ನಾಯಿ ಮಾಂಸ ಮಾರಾಟ ನಿಷೇಧಿಸಿದ ನಾಗಾಲ್ಯಾಂಡ್ ಸರ್ಕಾರದ ಆದೇಶವನ್ನು ರದ್ದು ಮಾಡಿದ ಗೌಹಾಟಿ ಹೈಕೋರ್ಟ್
‘ಪ್ರಾಣಿಗಳು’ ಎಂಬ ವ್ಯಾಖ್ಯಾನದ ಅಡಿಯಲ್ಲಿ ನಾಯಿಗಳನ್ನು ಉಲ್ಲೇಖಿಸಲಾಗಿಲ್ಲ ಎಂದು ಸೂಚಿಸಿದ ನ್ಯಾಯಾಧೀಶರು, ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ಮಾತ್ರ ನಾಯಿಗಳ ಮಾಂಸವನ್ನು ಸೇವಿಸುವುದರಿಂದ ಆಶ್ಚರ್ಯವೇನಿಲ್ಲ ಎಂದು ಹೇಳಿದರು.
ವಾಣಿಜ್ಯ ಆಮದು, ನಾಯಿಗಳ ವ್ಯಾಪಾರ ಮತ್ತು ನಾಯಿಗಳ ಮಾರಾಟ ಮತ್ತು ರೆಸ್ಟೋರೆಂಟ್‌ಗಳಲ್ಲಿ ನಾಯಿ ಮಾಂಸದ (Dog meat) ವಾಣಿಜ್ಯ ಮಾರಾಟವನ್ನು ನಿಷೇಧಿಸುವ ನಾಗಾಲ್ಯಾಂಡ್ (Nagaland) ಸರ್ಕಾರದ ಆದೇಶವನ್ನು ಗೌಹಾಟಿ ಹೈಕೋರ್ಟ್‌ನ (Gauhati high court) ಕೊಹಿಮಾ ಪೀಠ ರದ್ದುಗೊಳಿಸಿದೆ. ನ್ಯಾಯಮೂರ್ತಿ ಮಾರ್ಲಿ ವ್ಯಾಂಕುನ್ ನೇತೃತ್ವದ ಪೀಠವು ಜೂನ್ 2 ರಂದು ತೀರ್ಪು ಪ್ರಕಟಿಸಿದ್ದು, ಜುಲೈ 4, 2020 ರಂದು ಹೊರಡಿಸಿದ್ದ ನಿಷೇಧ ಆದೇಶವನ್ನು ರದ್ದು ಮಾಡಿದೆ. ರಾಜ್ಯ ಸಚಿವ ಸಂಪುಟವು ನಾಯಿಗಳ ವಾಣಿಜ್ಯ ಆಮದು ಮತ್ತು ವ್ಯಾಪಾರ, ನಾಯಿ ಮಾರುಕಟ್ಟೆಗಳು ಮತ್ತು ಬೇಯಿಸಿದ,ಬೇಯಿಸದ ನಾಯಿ ಮಾಂಸ ಮಾರಾಟದ ಮೇಲೆ ನಿಷೇಧ ಹೇರಿತ್ತು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳು (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರಕ್ಕೆ ಸೇರಿಸಿದ ಪದಾರ್ಥಗಳು) ನಿಯಮಗಳು, 2011 ರ ನಿಬಂಧನೆಗಳನ್ನು ಉಲ್ಲೇಖಿಸಿ ನಿಷೇಧದ ವಿರುದ್ಧದ ಅರ್ಜಿಗೆ ಪ್ರತಿಕ್ರಿಯಿಸಲು ರಾಜ್ಯ ಸರ್ಕಾರದ ಪ್ರತಿವಾದಿಗಳು ವಿಫಲವಾದ ನಂತರ ಹೈಕೋರ್ಟ್‌ನ ಏಕ ಪೀಠವು ನವೆಂಬರ್ 2020 ರಲ್ಲಿ ನಿಷೇಧವನ್ನು ತಾತ್ಕಾಲಿಕವಾಗಿ ರದ್ದು ಮಾಡಿತ್ತು. ಕೊಹಿಮಾ ಮುನ್ಸಿಪಲ್ ಕೌನ್ಸಿಲ್ ಅಡಿಯಲ್ಲಿ ಪರವಾನಗಿ ಪಡೆದ ವ್ಯಾಪಾರಿಗಳು ನಾಯಿಗಳನ್ನು ಆಮದು ಮಾಡಿಕೊಳ್ಳಲು ಮತ್ತು ನಾಯಿ ಮಾಂಸವನ್ನು ಮಾರಾಟ ಮಾಡಲು, ನಿಷೇಧದ ಬಗ್ಗೆ ಕಾನೂನು ಆಧಾರ ಮತ್ತು ನ್ಯಾಯವ್ಯಾಪ್ತಿಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.
ಸರ್ಕಾರದ ಅಧಿಸೂಚನೆಯು ಆಹಾರ ಸುರಕ್ಷತಾ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಆಹಾರ ಉತ್ಪನ್ನ ಗುಣಮಟ್ಟ ಮತ್ತು ಆಹಾರ ಸೇರ್ಪಡೆಗಳ ನಿಯಂತ್ರಣ 2011 ರ ನಿಯಮಾವಳಿ 2.5 ವ್ಯಾಖ್ಯಾನಿಸಿರುವ ತನ್ನ ಆಗಸ್ಟ್ 2014 ರ ಸುತ್ತೋಲೆಯನ್ನು ಹೊರಡಿಸುವ ಮೂಲಕ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತನ್ನ ನಿಯೋಜಿತ ಅಧಿಕಾರವನ್ನು ಮೀರಿ ಕಾರ್ಯನಿರ್ವಹಿಸಿದೆಯೇ ಎಂಬುದನ್ನು ನೋಡಬೇಕಾಗಿದೆ ಎಂದು ನ್ಯಾಯಾಲಯ ಹೇಳಿದೆ.
‘ಪ್ರಾಣಿಗಳು’ ಎಂಬ ವ್ಯಾಖ್ಯಾನದ ಅಡಿಯಲ್ಲಿ ನಾಯಿಗಳನ್ನು ಉಲ್ಲೇಖಿಸಲಾಗಿಲ್ಲ ಎಂದು ಸೂಚಿಸಿದ ನ್ಯಾಯಾಧೀಶರು, ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ಮಾತ್ರ ನಾಯಿಗಳ ಮಾಂಸವನ್ನು ಸೇವಿಸುವುದರಿಂದ ಆಶ್ಚರ್ಯವೇನಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Manipur: ಬಂಡುಕೋರರ ಗುಂಡಿನ ದಾಳಿಗೆ ಒಬ್ಬ BSF ಸಿಬ್ಬಂದಿ ಹುತಾತ್ಮ, ಇಬ್ಬರು ಯೋಧರಿಗೆ ಗಾಯ
ಅರ್ಜಿದಾರರು ನಾಯಿಗಳನ್ನು ಸಾಗಿಸುವ ಮತ್ತು ನಾಯಿ ಮಾಂಸವನ್ನು ಮಾರಾಟ ಮಾಡುವ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸಲು ಸಮರ್ಥರಾಗಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.ಆದಾಗ್ಯೂ, ನಾಯಿ ಮಾಂಸವನ್ನು ಮಾನವ ಬಳಕೆಗೆ ಆಹಾರದ ಗುಣಮಟ್ಟವೆಂದು ಪರಿಗಣಿಸಲಾಗುವುದಿಲ್ಲ ಮತ್ತು ಮಾನವ ಬಳಕೆಗೆ ಸುರಕ್ಷಿತವಾದ ಪ್ರಾಣಿಗಳ ವ್ಯಾಖ್ಯಾನದಲ್ಲಿ ಹೊರಗಿಡಲಾಗಿದೆ ಎಂದು ಕೋರ್ಟ್ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Tue, 6 June 23