೆಂಟರ್‌ಗೆ ತೆರಳಿದ್ದ. ಬೆಳಗ್ಗೆ 7 ಗಂಟೆ ಸುಮಾರಿಗೆ ಕುರ್ಚಿಯ ಕೆಳಗೆ ಬಾಂಬ್ ಇಡಲಾಗಿತ್ತು. ಆ ವೇಳೆ ಸಭಾಂಗಣದಲ್ಲಿ ಮೂವರು ಮಾತ್ರ ಇದ್ದರು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

ಟಿಫಿನ್ ಬಾಕ್ಸ್ ನಲ್ಲಿ ಬಾಂಬ್ ಇಡದೇ ಆರು ಪ್ಲಾಸ್ಟಿಕ್ ಕವರ್​​ಗಳಲ್ಲಿ ಬಾಂಬ್ ಇಡಲಾಗಿತ್ತು ಎಂದು ಡೊಮಿನಿಕ್ ಮಾರ್ಟಿನ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಪೆಟ್ರೋಲ್ ತುಂಬಿದ ಪ್ಲಾಸ್ಟಿಕ್ ಚೀಲಕ್ಕೆ ರಿಮೋಟ್ ಜೋಡಿಸಲಾಗಿತ್ತು. ಬ್ಯಾಟರಿಗೆ ಜೋಡಿಸಲಾದ ಗನ್ ಕಿಡಿಯನ್ನು ಸೃಷ್ಟಿಸಿದ್ದು, ನಂತರ ಸ್ಫೋಟಗೊಂಡಿತ್ತು. ಇದಕ್ಕಾಗಿ ಎಂಟು ಲೀಟರ್ ಪೆಟ್ರೋಲ್ ಬಳಸಲಾಗಿದೆ. ಸ್ಫೋಟಕ್ಕಾಗಿ 50 ಶೆಲ್‌ಗಳನ್ನು ಸ್ಫೋಟಿಸಲಾಗಿದೆ. ತ್ರಿಪೂಣಿತ್ತರದ ಪಟಾಕಿ ಅಂಗಡಿಯೊಂದರಲ್ಲಿ ಇವುಗಳನ್ನು ಖರೀದಿಸಿರುವುದಾಗಿಯೂ ಆರೋಪಿ ಹೇಳಿದ್ದಾನೆ.

ಮಾರ್ಟಿನ್ ತನ್ನನ್ನು ಕಡವಂತ್ರ ಮೂಲದವನೆಂದು ಪೊಲೀಸರಿಗೆ ಪರಿಚಯಿಸಿಕೊಂಡಿದ್ದಾನೆ. ಆದರೆ ನಂತರ ಆತ ತಮ್ಮ ಕುಟುಂಬದೊಂದಿಗೆ 6 ವರ್ಷಗಳಿಂದ ತಮ್ಮನಂನಲ್ಲಿ ಬಾಡಿಗೆ ಮನೆಯಲ್ಲಿದ್ದಾನೆ ಎಂದು ಹೇಳಿದ್ದಾನೆ. ಕೇಂದ್ರ ಏಜೆನ್ಸಿಗಳು ಮತ್ತು ಕೇರಳ ಪೊಲೀಸರು ತಮ್ಮನಂನಲ್ಲಿರುವ ಬಾಡಿಗೆ ಮನೆಯಲ್ಲಿ ಹುಡುಕಾಟ ನಡೆಸಿದಾಗ, ಆತ ಒಂದು ವರ್ಷದ ಹಿಂದೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿತ್ತು.

ಡೊಮಿನಿಕ್ ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೊರಟು ಸ್ಫೋಟಕಗಳೊಂದಿಗೆ ಕಳಮಶ್ಶೇರಿಯ ಕನ್ವೆನ್ಷನ್ ಸೆಂಟರ್ ತಲುಪಿದ್ದಾನೆ. 8 ಗಂಟೆಯ ನಂತರ 2 ಬಾರಿ ಹಾಲ್ ಒಳಗೆ ಮತ್ತು ಹೊರಗೆ ಹೋಗಿದ್ದಾನೆ. ಡೊಮಿನಿಕ್ ತನ್ನ ಮೊಬೈಲ್ ಫೋನ್‌ನಲ್ಲಿ ಅದುವರೆಗಿನ ಸಂಪೂರ್ಣ ಚಲನವಲನಗಳನ್ನು ರೆಕಾರ್ಡ್ ಮಾಡಿದ್ದ. ವರ್ಷಗಳ ಹಿಂದೆ, ‘ಜೆಹೋವನ ಸಾಕ್ಷಿಗಳ ನಂಬಿಕೆಯುಳ್ಳ ಡೊಮಿನಿಕ್ ಚರ್ಚ್‌ನ ಬೈಬಲ್ ತರಗತಿಗಳಿಗೆ ಹಾಜರಾಗಿದ್ದ. ನಂತರ, ಮಾರ್ಟಿನ್ ವಿದೇಶಕ್ಕೆ ಹೋಗಿದ್ದು ಚರ್ಚ್ ತೊರೆದ್ದಿದ್ದ ನಿಖರವಾದ ಯೆಹೋವನ ಸಾಕ್ಷಿಗಳ ಕಲ್ಪನೆಗಳನ್ನು ವಿರೋಧಿಸಲೆಂದೇ ತಾನು ಈ ಕೃತ್ಯವೆಸಗಿರುವುದಾಗಿ ಮಾರ್ಟಿನ್ ವಿಡಿಯೊದಲ್ಲಿ ಹೇಳಿದ್ದಾನೆ.

ಕಳಮಶ್ಶೇರಿಯ ‘ಜೆಹೋವನ ಸಾಕ್ಷಿಗಳ’ ಚರ್ಚ್‌ನ ಸಮಾವೇಶದ ಸ್ಥಳದಲ್ಲಿ ನಡೆದ ಸ್ಫೋಟದ ಶಂಕಿತ ಡೊಮಿನಿಕ್ ಮಾರ್ಟಿನ್ ಅವರ ಸಂಬಂಧಿಕರು ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಡೊಮಿನಿಕ್ ಅವರ ಅತ್ತೆ ಮತ್ತು ಇತರ ಸಂಬಂಧಿಕರು ಸಮಾವೇಶದಲ್ಲಿ ಭಾಗವಹಿಸಿದ್ದರು. ಸ್ಫೋಟ ಸಂಭವಿಸಿದ ಸಭಾಂಗಣದ ಹಿಂಭಾಗದಲ್ಲಿ ಅವರು ಕುಳಿತಿದ್ದರು. ಅತ್ತೆ ಬಂದರೂ ಕಾರ್ಯಾಚರಣೆಯಿಂದ ಹಿಂದೆ ಸರಿಯಲಿಲ್ಲ. ಆಕೆಗೆ ಸ್ಫೋಟದಲ್ಲಿ ಏನೂ ಆಗಲಿಲ್ಲ ಎಂದು ಆತ ಹೇಳಿಕೆ ನೀಡಿದ್ದಾನೆ. ಡೊಮಿನಿಕ್ ಮಾರ್ಟಿನ್ ಆಗಮನವನ್ನು ಗಮನಿಸಲಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ.

ಇದನ್ನೂ ಓದಿ: Explained: ಕ್ರಿಸ್ಮಸ್, ಈಸ್ಟರ್ ಆಚರಿಸೊಲ್ಲ, ರಾಷ್ಟ್ರಗೀತೆ ಹಾಡೊಲ್ಲ, ರಾಷ್ಟ್ರಧ್ವಜಕ್ಕೆ ವಂದಿಸುವುದಿಲ್ಲ; ಒಬ್ಬನೇ ದೇವ: ಇದು ಜೆಹೋವಾಸ್ ವಿಟ್ನೆಸಸ್ ಪಂಗಡದವರ ನಂಬಿಕೆ

ಆರೋಪಿ ಡೊಮಿನಿಕ್ ಮಾರ್ಟಿನ್ ಎರಡು ತಿಂಗಳ ತಯಾರಿಯ ನಂತರ ಕಳಮಶ್ಶೇರಿಯಲ್ಲಿ ಜೆಹೋವನ ಸಾಕ್ಷಿಗಳ ಸಭೆಯನ್ನು ಸ್ಫೋಟಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ. ಸಭೆಯ ದಿನಾಂಕ ತಿಳಿದು ಆರೋಪಿ ದುಬೈನಿಂದ ಬಂದಿದ್ದರು. ಕಳೆದ ಮೂರು ದಿನಗಳಿಂದ ಅವರು ಅತ್ತಾಣಿಯಲ್ಲಿರ ತಮ್ಮ ಮನೆಯಲ್ಲಿದ್ದರು ಎಂದು ವರದಿಯಾಗಿದೆ. ಈ ದಿನಗಳಲ್ಲಿ ಅವರನ್ನು ನೋಡಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:15 pm, Mon, 30 October 23