21 ದಿನಗಳ ಪೂಜೆಗೆಂದು ಭಕ್ತನಿಂದ ನವರತ್ನ ಉಂಗುರ ಪಡೆದು ಗಿರವಿ ಇಟ್ಟ ಪೂಜಾರಿ

ಕೇರಳದ ದೇವಸ್ಥಾನದ ಅರ್ಚಕರೊಬ್ಬರು ಪೂಜೆ ನೆಪದಲ್ಲಿ ಭಕ್ತನಿಂದ ನವರತ್ನ ಉಂಗುರವನ್ನು ಪಡೆದು ಚಿನ್ನದಂಗಡಿಯಲ್ಲಿ ಗಿರವಿ ಇಟ್ಟಿರುವ ಘಟನೆ ವರದಿಯಾಗಿದೆ.

21 ದಿನಗಳ ಪೂಜೆಗೆಂದು ಭಕ್ತನಿಂದ ನವರತ್ನ ಉಂಗುರ ಪಡೆದು ಗಿರವಿ ಇಟ್ಟ ಪೂಜಾರಿ
ನವರತ್ನ ಉಂಗುರ
Follow us
ನಯನಾ ರಾಜೀವ್
|

Updated on:May 27, 2024 | 2:49 PM

ಯಾವ್ಯಾವ ಥರದಲ್ಲಿ ಜನರನ್ನು ಯಾಮಾರಿಸುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಭಕ್ತರೊಬ್ಬರು ಪೂಜಾರಿಗೆ ಪೂಜೆಗೆಂದು ತಮ್ಮ ಚಿನ್ನದುಂಗುರ(Gold Ring)ಕೊಟ್ಟು ಮೋಸಹೋಗಿರುವ ಘಟನೆ ಕೇರಳದಲ್ಲಿ ನಡೆದಿದೆ. ತಿರುಮೂಳಿಕ್ಕುಳಂ ದೇವಸ್ಥಾನದಲ್ಲಿ ಪೂಜಾರಿಯೊಬ್ಬರು ಭಕ್ತನ ಬಳಿ ನೀವು 21 ದಿನ ನಿಮ್ಮ ಕೈಯಲ್ಲಿರುವ ನವರತ್ನ ಉಂಗುರುವನ್ನು ದೇವರ ಪಾದಗಳ ಬಳಿ ಇಟ್ಟು ಪೂಜೆ ಮಾಡಿದರೆ ನಿಮ್ಮ ಕಷ್ಟಗಳೆಲ್ಲವೂ ದೂರವಾಗುವುದು ಎಂದು ಹೇಳಿ ಅವರ ಕೈಲಿದ್ದ ನವರತ್ನ ಉಂಗುರುವನ್ನು ತೆಗೆದುಕೊಂಡಿದ್ದಾರೆ.

ಅದು 1.5 ಲಕ್ಷ ರೂ. ಮೌಲ್ಯದ ಉಂಗುರುವಾಗಿದೆ, ಈ ಉಂಗುರ ಅನಿವಾಸಿ ಮಲಯಾಳಿ ಕುಟುಂಬಕ್ಕೆ ಸೇರಿದ್ದಾಗಿತ್ತು. ಪೂಜಾರಿ ಕೆಪಿ ವಿನೀಶ್​ ಎಂಬುವವರು ತಮಗೆ ಆರ್ಥಿಕ ಸಂಕಷ್ಟ ಇತ್ತೆಂದು ಆ ಉಂಗುರವನ್ನು ಗಿರವಿ ಇಟ್ಟಿದ್ದಾರೆ.

21 ದಿನ ಕಳೆದಿತ್ತು ಅಂದು ಉಂಗುರವನ್ನು ವಾಪಾಸ್ ಕೊಡಬೇಕಿತ್ತು ಆದರೆ ಪ್ರಸಾದ ಮಾತ್ರ ಕೊಟ್ಟಿದ್ದರು, ಅದಕ್ಕೆ ಭಕ್ತರು ಉಂಗುರವೆಲ್ಲಿ ಎಂದು ಕೇಳಿದಾಗ ಇಲ್ಲೆಲ್ಲೋ ಬಿದ್ದಿರಬೇಕು ಎಂದು ಹುಡುಕಾಡಿದಂತೆ ಮಾಡಿದರು. ಬಳಿಕ ಸಿಕ್ಕಿಲ್ಲವೆಂದರು.

ಮತ್ತಷ್ಟು ಓದಿ: Jewellery: ಹೊಸ ಒಡವೆ ಧರಿಸೋದಕ್ಕು ಮೊದಲು ಇದನ್ನ ಮಾಡಿ, ಲಾಭ ಪಡೆಯಿರಿ

ಈ ದೇವಾಲಯವು ತಿರುವಾಂಕೂರು ದೇವಸ್ವಂ ಮಂಡಳಿಯ ವೈಕಂ ಡೆಪ್ಯೂಟಿ ಕಮಿಷನರ್ ಕಚೇರಿಯ ವ್ಯಾಪ್ತಿಗೆ ಒಳಪಟ್ಟಿದೆ. ಬಳಿಕ ಕುಟುಂಬದವರು ಪೂಜಾರಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ, ಆಗ ಅವರು ತಾನು ಉಂಗುರವನ್ನು ಗಿರವಿ ಇಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಳಿಕ ಉಂಗುರವನ್ನು ಹಿಂದಿರುಗಿಸಿದ್ದಾರೆ. ಪೂಜಾರಿಯನ್ನು ದೇವಸ್ಥಾನದಿಂದ ಅಮಾನತುಗೊಳಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:48 pm, Mon, 27 May 24

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ