ಖಾಪ್ ನಿಯೋಗವು ಸರ್ಕಾರ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಟಿಕಾಯತ್) ರಾಕೇಶ್ ಟಿಕಾಯತ್ (Rakesh Tikait) ಅವರು ಗುರುವಾರ ಹೇಳಿದ್ದಾರೆ. ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿರು ಕುಸ್ತಿಪಟುಗಳು (Wrestlers Protest) ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದಾರೆ.
ಖಾಪ್ ನಿಯೋಗ ರಾಷ್ಟ್ರಪತಿ ಮತ್ತು ಸರ್ಕಾರವನ್ನು ಭೇಟಿ ಮಾಡಲಿದೆ. ಖಾಪ್ ಮತ್ತು ಈ ಮಹಿಳೆಯರು (ಪ್ರತಿಭಟಿಸುವ ಕುಸ್ತಿಪಟುಗಳು) ಸೋಲಬಾರದು. ನಾಳೆ ಕುರುಕ್ಷೇತ್ರದಲ್ಲಿ ಹೆಚ್ಚಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
A Khap representative will meet the President and the government. Khap and these women (protesting wrestlers) won’t be defeated. More decisions will be taken at Kurukshetra tomorrow: Farmer leader Rakesh Tikait at Khap maha panchayat in support of protesting wrestlers in UP’s… pic.twitter.com/uTuMAzHNRW
— ANI (@ANI) June 1, 2023
ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್ ರಾಜಸ್ಥಾನ ಮತ್ತು ದೆಹಲಿಯ ಖಾಪ್‌ಗಳ ಪ್ರತಿನಿಧಿಗಳು ಗುರುವಾರ ಮುಜಫರ್‌ನಗರದ ಸೋರಂ ಗ್ರಾಮದಲ್ಲಿ ಮಾಜಿ ಬ್ರಿಜ್ ಭೂಷಣ್ ಮೇಲಿನ ಲೈಂಗಿಕ ಕಿರುಕುಳ ಆರೋಪದ ವಿರುದ್ಧ ಮಹಿಳಾ ಕುಸ್ತಿಪಟುಗಳ ನೇತೃತ್ವದಲ್ಲಿ ಪ್ರತಿಭಟನೆಗಳ ಕುರಿತು ಚರ್ಚಿಸಲು ಸಭೆ ನಡೆಸಿದ್ದಾರೆ
ಮಹಾಪಂಚಾಯತ್‌ನಲ್ಲಿ, ಖಾಪ್‌ಗಳು ಶುಕ್ರವಾರ ಕುರುಕ್ಷೇತ್ರದಲ್ಲಿ ಮತ್ತೊಂದು ಸಭೆ ನಡೆಸಲಿದ್ದು, ಅಲ್ಲಿ ಹೆಚ್ಚಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಕೇಶ್ ಟಿಕಾಯತ್ ಹೇಳಿದರು. ಕುಸ್ತಿಪಟುಗಳ ಬೆಂಬಲಕ್ಕೆ ಖಾಪ್‌ಗಳ ಪ್ರತಿನಿಧಿಗಳು ರಾಷ್ಟ್ರಪತಿ ಮತ್ತು ಸರ್ಕಾರವನ್ನು ಭೇಟಿ ಮಾಡಲಿದ್ದು, ಅವರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:ಉತ್ತರ ಪ್ರದೇಶ:100 ವರ್ಷ ಪುರಾತನ ದೇಗುಲ ಸೇರಿದಂತೆ 4 ದೇವಾಲಯಗಳ ಮೇಲೆ ದುಷ್ಕರ್ಮಿಗಳ ದಾಂಧಲೆ; 12 ಮೂರ್ತಿಗಳು ಧ್ವಂಸ
12 ವರ್ಷಗಳ ಕಾಲ ಭಾರತೀಯ ಕುಸ್ತಿಯನ್ನು ಆಳಿದ ಗೊಂಡಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ, ಬ್ರಿಜ್ ಭೂಷಣ್ ಶರಣ್ ಸಿಂಗ್, ಒಬ್ಬ ಅಪ್ರಾಪ್ತೆ ಸೇರಿದಂತೆ ಅಥ್ಲೀಟ್‌ಗಳ ಲೈಂಗಿಕ ಕಿರುಕುಳ ನೀಡಿದ್ದು ಅವರನ್ನು ಮೇಲೆ ಬಂಧಿಸಬೇಕೆಂದು ಕುಸ್ತಿಪಟುಗಳು ಒತ್ತಾಯಿಸಿದ್ದಾರೆ. ಬ್ರಿಜ್ ಭೂಷಣ್ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ. ಕುಸ್ತಿಪಟುಗಳ ವಿರುದ್ಧ ಗುಡುಗಿದ ಸಿಂಗ್, ಪದಕಗಳು ತಲಾ ₹15 ಮೌಲ್ಯದ್ದಾಗಿವೆ ಎಂದು ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ