ಜೂನಿಯರ್‌ಗಳ ಬಟ್ಟೆ ಬಿಚ್ಚಿ, ಗುಪ್ತಾಂಗಕ್ಕೆ ಡಂಬ್​ಬೆಲ್ ಕಟ್ಟಿ ರ‍್ಯಾಗಿಂಗ್; ಕೇರಳದ ಕಾಲೇಜಿನಲ್ಲಿ ಆಘಾತಕಾರಿ ಘಟನೆ

ಕೇರಳದ ನರ್ಸಿಂಗ್ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡುವ ಭಯಾನಕ ಘಟನೆಯೊಂದು ಆತಂಕ ಮೂಡಿಸಿದೆ. ಜೂನಿಯರ್​​ಗಳನ್ನು ನಗ್ನವಾಗಿ ನಿಲ್ಲುವಂತೆ ಮಾಡಿ, ಅವರ ಖಾಸಗಿ ಅಂಗಗಳಿಗೆ ಡಂಬ್​ಬೆಲ್​ಗಳನ್ನು ನೇತುಹಾಕಲಾಗಿದೆ. ತಮ್ಮ ಜೂನಿಯರ್‌ಗಳನ್ನು ಕ್ರೂರವಾಗಿ ರಾಗಿಂಗ್ ಮಾಡಿದ್ದಕ್ಕಾಗಿ, ದೈಹಿಕ ಕಿರುಕುಳ ಮತ್ತು ಸುಲಿಗೆಗೆ ಒಳಪಡಿಸಿದ್ದಕ್ಕಾಗಿ ಕೇರಳದ ಕೊಟ್ಟಾಯಂನ ಸರ್ಕಾರಿ ಕಾಲೇಜಿನ 5 ನರ್ಸಿಂಗ್ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಜೂನಿಯರ್‌ಗಳ ಬಟ್ಟೆ ಬಿಚ್ಚಿ, ಗುಪ್ತಾಂಗಕ್ಕೆ ಡಂಬ್​ಬೆಲ್ ಕಟ್ಟಿ ರ‍್ಯಾಗಿಂಗ್; ಕೇರಳದ ಕಾಲೇಜಿನಲ್ಲಿ ಆಘಾತಕಾರಿ ಘಟನೆ
Men Harassment

Updated on: Feb 12, 2025 | 10:05 PM

ಕೊಟ್ಟಾಯಂ: ಕೇರಳದ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 3ನೇ ವರ್ಷದ 5 ನರ್ಸಿಂಗ್ ವಿದ್ಯಾರ್ಥಿಗಳನ್ನು ತಮ್ಮ ಕೆಲವು ಜೂನಿಯರ್‌ಗಳಿಗೆ ದೈಹಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. ರ್ಯಾಗಿಂಗ್‌ಗೆ ಸಂಬಂಧಿಸಿದಂತೆ ಬಂಧಿತ ವಿದ್ಯಾರ್ಥಿಗಳ ವಿರುದ್ಧ ಕಾಲೇಜಿನ ಮೂವರು ಜೂನಿಯರ್ ನರ್ಸಿಂಗ್ ವಿದ್ಯಾರ್ಥಿಗಳು ದೂರು ಸಲ್ಲಿಸಿದ್ದಾರೆ. ಆ ದೂರಿನ ಪ್ರಕಾರ, ಆ ಜೂನಿಯರ್​ಗಳ ಬಟ್ಟೆ ಬಿಚ್ಚಿ, ಅವರ ಗುಪ್ತಾಂಗಕ್ಕೆ ಡಂಬ್​ಬೆಲ್ ಕಟ್ಟಿ, ಚಿತ್ರಹಿಂಸೆ ನೀಡಲಾಗಿದೆ.

ವೇಟ್‌ಲಿಫ್ಟಿಂಗ್‌ಗಾಗಿ ಬಳಸಲಾಗುವ ಡಂಬ್​ಬೆಲ್​ಗಳನ್ನು ಗುಪ್ತಾಂಗಕ್ಕೆ ಕಟ್ಟಿ, ಬೆತ್ತಲೆಯಾಗಿ ನಿಲ್ಲುವಂತೆ ಮಾಡಲಾಗಿದೆ. ನಂತರ ಚಿತ್ರಹಿಂಸೆ ನೀಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಡಂಬ್​ಬೆಲ್‌ಗಳನ್ನು ವಿದ್ಯಾರ್ಥಿಗಳ ಖಾಸಗಿ ಭಾಗಗಳಿಗೆ ನೇತುಹಾಕಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆ ವಿದ್ಯಾರ್ಥಿಗಳ ದೇಹದ ಮೇಲೆ ಗಾಯಗಳೂ ಆಗಿವೆ. ಬಳಿಕ, ಅವರ ಮುಖ, ತಲೆ ಮತ್ತು ಬಾಯಿಗೆ ಕ್ರೀಮ್ ಹಚ್ಚಿಕೊಳ್ಳಲು ಒತ್ತಾಯಿಸಲಾಯಿತು.

ಇದನ್ನೂ ಓದಿ: Shocking News: ಹೈದರಾಬಾದ್​ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿಗೆ ರ್ಯಾಗಿಂಗ್; ಥಳಿಸಿ, ಅಲ್ಲಾಹು ಅಕ್ಬರ್ ಹೇಳಲು ಒತ್ತಾಯಿಸಿದ 8 ಜನರ ಬಂಧನ

ಹಿರಿಯ ವಿದ್ಯಾರ್ಥಿಗಳು ಮದ್ಯ ಖರೀದಿಸಲು ತಮ್ಮಿಂದ ನಿಯಮಿತವಾಗಿ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಜೂನಿಯರ್ ವಿದ್ಯಾರ್ಥಿಗಳು ದೂರಿನಲ್ಲಿ ಆರೋಪಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಿಂದ ರ‍್ಯಾಗಿಂಗ್ ನಡೆಯುತ್ತಿದೆ ಎಂದು ಜೂನಿಯರ್ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳು ಇತ್ತೀಚೆಗೆ ತಮ್ಮ ಕುಟುಂಬಗಳಿಗೆ ತಮಗಾದ ಅನುಭವವನ್ನು ವಿವರಿಸಿದ್ದರು. ಅವರು ಕಾಲೇಜು ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದರು. ನಂತರ, ಅವರು ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಕೈಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಬಾಲಕಿಯ ಮೇಲೆ ಅತ್ಯಾಚಾರ, ಬರ್ಬರ ಕೊಲೆ, ಮರಣೋತ್ತರ ಪರೀಕ್ಷೆ ವೇಳೆ ಕಣ್ಣೀರಿಟ್ಟ ವೈದ್ಯರು

ಆ ಹಿರಿಯ ವಿದ್ಯಾರ್ಥಿಗಳು ಈ ಚಿತ್ರಹಿಂಸೆಯನ್ನು ವೀಡಿಯೋ ಕೂಡ ಮಾಡಿದ್ದಾರೆ. ಇದನ್ನು ಯಾರಿಗಾದರೂ ಹೇಳಿದರೆ ಶೈಕ್ಷಣಿಕ ಹಿನ್ನಡೆ ಸೇರಿದಂತೆ ತೀವ್ರ ಪರಿಣಾಮಗಳನ್ನು ಎದುರಿಸುವುದಾಗಿ ಬೆದರಿಕೆ ಹಾಕುವ ಮೂಲಕ ಜೂನಿಯರ್‌ಗಳ ಬಾಯಿ ಮುಚ್ಚಿಸಿದ್ದರು ಎನ್ನಲಾಗಿದೆ. ದೀರ್ಘಕಾಲದ ಕಿರುಕುಳವನ್ನು ಸಹಿಸಿಕೊಂಡ ನಂತರ, ಮೂವರು ವಿದ್ಯಾರ್ಥಿಗಳು ಕೊಟ್ಟಾಯಂ ಗಾಂಧಿನಗರ ಪೊಲೀಸರಿಗೆ ದೌರ್ಜನ್ಯದ ಬಗ್ಗೆ ದೂರು ನೀಡಲು ನಿರ್ಧರಿಸಿದರು.

ಬಂಧಿತ ವಿದ್ಯಾರ್ಥಿಗಳನ್ನು ರಾಹುಲ್ ರಾಜ್, ಎನ್.ಎಸ್. ಜೀವಾ, ಎನ್.ಪಿ. ವಿವೇಕ್, ರಿಗಿಲ್ ಜೀತ್ ಮತ್ತು ಸ್ಯಾಮ್ಯುಯೆಲ್ ಜಾನ್ಸನ್ ಎಂದು ಗುರುತಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:29 pm, Wed, 12 February 25