Explained: ಕ್ರಿಸ್ಮಸ್, ಈಸ್ಟರ್ ಆಚರಿಸೊಲ್ಲ, ರಾಷ್ಟ್ರಗೀತೆ ಹಾಡೊಲ್ಲ, ರಾಷ್ಟ್ರಧ್ವಜಕ್ಕೆ ವಂದಿಸುವುದಿಲ್ಲ; ಒಬ್ಬನೇ ದೇವ: ಇದು ಜೆಹೋವಾಸ್ ವಿಟ್ನೆಸಸ್ ಪಂಗಡದವರ ನಂಬಿಕೆ

Know Who Are Jehovah's Witnesses: ಕೇರಳದ ಎರ್ನಾಕುಲಂನಲ್ಲಿ ಜೆಹೋವಾಸ್ ವಿಟ್ನೆಸಸ್ ಎಂಬ ಕ್ರೈಸ್ತ ಪಂಗಡದವರ ಧಾರ್ಮಿಕ ಸಭೆಯಲ್ಲಿ ಸರಣಿ ಸ್ಫೋಟಗಳು ಸಂಭವಿಸಿದೆ. ಅದೇ ಪಂಗಡಕ್ಕೆ ಸೇರಿದವನೆನ್ನಲಾದ ಒಬ್ಬ ವ್ಯಕ್ತಿ ತಾನೇ ಈ ಸ್ಫೋಟ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ಈ ಪಂಗಡವರು ಬೈಬಲ್ ಗ್ರಂಥದಲ್ಲಿರುವ ನುಡಿಗಳನ್ನ ಪರಮಸತ್ಯವೆಂದು ಭಾವಿಸಿ ನಂಬಿಕೆ ಇಟ್ಟುಕೊಂಡಿದ್ದಾರೆ. ಇವರು ಯಾವುದೇ ದೇಶದ ರಾಜಕೀಯ ಗುಂಪಿಗೆ ಸೇರುವುದಿಲ್ಲ, ಬೇರೆ ಧರ್ಮದವರ ಜೊತೆ ಬೆರೆಯುವುದಿಲ್ಲ, ಕ್ರಿಸ್ಮಸ್ ಇತ್ಯಾದಿ ಹಬ್ಬಗಳ ಆಚರಣೆ ಮಾಡುವುದಿಲ್ಲ. ಇವರ ಬಗ್ಗೆ ಒಂದು ಪರಿಚಯ ಇಲ್ಲಿದೆ.

Explained: ಕ್ರಿಸ್ಮಸ್, ಈಸ್ಟರ್ ಆಚರಿಸೊಲ್ಲ, ರಾಷ್ಟ್ರಗೀತೆ ಹಾಡೊಲ್ಲ, ರಾಷ್ಟ್ರಧ್ವಜಕ್ಕೆ ವಂದಿಸುವುದಿಲ್ಲ; ಒಬ್ಬನೇ ದೇವ: ಇದು ಜೆಹೋವಾಸ್ ವಿಟ್ನೆಸಸ್ ಪಂಗಡದವರ ನಂಬಿಕೆ
ಜೆಹೋವಾಸ್ ವಿಟ್ನೆಸ್ ಜನರ ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 29, 2023 | 5:26 PM

ಎರ್ನಾಕುಲಂ, ಅಕ್ಟೋಬರ್ 29: ಕೇರಳದ ಕೊಚ್ಚಿ ಸಮೀಪದ ಎರ್ನಾಕುಲಂನ ಕ್ರೈಸ್ತ ಪಂಗಡವೊಂದರ ಧಾರ್ಮಿಕ ಸಭೆಯಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ ಒಬ್ಬರು ಬಲಿಯಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಏರುವ ಭೀತಿ ಇದೆ. ಕಳಮಚೇರಿಯ (Kalamassery) ಝಮ್ರ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸಿಬಿಶನ್ ಸೆಂಟರ್​ನಲ್ಲಿ ಜೆಹೋವಾಸ್ ವಿಟ್ನೆಸಸ್ (Jehovah’s Witnesses) ಎಂಬ ಕ್ರೈಸ್ತ ಪಂಗಡದ ಧಾರ್ಮಿಕ ಸಭೆ ನಡೆಯುವ ವೇಳೆ ಸ್ಫೋಟಗಳು ಸಂಭವಿಸಿವೆ. ಈ ವೇಳೆ 2,500 ಮಂದಿ ಪ್ರಾರ್ಥನೆ ಮಾಡುತ್ತಿದ್ದರು. ಸಭೆಯ ಮಧ್ಯಭಾಗದಲ್ಲೇ ಇರಿಸಲಾಗಿದ್ದ ಟಿಫನ್ ಬಾಕ್ಸ್​ನಲ್ಲಿ ಐಇಡಿ ಬಚ್ಚಿಡಲಾಗಿತ್ತು.

ಈ ಪ್ರಕರಣದಲ್ಲಿ ಭಯೋತ್ಪಾದಕರ ಕೈವಾಡ ಇರಬಹುದು ಎಂಬ ಶಂಕೆ ಇದೆ. ಕಣ್ಣೂರು ರೈಲ್ವೆ ಪೊಲೀಸ್ ಸ್ಟೇಷನ್​ನಲ್ಲಿ ಗುಜರಾತಿ ವ್ಯಕ್ತಿಯೊಬ್ಬನನ್ನು ಶಂಕೆಯ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇದೇ ವೇಳೆ, ಕೋಡಕರ ಪೊಲೀಸ್ ಠಾಣೆಯಲ್ಲಿ ಮತ್ತೊಬ್ಬ ವ್ಯಕ್ತಿ ತಾನೇ ಬಾಂಬ್ ಸ್ಫೋಟ ಮಾಡಿದ್ದಾಗಿ ಹೇಳಿಕೊಂಡು ಶರಣಾಗಿದ್ದಾನೆ. ಡಾಮಿನಿಕ್ ಮಾರ್ಟಿನ್ ಹೆಸರಿನ ಈತ ತಾನು ಜೆಹೋವಾಸ್ ವಿಟ್ನೆಸಸ್ ಅನುಯಾಯಿ ಎಂದು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಕೇರಳದ ಎರ್ನಾಕುಲಂ ಸರಣಿ ಸ್ಫೋಟ ಪ್ರಕರಣ: ಸ್ಫೋಟದ ಹೊಣೆಹೊತ್ತು ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣು

ಯಾವುದಿದು ಜೆಹೋವಾಸ್ ವಿಟ್ನೆಸಸ್?

ಇದು ತಾನು ಪರಿಶುದ್ಧ ಕ್ರೈಸ್ತ ನಂಬಿಕಸ್ಥ ಪಂಗಡವೆಂದು ಹೇಳಿಕೊಳ್ಳುತ್ತದೆ. ಬೈಬಲ್​ನಲ್ಲಿರುವ ವಿಚಾರಗಳು ದೇವರ ನುಡಿಗಳಾಗಿದ್ದು, ಅವು ಮಾತ್ರ ಸತ್ಯವೆಂದು ಇದರ ನಂಬಿಕೆ. ಅಬ್ರಹಾಂ ಆಗಲೀ, ಮೋಸಸ್ ಆಗಲೀ ಜೀಸಸ್ ಆಗಲೀ ಇವರಾರೂ ದೈವಾಂಶ ಸಂಭೂತರಲ್ಲ. ಜೆಹೋವಾಹ್ ಮಾತ್ರವೇ ಏಕಮಾತ್ರ ದೇವರು. ಏಸು ಕ್ರಿಸ್ತನು ಸ್ವರ್ಗದಲ್ಲಿರುವ ದೇವಲೋಕದ ದೊರೆಯಷ್ಟೇ ಎಂದು ಪರಿಗಣಿಸುತ್ತದೆ.

ಜಗತ್ತು ವಿನಾಶಗೊಂಡು, ಭೂಮಿಯಲ್ಲಿ ದೈವ ಸಾಮ್ರಾಜ್ಯ ಸ್ಥಾಪನೆಯಾಗುತ್ತದೆ ಎಂದು ನಂಬಿಕೊಂಡಿದೆ ಈ ಪಂಗಡ

ಜೆಹೋವಾಸ್ ವಿಟ್ನೆಸಸ್ ಬೈಬಲ್ ನುಡಿಗಳ ಮೇಲೆ ಅಚಲ ನಂಬಿಕೆ ಇಟ್ಟುಕೊಂಡಿರುವ ಪಂಗಡ. ಬೈಬಲ್​ನಲ್ಲಿ ಪ್ರಸ್ತಾಪಿಸಿರುವ ಆರ್ಮೆಗೆಡ್ಡಾನ್ ಎಂಬ ಪ್ರಳಯ ಸದ್ಯದಲ್ಲೇ ಸಂಭವಿಸುತ್ತದೆ ಎಂದು ನಂಬಿದೆ. ಆರ್ಮೆಗೆಡ್ಡಾನ್ ಎಂದರೆ ಇಡೀ ಜಗತ್ತು ಬಹಳ ಬೇಗ ವಿನಾಶಗೊಂಡು, ಆ ಬಳಿಕ ದೇವರ ಸಾಮ್ರಾಜ್ಯವು ಈ ಭೂಮಿಯಲ್ಲಿ ಸ್ಥಾಪನೆಯಾಗುತ್ತದೆ. ಮನುಷ್ಯ ಆಡಳಿತ ಇರುವುದಿಲ್ಲ. ಎಲ್ಲವನ್ನೂ ದೇವರೇ ನಿಭಾಯಿಸುತ್ತದೆ ಎಂದು ಇದು ಹೇಳುತ್ತದೆ.

ಇದನ್ನೂ ಓದಿ: ಕೇರಳ: ಕ್ರಿಶ್ಚಿಯನ್ನರ ಸಭೆ, ಎಲ್ಲರೂ ಕಣ್ಮುಚ್ಚಿ ಪ್ರಾರ್ಥಿಸುವ ವೇಳೆಯೇ ಸ್ಫೋಟ, ಉಗ್ರರ ಕೈವಾಡ ಶಂಕೆ

ಯೇಸು ಕ್ರಿಸ್ತನ ಜನ್ಮದಿನದ ಕ್ರಿಸ್ಮಸ್ ಹಬ್ಬವನ್ನಾಗಲೀ, ಈಸ್ಟರ್ ಹಬ್ಬವನ್ನಾಗಲೀ ಜೆಹೋವಾಸ್ ವಿಟ್ನೆಸಸ್ ಪಂಗಡ ಆಚರಿಸುವುದಿಲ್ಲ. ಯಾರದೇ ಜಯಂತಿ, ಪುಣ್ಯತಿಥಿಗಳಲ್ಲಿ ಇವರು ಪಾಲ್ಗೊಳ್ಳುವುದಿಲ್ಲ. ಅವೆಲ್ಲವೂ ಸೈತಾನ್ ಪ್ರೇರಿತ ಆಚರಣೆಗಳು ಎಂಬುದು ಅದರ ವಾದ.

19ನೇ ಶತಮಾನದಲ್ಲಿ ಶುರುವಾದ ಈ ಪಂಗಡ ವಿಶ್ವಾದ್ಯಂತ ಕೋಟ್ಯಂತ ಅನುಯಾಯಿಗಳಿದ್ದಾರೆ. ಭಾರತದಲ್ಲಿ ಇದು 1905ರಿಂದಲೂ ಇದೆ. ಬೇರೆ ಧರ್ಮಗಳು ಮತ್ತು ರಾಜಕೀಯದಿಂದ ಈ ಪಂಗಡದವರು ದೂರವೇ ಉಳಿಯುತ್ತಾರೆ. ಇನ್ನೊಬ್ಬರ ರಕ್ತವನ್ನು ಇವರ ಮೈಗೆ ಹರಿಯಬಿಡುವುದಿಲ್ಲ. ಯಾವುದೇ ದೇಶದ ಮಿಲಿಟರಿಗೆ ಇವರು ಸೇರುವುದಿಲ್ಲ. ಯಾವ ರಾಷ್ಟ್ರಧ್ವಜಕ್ಕೂ ಇವರು ವಂದಿಸುವುದಿಲ್ಲ. ಎಂಬತ್ತರ ದಶಕದಲ್ಲಿ ಕೇರಳದ ಶಾಲೆಯೊಂದರಲ್ಲಿ ಈ ಪಂಗಡದ ಕೆಲ ಮಕ್ಕಳು ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಘಟನೆ ನಡೆದಿತ್ತು. ಜೆಹೋವಾಹನಿಗೆ ಮಾತ್ರವೇ ಇವರ ಶರಣಾರ್ಥಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ