ಕೆಕೆ ಸುಸ್ತಾಗಿದ್ದರು, ಅವರು ಹೊರಡಲು ಬಯಸಿದರೂ ಅನುಮತಿಸಲಿಲ್ಲ: ಟಿಎಂಸಿ ವಿರುದ್ಧ ದಿಲೀಪ್ ಘೋಷ್ ಟೀಕೆ

| Updated By: ರಶ್ಮಿ ಕಲ್ಲಕಟ್ಟ

Updated on: Jun 02, 2022 | 4:38 PM

ಕೋಲ್ಕತ್ತಾದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಕೆಕೆ ಸಾವನ್ನಪ್ಪಿದ್ದಾರೆ. ಇದು ಯಾವುದೇ ಕಾಲೇಜು ಆಯೋಜಿಸಿದ್ದ ಕಾರ್ಯಕ್ರಮವಲ್ಲ. ಟಿಎಂಸಿ ಮುಖಂಡರು ಕಾರ್ಯಕ್ರಮ ಆಯೋಜಿಸಿದ್ದರು. ಅವರು ಅಸ್ವಸ್ಥರಾಗಿದ್ದರೂ ಅವರನ್ನು ಹಾಡಲು ಒತ್ತಾಯಿಸಲಾಯಿತು.

ಕೆಕೆ ಸುಸ್ತಾಗಿದ್ದರು, ಅವರು ಹೊರಡಲು ಬಯಸಿದರೂ ಅನುಮತಿಸಲಿಲ್ಲ: ಟಿಎಂಸಿ ವಿರುದ್ಧ ದಿಲೀಪ್ ಘೋಷ್ ಟೀಕೆ
ಗಾಯಕ ಕೆಕೆ
Follow us on

ಕೋಲ್ಕತ್ತಾ: ಕೆಕೆ ( (Singer KK) ಎಂದೇ ಜನಪ್ರಿಯವಾಗಿರುವ 53 ವರ್ಷದ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (TMC) ವಿರುದ್ಧ ಬಿಜೆಪಿ ನಾಯಕ ದಿಲೀಪ್ ಘೋಷ್ (Dilip Ghosh) ಅವರು ಗುರುವಾರ ವಾಗ್ದಾಳಿ ನಡೆಸಿದ್ದಾರೆ. ಕೆಕೆ ಅವರಿಗೆ ಸುಸ್ತಾಗಿತ್ತು, ಅಸೌಖ್ಯ ಬಗ್ಗೆ ಅವರು ಹೇಳಿದರೂ ಹಾಡುವಂತೆ ಅವರನ್ನು ಒತ್ತಾಯಿಸಲಾಯಿತು ಎಂದಿದ್ದಾರೆ ಘೋಷ್.  ಮಂಗಳವಾರ ರಾತ್ರಿ ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಕೆಕೆಗೆ ಎದೆನೋವು ಕಾಣಿಸಿಕೊಂಡಿದ್ದು, ಹೋಟೆಲ್ ಕೋಣೆಯಲ್ಲಿ ಕುಸಿದು ಬಿದ್ದಿದ್ದರು. ಖಾಸಗಿ ಆಸ್ಪತ್ರೆಗೆ ತಕ್ಷಣವೇ ಸಾಗಿಸಿದ್ದರೂ ಅಲ್ಲಿ ಅವರು ಸಾವಿಗೀಡಾಗಿದ್ದಾರೆ ಎಂದು ಘೋಷಿಸಲಾಯಿತು. ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಪ್ರಾಥಮಿಕ ಶವಪರೀಕ್ಷೆ ವರದಿಯು ಹೃದಯ ಸ್ತಂಭನವನ್ನು ಸಾವಿಗೆ ಕಾರಣವೆಂದು ಸೂಚಿಸಿದೆ. ಸೋಮವಾರ ಮತ್ತು ಮಂಗಳವಾರ ಎರಡು ಕಾಲೇಜುಗಳು ದಕ್ಷಿಣ ಕೋಲ್ಕತ್ತಾದ ನಜ್ರುಲ್ ಮಂಚ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗಾಗಿ ನಗರಕ್ಕೆ ಬಂದಿದ್ದ ಕೆಕೆ, ಗುರುದಾಸ್ ಕಾಲೇಜು ಆಯೋಜಿಸಿದ್ದ ಕಾರ್ಯಕ್ರಮದ ಪ್ರದರ್ಶನ ನೀಡಿದ್ದರು. ಕೆಕೆ ಅವರ ಸಂಗೀತ ಕಾರ್ಯಕ್ರಮವನ್ನು ತೃಣಮೂಲ ನಾಯಕರು ಆಯೋಜಿಸಿದ್ದರು.

ಕೋಲ್ಕತ್ತಾದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಕೆಕೆ ಸಾವನ್ನಪ್ಪಿದ್ದಾರೆ. ಇದು ಯಾವುದೇ ಕಾಲೇಜು ಆಯೋಜಿಸಿದ್ದ ಕಾರ್ಯಕ್ರಮವಲ್ಲ. ಟಿಎಂಸಿ ಮುಖಂಡರು ಕಾರ್ಯಕ್ರಮ ಆಯೋಜಿಸಿದ್ದರು. ಅವರು ಅಸ್ವಸ್ಥರಾಗಿದ್ದರೂ ಅವರನ್ನು ಹಾಡಲು ಒತ್ತಾಯಿಸಲಾಯಿತು. ಅವರು ಒಂದೇ ಸಮನೆ ಬೆವರುತ್ತಿದ್ದರು. ಅವರು ಹೊರಡಲು ಬಯಸಿದರೂ ಅವರನ್ನು ಅನುಮತಿಸಲಿಲ್ಲ. ಅವರ ಕೊಲೆಯಾಗಿದೆ ಎಂದು ಕೊಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಿಲೀಪ್ ಘೋಷ್ ಹೇಳಿದ್ದಾರೆ.

ತಮ್ಮ ಉತ್ತರಾಧಿಕಾರಿ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಸೇರಿದಂತೆ ಪಕ್ಷದ ಸಹೋದ್ಯೋಗಿಗಳ ಮೇಲೆ ದಾಳಿ ಮಾಡಿದ್ದಕ್ಕಾಗಿ ಪಕ್ಷದ ನಾಯಕತ್ವದಿಂದ ವಾಗ್ದಂಡನೆಗೆ ಒಳಗಾದ ನಂತರ ಬಿಜೆಪಿಯೊಳಗೆ ಪ್ರಸ್ತುತವಾಗಲು ದಿಲೀಪ್ ಘೋಷ್ ಮಾಡಿದ ಪ್ರಯತ್ನವೇ ಆಧಾರರಹಿತ ಆರೋಪ ಎಂದು ತೃಣಮೂಲ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಇದನ್ನೂ ಓದಿ
KK Death: ಕೆಕೆ ನಿಧನಕ್ಕೆ ಪ್ರಾಥಮಿಕ ವೈದ್ಯಕೀಯ ವರದಿಯಲ್ಲಿ ಕಾರಣ ಬಹಿರಂಗ; ಇಂದು ಮುಂಬೈನಲ್ಲಿ ಖ್ಯಾತ ಗಾಯಕನ ಅಂತ್ಯಕ್ರಿಯೆ
KK’s funeral: ಜೂನ್ 2ರಂದು ಮುಂಬೈನಲ್ಲಿ ಗಾಯಕ ಕೆಕೆ ಅಂತ್ಯಕ್ರಿಯೆ
KK Death: ಸಾವಿಗಿಂತ ಕೆಲವೇ ನಿಮಿಷಗಳ ಮುನ್ನ ವೇದಿಕೆ ತೊರೆದಿದ್ದ ಗಾಯಕ ಕೆಕೆ; ಇಲ್ಲಿದೆ ವೈರಲ್​ ವಿಡಿಯೋ
KK Death Case: ಸಿಂಗರ್​ ಕೆಕೆ ಸಾವಿನಲ್ಲಿ ಮೂಡಿದೆ ಅನುಮಾನ; ಮುಖ, ತಲೆಯಲ್ಲಿ ಗಾಯದ ಗುರುತು? ಕೇಸ್​ ದಾಖಲು

“ಕೆಕೆಯ ಮ್ಯಾನೇಜರ್​​ಗೆ ಘೋಷ್‌ಗಿಂತ ಚೆನ್ನಾಗಿ ಗೊತ್ತು. ಸಾವಿನ ಮೇಲೆ ಇಂತಹ ಅಗ್ಗದ ಮತ್ತು ಕೊಳಕು ರಾಜಕಾರಣ ಮಾಡುವುದು ಬಿಜೆಪಿಯ ಸಂಸ್ಕೃತಿ. ದಿಲೀಪ್ ಘೋಷ್ ಅವರ ಪ್ರಕಾರ, ಇದು ಅಸ್ತಿತ್ವದ ಹೋರಾಟವಾಗಿದೆ. ಅವರು ಪಕ್ಷದಿಂದ ನಿಂದಿಸಿದ್ದಾರೆ. ಅವರು ತೀವ್ರ ಒತ್ತಡದಲ್ಲಿದ್ದಾರೆ ಮತ್ತು ಅದಕ್ಕಾಗಿಯೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ವಿರೋಧ ಪಕ್ಷಗಳ ನಾಯಕರು ಸ್ಥಳದ ದುರುಪಯೋಗವನ್ನು ಆರೋಪಿಸಿದ ಒಂದು ದಿನದ ನಂತರ ಘೋಷ್ ಅವರ ಆರೋಪ ಬಂದಿದೆ. ಆಡಳಿತಾರೂಢ ಟಿಎಂಸಿ ಕಾರ್ಯಕರ್ತರು ಪ್ರದರ್ಶನಕ್ಕೆ ಟಿಕೆಟ್‌ಗಳನ್ನು “ಹೆಚ್ಚು ಮಾರಾಟ ಮಾಡಿದ್ದಾರೆ” ಎಂದು ವಿರೋಧ ಪಕ್ಷ ಆರೋಪಿಸಿದೆ. ಬಂಗಾಳದ ಬಿಜೆಪಿ ಮತ್ತು ಕಾಂಗ್ರೆಸ್ ಈಗಾಗಲೇ ಗಾಯಕನ ಸಾವಿನ ಸುತ್ತಲಿನ ಸಂದರ್ಭಗಳ ಬಗ್ಗೆ ತನಿಖೆಗೆ ಒತ್ತಾಯಿಸಿವೆ.

ಕಾರ್ಯಕ್ರಮಗಳ ವಿಡಿಯೊಗಳನ್ನು ನೋಡಿದರೆ ಕೆಕೆ ವಿಪರೀತವಾಗಿ ಬೆವರುತ್ತಿರುವುದು ಕಾಣಿಸುತ್ತದೆ. ಸಂಗೀತ ಕಾರ್ಯಕ್ರಮ ಸಮಯದಲ್ಲಿ ಸಭಾಂಗಣ ಕಿಕ್ಕಿರಿದು ತುಂಬಿತ್ತು ಎಂದು ಸಭಾಂಗಣದಲ್ಲಿ ಉದ್ಯೋಗಿಯೊಬ್ಬರು ಹೇಳಿದ್ದಾರೆ.

ಬುಧವಾರ ಕೋಲ್ಕತ್ತಾದ ಮೇಯರ್ ಫಿರ್ಹಾದ್ ಹಕೀಮ್ ಅವರು ನಜ್ರುಲ್ ಮಂಚ್‌ನಲ್ಲಿ ಎಸಿ ವ್ಯವಸ್ಥೆಯು ಸರಿಯಾಗಿಯೇ ಇದೆ. ಆದರೆ 7,000 ಜನರು 2,000 ಕ್ಕೆ ಮೀಸಲಾದ ಸ್ಥಳದಲ್ಲಿ ಜಮಾಯಿಸಿದ್ದರಿಂದ ಎಸಿಗಳು ನಿಷ್ಪ್ರಯೋಜಕವಾಗಿತ್ತು. ಆದರೂ, ಅವರು ಹಾಡುತ್ತಲೇ ಇದ್ದರು ಎಂದು ನಜ್ರುಲ್ ಮಂಚ್ ಅನ್ನು ಹೊಂದಿರುವ ಕೋಲ್ಕತ್ತಾ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿಯ ಮುಖ್ಯಸ್ಥರಾಗಿರುವ ಹಕೀಮ್ ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 4:37 pm, Thu, 2 June 22