Explainer ಐಸಿಎಂಆರ್‌ ಸೆರೊ ಸಮೀಕ್ಷೆ: ಕೊರೊನಾವೈರಸ್ ವಿರುದ್ಧದ ಪ್ರತಿಕಾಯಗಳ ಬೆಳವಣಿಗೆ ಯಾವ ರಾಜ್ಯದ ಜನರಲ್ಲಿ ಎಷ್ಟೆಷ್ಟು?

| Updated By: ರಶ್ಮಿ ಕಲ್ಲಕಟ್ಟ

Updated on: Jul 28, 2021 | 9:11 PM

ICMR's serosurvey: 21 ರಾಜ್ಯಗಳ 70 ಜಿಲ್ಲೆಗಳಲ್ಲಿ ನಡೆಸಿದ ಐಸಿಎಂಆರ್‌ನ 4 ನೇ ಸೆರೊಸಮೀಕ್ಷೆ ಪ್ರಕಾರ, ಮಧ್ಯಪ್ರದೇಶವು ಅತಿ ಹೆಚ್ಚು ಶೇಕಡಾ 79 ರಷ್ಟು ಸೆರೊಪ್ರೆವೆಲೆನ್ಸ್ ಅನ್ನು ವರದಿ ಮಾಡಿದೆ. ಮಧ್ಯಪ್ರದೇಶದ ನಂತರ ರಾಜಸ್ಥಾನ (76.2%), ಬಿಹಾರ (75.9%) ಇದೆ

Explainer ಐಸಿಎಂಆರ್‌ ಸೆರೊ ಸಮೀಕ್ಷೆ: ಕೊರೊನಾವೈರಸ್ ವಿರುದ್ಧದ ಪ್ರತಿಕಾಯಗಳ ಬೆಳವಣಿಗೆ ಯಾವ ರಾಜ್ಯದ ಜನರಲ್ಲಿ ಎಷ್ಟೆಷ್ಟು?
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೊವಿಡ್ -19 ವಿರುದ್ಧ ಪ್ರತಿಕಾಯಗಳನ್ನು ಹೊಂದಿರುವ ಜನರ ಶೇಕಡಾವಾರು ಸಂಖ್ಯೆಯ ಮೇಲೆ ಜಿಲ್ಲಾ ಮಟ್ಟದ ದತ್ತಾಂಶವನ್ನು ಪಡೆಯಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯೊಂದಿಗೆ ಸಮಾಲೋಚಿಸಿ ಸ್ಥಳೀಯ ಸೆರೊಪ್ರೆವೆಲೆನ್ಸ್ ಸಮೀಕ್ಷೆಗಳನ್ನು ನಡೆಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ರಾಜ್ಯಗಳನ್ನು ಕೇಳಿದೆ. ಐಸಿಎಂಆರ್​​ನ ನಾಲ್ಕನೇ ರಾಷ್ಟ್ರೀಯ ಸೆರೊ ರಾಜ್ಯವಾರು ಸೆರೊಪ್ರೆವೆಲೆನ್ಸ್ ಡೇಟಾವನ್ನು ಸಚಿವಾಲಯ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತೀಯ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಇನ್ನೂ ಸೋಂಕಿಗೆ ಗುರಿಯಾಗಿದ್ದಾರೆ ಎಂದು ಕಂಡುಬಂದಿದೆ, ಮತ್ತು ಮೂರನೇ ಎರಡರಷ್ಟು ಜನರಿಗೆ ಪ್ರತಿಕಾಯಗಳಿವೆ.

21 ರಾಜ್ಯಗಳ 70 ಜಿಲ್ಲೆಗಳಲ್ಲಿ ನಡೆಸಿದ ಐಸಿಎಂಆರ್‌ನ 4 ನೇ ಸೆರೊಸಮೀಕ್ಷೆ ಪ್ರಕಾರ, ಮಧ್ಯಪ್ರದೇಶವು ಅತಿ ಹೆಚ್ಚು ಶೇಕಡಾ 79 ರಷ್ಟು ಸೆರೊಪ್ರೆವೆಲೆನ್ಸ್ ಅನ್ನು ವರದಿ ಮಾಡಿದೆ. ಮಧ್ಯಪ್ರದೇಶದ ನಂತರ ರಾಜಸ್ಥಾನ (76.2%), ಬಿಹಾರ (75.9%) ಇದೆ.  ಕಡಿಮೆ ಸೆರೊಪ್ರೆವೆಲೆನ್ಸ್ ಕೇರಳದಿಂದ (44.4%) ವರದಿ ಆಗಿದ್ದು ನಂತರದ ಸ್ಥಾನದಲ್ಲಿ ಅಸ್ಸಾಂ (50.3 ಶೇಕಡಾ) ಮತ್ತು ಮಹಾರಾಷ್ಟ್ರ (58.0%) ವರದಿಯಾಗಿದೆ.

ಒಟ್ಟಾರೆಯಾಗಿ, ಶೇಕಡಾ 70 ರಷ್ಟು ಭಾರತೀಯರು ಕೊವಿಡ್ ವಿರುದ್ಧ ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಪ್ರಕಟವಾದ ಸಮೀಕ್ಷೆಯು ಬಹಿರಂಗಪಡಿಸಿದೆ.
ರಾಜ್ಯವಾರು ಸೆರೊಪೊಸಿಟಿವಿಟಿ ದರ
ಮಧ್ಯಪ್ರದೇಶ- 79
ರಾಜಸ್ಥಾನ -76.2
ಬಿಹಾರ -75.9
ಗುಜರಾತ್- 75.3
ಛತ್ತೀಸ್‌ಗಡ -74.6
ಉತ್ತರಾಖಂಡ -73.1
ಉತ್ತರ ಪ್ರದೇಶ -71
ಆಂಧ್ರಪ್ರದೇಶ- 70.2
ಕರ್ನಾಟಕ -69.8
ತಮಿಳುನಾಡು -69.2
ಒಡಿಶಾ- 68.1
ಪಂಜಾಬ್- 66.5
ತೆಲಂಗಾಣ- 63.1
ಜಮ್ಮು ಮತ್ತು ಕಾಶ್ಮೀರ- 63
ಹಿಮಾಚಲ ಪ್ರದೇಶ -62
ಜಾರ್ಖಂಡ್- 61
ಪಶ್ಚಿಮ ಬಂಗಾಳ- 60.9
ಹರಿಯಾಣ -60.1
ಮಹಾರಾಷ್ಟ್ರ- 58.0
ಅಸ್ಸಾಂ- 50.3
ಕೇರಳ -44.4

ಸೆರೊ ಸಮೀಕ್ಷೆಯಲ್ಲಿ ಕೇರಳದ ಅಂಕಗಳು ಕಡಿಮೆ: ಹಾಗಂದರೇನು?
ಇದರರ್ಥ ಕೇರಳವು ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿಯಲ್ಲಿ (ಹರ್ಡ್ ಇಮ್ಯುನಿಟಿ) ಕಡಿಮೆ ಅಂಕಗಳನ್ನು ಗಳಿಸುತ್ತದೆಯೇ? ಒಂದು ರೀತಿಯಲ್ಲಿ ಹೌದು, ರಾಜ್ಯದ ಪ್ರಸ್ತುತ ಕೊವಿಡ್ -19 ಪರಿಸ್ಥಿತಿಯು ಸಹ ಇದನ್ನು ಎತ್ತಿ ತೋರಿಸುತ್ತದೆ. ಭಾರತದಲ್ಲಿ ಪ್ರತಿದಿನ ಶೇಕಡಾ 50 ರಷ್ಟು ಹೊಸ ಪ್ರಕರಣಗಳು ಇಲ್ಲಿಂದ ವರದಿ ಆಗಿತ್ತಿವೆ. ಈ ಅನೇಕ ಜನರು SARS-CoV-2 ವಿರುದ್ಧ ಪ್ರತಿಕಾಯಗಳನ್ನು ಹೊಂದಿಲ್ಲ. ಕೇರಳದ ಕೊವಿಡ್ ತಜ್ಞರ ಸಮಿತಿ ಸದಸ್ಯ ಡಾ.ಅನಿಶ್ ಪ್ರಕಾರ, ಕೇರಳವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಿದೆ. ಕೇಂದ್ರವು ಕೇರಳಕ್ಕೆ ಹೆಚ್ಚಿನ ಲಸಿಕೆಗಳನ್ನು ನೀಡಬೇಕು ಏಕೆಂದರೆ ಇದು ರಾಷ್ಟ್ರೀಯ ಹರ್ಡ್ ಇಮ್ಯುನಿಟಿ ಮಿತಿಗಿಂತ ಹಿಂದಿದೆ ಎಂದು ಹೇಳಿರುವುದಾಗಿ ಎಎನ್‌ಐಗೆ ವರದಿ ಮಾಡಿದೆ.

ನೈಸರ್ಗಿಕ ಸೋಂಕು ಮತ್ತು ವ್ಯಾಕ್ಸಿನೇಷನ್
SARS-CoV-2 ವಿರುದ್ಧ ಎಷ್ಟು ಜನರು ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂಬುದನ್ನು ಸೆರೊಸಮೀಕ್ಷೆ ಬಹಿರಂಗಪಡಿಸುತ್ತದೆ. ಈ ಪ್ರತಿಕಾಯಗಳು ವ್ಯಾಕ್ಸಿನೇಷನ್ ಅಥವಾ ನೈಸರ್ಗಿಕ ಸೋಂಕಿನ ಪರಿಣಾಮವಾಗಿರಬಹುದು. ಕೇರಳದ ಲಸಿಕೆ ವ್ಯಾಪ್ತಿಯು ಇತರ ರಾಜ್ಯಗಳಿಗಿಂತ ಪ್ರಮಾಣಾನುಗುಣವಾಗಿರುವುದರಿಂದ, ಹರ್ಡ್ ಇಮ್ಯುನಿಟಿ ಕಡಿಮೆ ಅಂಕವು ನೈಸರ್ಗಿಕ ಸೋಂಕಿನ ಮೂಲಕ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುವ ಜನರ ಸಂಖ್ಯೆ ಕಡಿಮೆ ಎಂದು ಸೂಚಿಸುತ್ತದೆ ಎಂದು ಅನಿಶ್ ಹೇಳಿದ್ದಾರೆ.

ಸೆರೊಸಮೀಕ್ಷೆ ಮತ್ತು ಕೊವಿಡ್ ಮೂರನೇ ಅಲೆ
ಸಾಂಕ್ರಾಮಿಕ ರೋಗದ ಸಂಭವನೀಯ ಮೂರನೇ ಅಲೆಗೆ ಸಂಬಂಧಿಸಿದಂತೆ ಸೆರೊ ಸಮೀಕ್ಷೆ ಏನು ಹೇಳುತ್ತದೆ?. ಕೊವಿಡ್ -19 ವಿರುದ್ಧ ಹರ್ಡ್ ಇಮ್ಯುನಿಟಿಯಲ್ಲಿ ಕೇರಳ, ಅಸ್ಸಾಂ ಮತ್ತು ಮಹಾರಾಷ್ಟ್ರ ಕೆಳಗಿವೆ. ದಿನನಿತ್ಯದ ಪ್ರಕರಣಗಳು ಕಡಿಮೆಯಾಗದೇ ಇರುವುದರಿಂದ ಕೇರಳದ ಪರಿಸ್ಥಿತಿ ಆತಂಕಕಾರಿಯಾಗಿದ್ದರೆ, ಮಹಾರಾಷ್ಟ್ರದ ಕೊವಿಡ್ -19 ಗ್ರಾಫ್ ಮೇಲಕ್ಕೇರಿದೆ. ಈಶಾನ್ಯ ರಾಜ್ಯಗಳು ಹೆಚ್ಚಿನ ಸಂಖ್ಯೆಯ ಕೊವಿಡ್ -19 ಪ್ರಕರಣಗಳನ್ನು ಸಹ ವರದಿ ಮಾಡುತ್ತಿವೆ.

ಇದನ್ನೂ ಓದಿ:ಜಾಗತಿಕ ಮಟ್ಟದಲ್ಲಿ ಕೊವಿಡ್ ಸಾವು ಶೇ 21ರಷ್ಟು ಏರಿಕೆ; ಎರಡು ವಾರಗಳಲ್ಲಿ ಪ್ರಕರಣಗಳು 20 ಕೋಟಿ ಮೀರುವ ಸಾಧ್ಯತೆ: ವಿಶ್ವ ಆರೋಗ್ಯ ಸಂಸ್ಥೆ

ಇದನ್ನೂ ಓದಿ:‘ಐಟಿ ನಿಯಮಗಳನ್ನು ಪಾಲಿಸದಿರುವುದರ’ ಕುರಿತು ಟ್ವಿಟರ್‌ನ ಅಫಿಡವಿಟ್ ತಿರಸ್ಕರಿಸಿದ ದೆಹಲಿ ಹೈಕೋರ್ಟ್

(Kerala scores lowest in ICMR’s serosurvey Madhya Pradesh tops Statewise seropositivity rate)