ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ: ಸಂಜಯ್ ರಾಯ್ ಏಕೈಕ ಆರೋಪಿ, ಬೇರೆಯವರು ಭಾಗಿಯಾಗಿರುವ ಕುರುಹಿಲ್ಲ

|

Updated on: Aug 19, 2024 | 12:21 PM

ಕೋಲ್ಕತ್ತಾದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಒಂದೇ ಆರೋಪಿಯ ಪಾತ್ರವಿದೆ ಎಂದು ಮೂಲಗಳು ತಿಳಿಸಿವೆ. ಆರು ದಿನಗಳ ತನಿಖೆಯಲ್ಲಿ ಸಂಜಯ್ ರಾಯ್ ಹೊರತುಪಡಿಸಿ ಯಾವುದೇ ಆರೋಪಿಗಳು ಭಾಗಿಯಾಗಿರುವುದು ಸಿಬಿಐಗೆ ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ: ಸಂಜಯ್ ರಾಯ್ ಏಕೈಕ ಆರೋಪಿ, ಬೇರೆಯವರು ಭಾಗಿಯಾಗಿರುವ ಕುರುಹಿಲ್ಲ
ಆರೋಪಿ
Follow us on

ಕೋಲ್ಕತ್ತಾದ ಆರ್​ಜಿ ಕರ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಸಂಜಯ್​ ರಾಯ್​ ಪಾತ್ರ ಮಾತ್ರವಿದೆ ಬೇರೆಯವರು ಭಾಗಿಯಾಗಿರುವ ಕುರಿತು ಯಾವುದೇ ಕುರುಹಿಲ್ಲ ಎಂದು ಮೂಲಗಳು ತಿಳಿಸಿವೆ.

ಆರು ದಿನಗಳ ತನಿಖೆಯಲ್ಲಿ ಸಂಜಯ್ ರಾಯ್ ಹೊರತುಪಡಿಸಿ ಯಾವುದೇ ಆರೋಪಿಗಳು ಭಾಗಿಯಾಗಿರುವುದು ಸಿಬಿಐಗೆ ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ರಾಯ್ ಕೋಲ್ಕತ್ತಾ ಪೊಲೀಸರ ಮುಂದೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ, ಸಂಜಯ್ ರಾಯ್ ಹೇಳಿಕೆ ಬಗ್ಗೆ ಸಿಬಿಐ ಅನುಮಾನ ವ್ಯಕ್ತಪಡಿಸಿದೆ.

ಸತ್ಯ ಮತ್ತು ಅವರ ಮಾನಸಿಕ ಸ್ಥಿತಿಯನ್ನು ತಿಳಿಯಲು ಮನೋವಿಜ್ಞಾನ ಪರೀಕ್ಷೆ ಮಾಡಿಸಿದ್ದಾರೆ. ಸಿಬಿಐ ಇಂದು ರಾಯ್ ಅವರ ಮನೋವಿಜ್ಞಾನ ಪರೀಕ್ಷೆಯನ್ನು ಮುಂದುವರೆಸಿದೆ. ಈ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್‌ಗೆ ಭಾನುವಾರ ಸೈಕೋಮೆಟ್ರಿಕ್ ಪರೀಕ್ಷೆ ನಡೆಸಲಾಗಿತ್ತು.

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಸಿಬಿಐ ವಿಚಾರಣೆ ನಾಲ್ಕನೇ ದಿನವೂ ಮುಂದುವರೆದಿದೆ. ಕೋಲ್ಕತ್ತಾ ಹೈಕೋರ್ಟ್ ಈ ಪ್ರಕರಣವನ್ನು ಆಗಸ್ಟ್ 13 ರಂದು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಿತು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ ಒಂದು ದಿನದ ನಂತರ ಹೈಕೋರ್ಟ್‌ನ ಈ ನಿರ್ಧಾರ ಹೊರಬಿದ್ದಿದೆ.

ಮತ್ತಷ್ಟು ಓದಿ:  ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ: ಪ್ರಧಾನಿ ಮೋದಿಗೆ ಪತ್ರ ಬರೆದ ಪದ್ಮಶ್ರೀ ಪುರಸ್ಕೃತ 70 ವೈದ್ಯರು

ಸಿಬಿಐ ತನ್ನ ತನಿಖೆಗೆ ಸಂಬಂಧಿಸಿದಂತೆ ಕೆಲವು ಕೋಲ್ಕತ್ತಾ ಪೊಲೀಸ್ ಅಧಿಕಾರಿಗಳು ಸೇರಿದಂತೆ 20 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದೆ. ಘಟನೆ ನಡೆದ ಸ್ಥಳದ 3ಡಿ ಮ್ಯಾಪಿಂಗ್ ಅನ್ನು ಸಿಬಿಐ ಮಾಡಿದೆ. ಇಲ್ಲಿಯವರೆಗೆ ಸಂದೀಪ್ ಘೋಷ್ ಅವರನ್ನು 36 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.

ಸಿಬಿಐ ಹಗಲಿರುಳು ತನಿಖೆಯಲ್ಲಿ ನಿರತವಾಗಿದ್ದು, ಈ ಪ್ರಕರಣದ ವಿಚಾರಣೆಯನ್ನು ದೇಶದ ಸುಪ್ರೀಂ ಕೋರ್ಟ್‌ನಲ್ಲಿಯೇ ನಡೆಸಲಿದ್ದು, ನಾಳೆ ಅಂದರೆ ಮಂಗಳವಾರಕ್ಕೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ದೇಶದ 70 ಕ್ಕೂ ಹೆಚ್ಚು ಪದ್ಮ ಪ್ರಶಸ್ತಿ ಪುರಸ್ಕೃತ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರ ಸುರಕ್ಷತೆಗಾಗಿ ಪ್ರತ್ಯೇಕ ಕಾನೂನು ಜಾರಿಗೆ ಒತ್ತಾಯಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ