ಪಾಲಕ್ಕಾಡ್: ಕೇರಳದ (Kerala) ಪಾಲಕ್ಕಾಡ್‌ನ ಕಂಜಿಕೋಡ್‌ನಲ್ಲಿರುವ ಕೈಗಾರಿಕಾ ಘಟಕದಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ 22 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಉಕ್ಕಿನ ಕಾರ್ಖಾನೆಯಲ್ಲಿ ಯಂತ್ರವನ್ನು ಆಪರೇಟರ್ ಮಾಡುತ್ತಿದ್ದ ಅರವಿಂದನ್ ಅವರ ಸುಟ್ಟ ಶವವಾಗಿ ಪತ್ತೆಯಾಗಿದ್ದಾರ.
ಮಂಗಳವಾರ ಬೆಳಗ್ಗೆ 6 ಗಂಟೆಗೆ ಸ್ಫೋಟ ಸಂಭವಿಸಿದೆ. ಮೂವರು ವಲಸೆ ಕಾರ್ಮಿಕರು ಗಾಯಗೊಂಡಿದ್ದಾರೆ. ಸ್ಥಾವರದೊಳಗೆ ಸಿಲುಕಿರುವ ಒಬ್ಬರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಸ್ಥಾವರದೊಳಗಿನ ಕುಲುಮೆ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ.
Published On - 10:04 am, Tue, 20 June 23