ಕೇರಳದಲ್ಲಿ ಭಾರೀ ಬಿಸಿಲು: ಕಾರ್ಮಿಕರ ಕೆಲಸದ ಅವಧಿ ಬದಲಾವಣೆ; ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕರೆ

Kerala Heat Wave: ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ಮುಂಜಾಗ್ರತೆ ವಹಿಸಿ ಎಂದು ಆರೋಗ್ಯ ಸಚಿವಾಲಯ ಜನರಿಗೆ ನಿರ್ದೇಶಿಸಿದೆ. ಬಿಸಿಲಿನ ಬೇಗೆಗೆ ನಿರ್ಜಲೀಕರಣವುಂಟಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆ ವಹಿಸಿ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ

ಕೇರಳದಲ್ಲಿ ಭಾರೀ ಬಿಸಿಲು: ಕಾರ್ಮಿಕರ ಕೆಲಸದ ಅವಧಿ ಬದಲಾವಣೆ; ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕರೆ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Mar 10, 2023 | 7:50 PM

ತಿರುವನಂತಪುರಂ: ಕೇರಳದಲ್ಲಿ(Kerala) ದಾಖಲೆಯ ಉಷ್ಣಾಂಶ ದಾಖಲಾಗುತ್ತಿದ್ದು, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಗುರುವಾರದಿಂದ ಪ್ರತಿದಿನ ಶಾಖ ಸೂಚ್ಯಂಕವನ್ನು (Heat Index) ಬಿಡುಗಡೆ ಮಾಡಿದೆ. ತಾಪಮಾನ ಮತ್ತು ತೇವಾಂಶದ ಪರಿಣಾಮವನ್ನು ಒಟ್ಟುಗೂಡಿಸಿ ಶಾಖ ಸೂಚ್ಯಂಕವನ್ನು ಲೆಕ್ಕ ಹಾಕಲಾಗುತ್ತದೆ. ಗುರುವಾರ ಕೋಯಿಕ್ಕೋಡ್, ಆಲಪ್ಪುಳ, ಕೊಟ್ಟಾಯಂ, ಪತ್ತನಂತಿಟ್ಟ ಮತ್ತು ತಿರುವನಂತಪುರಂನಲ್ಲಿ ಶಾಖ ಸೂಚ್ಯಂಕದಲ್ಲಿ ತಾಪಮಾನ ಏರಿಕೆಯಾಗಿರುವುದು ಕಂಡು ಬಂದಿದೆ.

ಸ್ವಯಂಚಾಲಿತ ಹವಾಮಾನ ಕೇಂದ್ರಗಳ (AWS) ಮಾಹಿತಿಯ ಪ್ರಕಾರ, ಕೋಯಿಕ್ಕೋಡ್ ಮತ್ತು ತಿರುವನಂತಪುರಂನಲ್ಲಿ 54 ಕ್ಕಿಂತ ಹೆಚ್ಚಿನ ಶಾಖ ಸೂಚ್ಯಂಕ ದಾಖಲಾಗಿದೆ. ಅಧಿಕಾರಿಗಳ ಪ್ರಕಾರ, ಕೆಎಸ್‌ಡಿಎಂಎ ದೈನಂದಿನ ಶಾಖ ಸೂಚ್ಯಂಕವನ್ನು ಬಿಡುಗಡೆ ಮಾಡಿರುವುದು ಇದೇ ಮೊದಲು.

ಬಿಸಿಲಿನ ಝಳಕ್ಕೆ ಆರೋಗ್ಯ ಜೋಪಾನ

ಸೂಚ್ಯಂಕದ ಏರಿಕೆಯು ಆರೋಗ್ಯ ಸಮಸ್ಯೆಗಳಿರುವ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಮಂಜೇರಿ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಟಿ ಎಸ್ ಅನೀಶ್ ಹೇಳಿದ್ದಾರೆ. ಬಿಸಿಲಿನ ಆಘಾತದಿಂದ ದೇಹವನ್ನು ರಕ್ಷಿಸಲು ಆಗಾಗ್ಗೆ ನೀರು ಕುಡಿಯುತ್ತಿರಬೇಕು. ಬಿಸಿಲಿಗೆ ಹೊರಗೆ ಹೋದವರಿಗೆ ಮಾತ್ರ ಆಘಾತವಾಗುತ್ತದೆ ಎನ್ನುವಂತಿಲ್ಲ. ಒಳಾಂಗಣದಲ್ಲಿ ಕುಳಿತುಕೊಳ್ಳುವವರು, ವಿಶೇಷವಾಗಿ ದುರ್ಬಲರು ಅಸ್ವಸ್ಥತೆಯನ್ನು ಅನುಭವಿಸಬಹುದು. ಆರ್ದ್ರತೆ ಅಥವಾ ತಾಪಮಾನದ ಹೆಚ್ಚಳವು ಮಧುಮೇಹ ಮತ್ತು ಹೃದ್ರೋಗಿಗಳು ಸೇರಿದಂತೆ ಆರೋಗ್ಯ ಸಮಸ್ಯೆಗಳಿರುವ ಜನರ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಶಾಖ ಸೂಚ್ಯಂಕ ಶ್ರೇಣಿಗಳು

29 ಕ್ಕಿಂತ ಕಡಿಮೆ: ಯಾವುದೇ ಅಸ್ವಸ್ಥತೆ ಇಲ್ಲ 30-40: ಕೆಲವು ಅಸ್ವಸ್ಥತೆ 40-45: ದೀರ್ಘಕಾಲದ ಹೊರಗಿರುವುದು, ಚಟುವಟಿಕೆಯಲ್ಲಿ ತೊಡಗಿರುವುದು ಆಯಾಸಕ್ಕೆ ಕಾರಣವಾಗಬಹುದು 45-54: ದೀರ್ಘಕಾಲದ ಹೊರಗಿರುವುದು, ಚಟುವಟಿಕೆಯಲ್ಲಿ ತೊಡಗಿರುವುದು ಬಿಸಿಲಿನ ಆಘಾತಕ್ಕೆ ಕಾರಣವಾಗಬಹುದು.

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ಮುಂಜಾಗ್ರತೆ ವಹಿಸಿ ಎಂದು ಆರೋಗ್ಯ ಸಚಿವಾಲಯ ಜನರಿಗೆ ನಿರ್ದೇಶಿಸಿದೆ. ಬಿಸಿಲಿನ ಬೇಗೆಗೆ ನಿರ್ಜಲೀಕರಣವುಂಟಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆ ವಹಿಸಿ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಬಾಯಾರಿಕೆ ಆಗದೇ ಇದ್ದರೂ ನೀರು ಕುಡಿಯಬೇಕು. ಚಿಕನ್ ಪಾಕ್ಸ್, ಭೇದಿ ಬರದಂತೆ ಜಾಗ್ರತೆ ವಹಿಸಿ. ನೇರವಾಗಿ ಸೂರ್ಯ ಕಿರಣ ತಾಗದಂತೆ ಎಚ್ಚರಿಕೆಯಿಂದಿರಿ. ಹೊರಗಡೆ ಕೆಲಸ ಮಾಡುವ ಕಾರ್ಮಿಕರು  ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ3ರವರೆಗೆ ನೇರವಾಗಿ ಬಿಸಿಲಿಗೆ ಒಡ್ಡುವುದನ್ನು ತಪ್ಪಿಸಬೇಕು ಎಂದು ಸಚಿವೆ ಹೇಳಿದ್ದಾರೆ.

ಇದನ್ನೂ ಓದಿ: Kerala Weather: ಕೇರಳದಲ್ಲಿ ದಾಖಲೆ ಬರೆದ ತಾಪಮಾನ: 54 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಖಲು, ನಿಮ್ಮ ಆರೋಗ್ಯ ಜೋಪಾನ ಮಾಡುವುದು ಹೇಗೆ?

ಆಹಾರ ಸೇವನೆ ಬಗ್ಗೆ ತಜ್ಞರು ಹೇಳಿದ್ದೇನು?

ದೇಹದಲ್ಲಿನ ಜಲಾಂಶ ಇರುವಂತೆ ಮಾಡಲು ಮನೆಯಲ್ಲಿ ಸಿದ್ಧಪಡಿಸಿದ ನಿಂಬೆಹಣ್ಣು ರಸ, ಮಜ್ಜಿಗೆ, ಹಣ್ಣಿನ ಜ್ಯೂಸ್ ಕುಡಿಯಲು ತಜ್ಞರು ಸೂಚಿಸಿದ್ದಾರೆ. ಮದ್ಯ, ಚಹಾ, ಕಾಫಿ, ಕಾರ್ಬನೇಟೆಡ್ ಸಿಹಿಪಾನೀಯಗಳು, ಸಾಕಷ್ಟು ಸಕ್ಕರೆ ಹೊಂದಿರುವ ಪಾನೀಯಗಳು ಇವುಗಳ ಸೇವನೆ ಕಮ್ಮಿ ಮಾಡಿ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ. ಸಾಕಷ್ಟು ಪ್ರಮಾಣದ ಸಿಹಿ ಪದಾರ್ಥಗಳನ್ನು ಸೇವಿಸುವುದರಿಂದ ದೇಹದಲ್ಲಿ ಹೆಚ್ಚಿನ ದ್ರವವನ್ನು ಕಳೆದುಕೊಳ್ಳುವುದು ಮತ್ತು ಹೊಟ್ಟೆನೋವು ಮುಂತಾದ ತೊಂದರೆಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ಪ್ರೋಟೀನ್ ಒಳಗೊಂಡಿರುವ ಆಹಾರ,ಹಳಸಿದ ಆಹಾರಗಳ ಸೇವನೆ ಬೇಡ.

ಮಾಂಸಾಹಾರ ಅಥವಾ ನಾನ್ ವೆಜ್ ಆಹಾರದ ಹೆಚ್ಚಿನ ಸೇವನೆ ಒಳ್ಳೆಯದಲ್ಲ. ಇಂಥಾ ಆಹಾರ ಜೀರ್ಣವಾಗಲುಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ದೇಹದಲ್ಲಿ ಉಷ್ಣತೆಯು ಹೆಚ್ಚಾಗುತ್ತದೆ, ಇದು ನಿರ್ಜಲೀಕರಣವನ್ನು ಹೆಚ್ಚಿಸುತ್ತದೆ. ಹೊಟ್ಟೆನೋವು ಮತ್ತು ಇತರ ತೊಂದರೆಗಳು ಆಗದಂತೆ ನಿಂಬೆಹಣ್ಣು, ಎಳನೀರು, ಮಜ್ಜಿಗೆ ಕುಡಿಯಿರಿ. ಖಾರವಾದ ಆಹಾರಗಳ ಸೇವನೆ ಕಡಿಮೆ ಮಾಡಿ. ಸಾಕಷ್ಟು ತರಕಾರಿಗಳನ್ನು ಸೇವಿಸಬೇಕು.ಸಡಿಲವಾದ ಬಟ್ಟೆ ಧರಿಸಿ, ದೇಹಕ್ಕೆ ನೇರವಾಗಿ ಸೂರ್ಯ ರಶ್ಮಿ ತಾಕದಂತೆ ನೋಡಿಕೊಳ್ಳಿ. ಮನೆಯೊಳಗೆಯೂ ಶಾಖ ಹೆಚ್ಚಾಗದಂತೆ ನೋಡಿಕೊಳ್ಳಿ, ಕಿಟಕಿ ಬಾಗಿಲುಗಳಿಗೆ ಪರದೆ ಹಾಕಿ, ಗಾಳಿಯಾಡುವಂತಿರಲಿ.

ಈ ಜಿಲ್ಲೆಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಲು ಸೂಚನೆ

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಪ್ರಕಾರ, ತಿರುವನಂತಪುರಂ ಜಿಲ್ಲೆಯ ಹಲವು ಭಾಗಗಳು ಮತ್ತು ಆಲಪ್ಪುಳ, ಕೋಟ್ಟಯಂ ಮತ್ತು ಕಣ್ಣೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ 54 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಕೋಟ್ಟಯಂ, ಎರ್ನಾಕುಲಂ, ಕೋಯಿಕ್ಕೋಡ್ ಮತ್ತು ಕಣ್ಣೂರಿನ ಕೆಲವು ಪ್ರದೇಶಗಳಲ್ಲಿ ಗುರುವಾರವೂ 45-54 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಸ್ಥಳಗಳಲ್ಲಿರುವ ಜನರು ದೀರ್ಘಕಾಲದ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಬಿಸಿಲಿನ ಆಘಾತಕ್ಕೊಳಗಾಗಬಹುದು.

ಕಾರ್ಮಿಕರ ಕೆಲಸದ ಸಮಯದಲ್ಲಿ ಬದಲಾವಣೆ

ರಾಜ್ಯದಲ್ಲಿ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಕೆಲಸದ ಸಮಯವನ್ನು ಮಾರ್ಚ್ 2ರಿಂದ ಏಪ್ರಿಲ್ 30 ರವರೆಗೆ ಮರು ನಿಗದಿಪಡಿಸಲಾಗಿದೆ. ಬಿಸಿಲ ಬೇಗೆಯ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಇದ್ದ ಕೆಲಸದ ಅವಧಿಯನ್ನು ಎಂಟು ಗಂಟೆಗೆ ಇಳಿಕೆ ಮಾಡಲಾಗಿದೆ, ಪಾಳಿ ಕಾರ್ಮಿಕರಿಗೆ ಮಧ್ಯಾಹ್ನ 12 ಗಂಟೆಗೆ ಪಾಳಿ ಕೊನೆಗೊಂಡು 3 ಗಂಟೆಗೆ ಪ್ರಾರಂಭವಾಗಲಿದೆ ಎಂದು ಕಾರ್ಮಿಕ ಆಯುಕ್ತರು ಹೇಳಿದ್ದಾರೆ. ಸಮುದ್ರ ಮಟ್ಟದಿಂದ 3000 ಅಡಿಗಿಂತ ಮೇಲಿರುವ ಪ್ರದೇಶಗಳ ಜನರಿಗೆ ಇದು ಅನ್ವಯವಾಗುವುದಿಲ್ಲ. ಕೇರಳದಲ್ಲಿ ಬಿಸಿಲಿನ ಬೇಗೆ ತತ್ತರಿಸಿದ್ದು, ಎರಡು ಬಿಸಿಲು ಆಘಾತ ಪ್ರಕರಣ ಸೇರಿದಂತೆ 102 ಶಾಖದ ಗಾಯ ಪ್ರಕರಣಗಳು ರಾಜ್ಯದಲ್ಲಿ ಬುಧವಾರ ವರದಿಯಾಗಿವೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯ ಆರೋಗ್ಯ ಇಲಾಖೆ ಜನರಿಗೆ ಸೂಚಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:46 pm, Fri, 10 March 23

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್