ತಾಂತ್ರಿಕವಾಗಿ ಸಂಕ್ರಾಂತಿಗೆ ತಯಾರಿಸಿದ ಗಾಳಿಪಟ ವೈರಲ್ ಆಗಿ ಸುತ್ತುತ್ತಿದೆ!

ಗಾಳಿಪಟಗಳಿಗೆ ಅಗತ್ಯವಿರುವ ಹಾಳೆಗಳನ್ನು ಹೇಗೆ ಕಾರ್ಯತಂತ್ರವಾಗಿ ಸಂಯೋಜಿಸುವುದು ಎಂಬುದನ್ನು ಟಿಪ್ಪಣಿ ವಿವರಿಸುತ್ತದೆ. ಗಾಳಿಪಟಕ್ಕೆ ರಂಧ್ರಗಳನ್ನು ಮಾಡುವುದು ಮತ್ತು ಅವುಗಳ ಮೂಲಕ ದಾರಗಳನ್ನು ಸರಿಹೊಂದಿಸುವುದು ಹೇಗೆ ಎಂದು ಅವರು ವಿವರಿಸಿದ್ದಾರೆ. ರಂಧ್ರಗಳ ನಡುವಿನ ಅಂತರವನ್ನು ಸಹ ಗಣಿತದಲ್ಲಿ ಬಿಡಿಸಿ, ಉಲ್ಲೇಖಿಸಿದ್ದಾರೆ.

ತಾಂತ್ರಿಕವಾಗಿ ಸಂಕ್ರಾಂತಿಗೆ ತಯಾರಿಸಿದ ಗಾಳಿಪಟ ವೈರಲ್ ಆಗಿ ಸುತ್ತುತ್ತಿದೆ!
ಸಂಕ್ರಾಂತಿಗೆ ತಯಾರಿಸಿದ ಗಾಳಿಪಟ ವೈರಲ್ ಆಗಿ ಸುತ್ತುತ್ತಿದೆ!
ಸಾಧು ಶ್ರೀನಾಥ್​

Updated on: Jan 17, 2024 | 1:24 PM

ಸಂಕ್ರಾಂತಿಯಂದು ಎಲ್ಲರೂ ಗಾಳಿಪಟ ಹಾರಿಸಲು ಇಷ್ಟಪಡುತ್ತಾರೆ. ಆದರೆ ಮರದ ಕೊಂಬೆಗಳಿಗೆ, ವಿದ್ಯುತ್ ತಂತಿಗಳಿಗೆ ಸಿಲುಕಿಹಾಕಿಕೊಂಡಾಗ ಹತಾಶೆಯಿಂದ ಚಡಪಡಿಸುತ್ತಾರೆ. ಆದರೆ, ಹೈದರಾಬಾದ್‌ನ ವ್ಯಕ್ತಿಯೊಬ್ಬರು ಹೊಸ ಗಾಳಿಪಟ ಮಾಡಲು ತಾಂತ್ರಿಕವಾಗಿ ವಿನ್ಯಾಸಗೊಳಿಸಿದ ಕಾಲ್ಪನಿಕ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಕಲೆ ಮತ್ತು ವಿಜ್ಞಾನದ ಸಂಯೋಜನೆಯೊಂದಿಗೆ ಈ ಯುವಕ ಹೊಸ ಟ್ರೆಂಡ್ ಹುಟ್ಟುಹಾಕಿದ್ದಾನೆ.

ಗಾಳಿಪಟಗಳಿಗೆ ಅಗತ್ಯವಿರುವ ಹಾಳೆಗಳನ್ನು ಹೇಗೆ ಕಾರ್ಯತಂತ್ರವಾಗಿ ಸಂಯೋಜಿಸುವುದು ಎಂಬುದನ್ನು ಟಿಪ್ಪಣಿ ವಿವರಿಸುತ್ತದೆ. ಗಾಳಿಪಟಕ್ಕೆ ರಂಧ್ರಗಳನ್ನು ಮಾಡುವುದು ಮತ್ತು ಅವುಗಳ ಮೂಲಕ ದಾರಗಳನ್ನು ಸರಿಹೊಂದಿಸುವುದು ಹೇಗೆ ಎಂದು ಅವರು ವಿವರಿಸಿದ್ದಾರೆ. ರಂಧ್ರಗಳ ನಡುವಿನ ಅಂತರವನ್ನು ಸಹ ಗಣಿತದಲ್ಲಿ ಬಿಡಿಸಿ, ಉಲ್ಲೇಖಿಸಿದ್ದಾರೆ.

ಮತ್ತಷ್ಟು ಓದಿ: ಭೋಪಾಲ್​: ಗುಡಿಸಲಿನಿಂದ 6 ತಿಂಗಳ ಮಗುವನ್ನು ಎಳೆದೊಯ್ದು ಕಚ್ಚಿ ಕೊಂದ ಬೀದಿ ನಾಯಿಗಳು

ಇದರಲ್ಲಿ ಹಾರಾಟಕ್ಕೆ ನೆರವಾಗುವ ಭೌತಶಾಸ್ತ್ರ ಸೂತ್ರವನ್ನು ಅಳವಡಿಸಿಕೊಂಡು ಗಾಳಿಪಟಕ್ಕೆ ಅಗತ್ಯವಿರುವ ಶಕ್ತಿಯನ್ನು ಸಹ ವಿವರಿಸಿದ್ದಾರೆ. ಈ ರೀತಿ ತಯಾರಾದ ಗಾಳಿಪಟ ಆಕಾಶದೆತ್ತರಕ್ಕೆ ಹೋಗುತ್ತದೆ. ಅಲ್ಲಿನ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೇಗೆ ಚಲಿಸುತ್ತದೆ ಎಂಬುದನ್ನೂ ವಿವರಿಸಿದ್ದಾರೆ. ಈ ಸಂದೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇವಲ ಐದು ವರ್ಷದ ಹುಡುಗ ತನ್ನ ಗೊಂಬೆಗಳೊಂದಿಗೆ ಆಟವಾಡುತ್ತಾ ಗಾಳಿಪಟದ ಬಗ್ಗೆ ವಿವರಿಸಿರುವ ರೀತಿಗೆ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us