Amritpal Singh: 5 ವಾಹನಗಳನ್ನು ಬದಲಿಸಿ ಬಂದೂಕು ತೋರಿಸಿ ಬೈಕ್ ಕದ್ದು ಪರಾರಿಯಾದ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಪತ್ತೆಗೆ ಬಲೆ ಬೀಸಿದ ಪೊಲೀಸ್

ಬಂಧನದಿಂದ ತಪ್ಪಿಸಲು ಜಲಂಧರ್‌ನ ಶಾಕೋಟ್ ಪ್ರದೇಶದಲ್ಲಿ ಮಾರುತಿ ಬ್ರೀಜಾದಲ್ಲಿ ಪರಾರಿಯಾಗುವ ಮೊದಲು ಅಮೃತಪಾಲ್ ಸಿಂಗ್ ಮರ್ಸಿಡಿಸ್ ಎಸ್‌ಯುವಿಯೊಳಗೆ ಕಾಣಿಸಿಕೊಂಡಿದ್ದಾನೆ.

Amritpal Singh: 5 ವಾಹನಗಳನ್ನು ಬದಲಿಸಿ ಬಂದೂಕು ತೋರಿಸಿ ಬೈಕ್ ಕದ್ದು ಪರಾರಿಯಾದ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಪತ್ತೆಗೆ ಬಲೆ ಬೀಸಿದ ಪೊಲೀಸ್
ಅಮೃತಪಾಲ್ ಸಿಂಗ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 23, 2023 | 1:11 PM

ಜಲಂಧರ್: ಖಲಿಸ್ತಾನಿ ನಾಯಕ (Khalistani leader) ಅಮೃತಪಾಲ್ ಸಿಂಗ್ (Amritpal Singh)ಬಂಧನದಿಂದ ಪಾರಾಗಲು 12 ಗಂಟೆಗಳಲ್ಲಿ ಐದು ವಾಹನಗಳನ್ನು ಬದಲಾಯಿಸಿರುವುದಾಗಿ ಪೊಲೀಸರು ಪಂಜಾಬ್‌ನಾದ್ಯಂತ (Punjab) ಆತನ ಹುಡುಕಾಟವು 6 ನೇ ದಿನಕ್ಕೆ ಕಾಲಿಟ್ಟಿದೆ. ಅಮೃತಪಾಲ್ ಸಿಂಗ್ ನ ಸಹಾಯಕರಲ್ಲಿ ಒಬ್ಬನ ಬಿಡುಗಡೆಗಾಗಿ ಆತನ ಬೆಂಬಲಿಗರು ಆತನ ಕತ್ತಿ ಮತ್ತು ಬಂದೂಕುಗಳೊಂದಿಗೆ ಪೊಲೀಸ್ ಠಾಣೆಗೆ ನುಗ್ಗಿದ ಕೆಲವೇ ವಾರಗಳಲ್ಲಿ ಸಿಂಗ್ ನ್ನು ಬಂಧಿಸಲು ಪಂಜಾಬ್ ಪೊಲೀಸರು ಬೃಹತ್ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಬಂಧನದಿಂದ  ತಪ್ಪಿಸಲು  ಜಲಂಧರ್‌ನ ಶಾಕೋಟ್ ಪ್ರದೇಶದಲ್ಲಿ ಮಾರುತಿ ಬ್ರೀಜಾದಲ್ಲಿ ಪರಾರಿಯಾಗುವ ಮೊದಲು ಸಿಂಗ್ ಮರ್ಸಿಡಿಸ್ ಎಸ್‌ಯುವಿಯೊಳಗೆ ಕಾಣಿಸಿಕೊಂಡನು. ಎನ್‌ಡಿಟಿವಿಗೆ ಲಭ್ಯವಾದ ಸಿಸಿಟಿವಿ ಫೂಟೇಜ್‌ನಲ್ಲಿ ಆತ ನಿಲುವಂಗಿಯ ಬದಲಿಗೆ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದರಿಂದ ಆತ ಕಾರಿನಲ್ಲಿ ಬಟ್ಟೆಗಳನ್ನು ಬದಲಾಯಿಸಿದ್ದಾನೆ.

ನಂತರ ನಂಗಲ್ ಅಂಬಿಯಾನ್‌ನಲ್ಲಿ ಮತ್ತೊಂದು ಬದಲಾವಣೆ ನಡೆಯಿತು. ಅಲ್ಲಿ ಅಮೃತಪಾಲ್ ಸಿಂಗ್ ಪಪ್ಪಲ್ ಪ್ರೀತ್ ಎಂದು ಗುರುತಿಸಲ್ಪಟ್ಟ ತನ್ನ ಸಹಾಯಕರಲ್ಲಿ ಒಬ್ಬರೊಂದಿಗೆ ಬಜಾಜ್ ಪ್ಲಾಟಿನಾ ಮೋಟಾರ್‌ಸೈಕಲ್‌ನಲ್ಲಿ ಬಂದಿದ್ದಾನೆ.ಬೈಕ್‌ನಲ್ಲಿ ಇಂಧನ ಖಾಲಿಯಾದಾಗ ಸಹಚರರೊಂದಿಗೆ ದಾರಾಪುರದಲ್ಲಿ ಡೀಸೆಲ್ ಚಾಲಿತ ತ್ರಿಚಕ್ರ ವಾಹನದಲ್ಲಿ ಸಂಚರಿಸಿದ್ದಾನೆ.ನಂತರ, ಜನಪ್ರಿಯ ವಿಡಿಯೊ ಗೇಮ್ ಗ್ರ್ಯಾಂಡ್ ಥೆಫ್ಟ್ ಆಟೋದಲ್ಲಿರುವ ದೃಶ್ಯದಂತೆ ಅಮೃತಪಾಲ್ ಸಿಂಗ್ ಮತ್ತು ಪಪ್ಪಲ್ ಪ್ರೀತ್ ಬಂದೂಕು ತೋರಿಸಿ ಮೋಟಾರ್ ಸೈಕಲ್ ಅನ್ನು ಕದ್ದಿದ್ದಾರೆ. ಮಾರ್ಚ್ 18 ರಂದು ಸಂಜೆ 6:46 ರಿಂದ ಲೂಧಿಯಾನಾದ ಶೇಖುಪುರದಲ್ಲಿ ಇಬ್ಬರು ವ್ಯಕ್ತಿಗಳು ಕದ್ದ ಬೈಕ್‌ನಲ್ಲಿ ಪರಾರಿಯಾಗುತ್ತಿರುವುದನ್ನು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಮೋದಿ ಉಪನಾಮ ಟೀಕೆ, ರಾಹುಲ್ ಗಾಂಧಿ ದೋಷಿ ಎಂದು ಸೂರತ್ ನ್ಯಾಯಾಲಯದಿಂದ ಮಹತ್ವದ ತೀರ್ಪು ಪ್ರಕಟ

ಖಲಿಸ್ತಾನಿ ನಾಯಕ ಪರಾರಿಯಾಗಲು ಬಳಸಿದ್ದ ಮರ್ಸಿಡಿಸ್ ಎಸ್‌ಯುವಿ, ಮಾರುತಿ ಬ್ರೆಜ್ಜಾ ಮತ್ತು ಬಜಾಜ್ ಪ್ಲಾಟಿನಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಮೃತಪಾಲ್ ಸಿಂಗ್ ಅವರ ಚಿಕ್ಕಪ್ಪ ಸೇರಿದಂತೆ 120 ಕ್ಕೂ ಹೆಚ್ಚು ಜನರನ್ನು ಶನಿವಾರದಿಂದ ಬಂಧಿಸಲಾಗಿದೆ. “ವಾರಿಸ್ ಪಂಜಾಬ್ ದೇ” ನ ಹಲವಾರು ಸದಸ್ಯರನ್ನು ಕಟ್ಟುನಿಟ್ಟಾದ ರಾಷ್ಟ್ರೀಯ ಭದ್ರತಾ ಕಾಯಿದೆ (NSA) ಅಡಿಯಲ್ಲಿ ವಶಕ್ಕೆ ತೆಗೆದುಕೊಂಡಿದ್ದುತ್ತು ಅಸ್ಸಾಂನ ದಿಬ್ರುಗಢ ಸೆಂಟ್ರಲ್ ಜೈಲಿನಲ್ಲಿ ಬಂಧಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ