‘ಧರಣಿ ಮಾಡಲೂ ಕೋಲ್ಕತ್ತ ಪೊಲೀಸರು ಬಿಡೋದಿಲ್ಲ..ನಮ್ಮ ವೇದಿಕೆಯನ್ನೇ ಕೆಡವಿದ್ದಾರೆ’-ದೀದಿ ನಾಡಲ್ಲಿ ಬಿಜೆಪಿ ಆರೋಪ

|

Updated on: May 05, 2021 | 11:45 AM

ಇನ್ನು ಜೆ.ಪಿ.ನಡ್ಡಾ ಅವರು ಇಂದು ಸಂಜೆ ಪಶ್ಚಿಮಬಂಗಾಳದಲ್ಲಿ ಗೆದ್ದ 77 ಶಾಸಕರನ್ನು ಮತ್ತು  ಲೋಕಸಭಾ ಸದಸ್ಯರನ್ನು ಭೇಟಿಯಾಗಲಿದ್ದಾರೆ. ಚುನಾವಣೆ ಫಲಿತಾಂಶದ ನಂತರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಕಾರ್ಯಕರ್ತರ ಕುಟುಂಬವನ್ನು ಜೆಪಿ ನಡ್ಡಾ ಈಗಾಗಲೇ ಭೇಟಿಯಾದರು.

‘ಧರಣಿ ಮಾಡಲೂ ಕೋಲ್ಕತ್ತ ಪೊಲೀಸರು ಬಿಡೋದಿಲ್ಲ..ನಮ್ಮ ವೇದಿಕೆಯನ್ನೇ ಕೆಡವಿದ್ದಾರೆ’-ದೀದಿ ನಾಡಲ್ಲಿ ಬಿಜೆಪಿ ಆರೋಪ
ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾದ ಜೆಪಿ ನಡ್ಡಾ
Follow us on

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಟಿಎಂಸಿ ಕಾರ್ಯಕರ್ತರು ಹಲವು ಕಡೆಗಳಲ್ಲಿ ಹಿಂಸಾಚಾರ ನಡೆಸಿದ್ದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಚುನಾವಣಾ ಫಲಿತಾಂಶ ಹೊರಬಿದ್ದು, ಟಿಎಂಸಿ ಗೆದ್ದ ಬೆನ್ನಲ್ಲೇ ಕಾರ್ಯಕರ್ತರು ರಾಜ್ಯದ ಹೂಗ್ಲಿ ಸೇರಿ ಹಲವು ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಟಿಎಂಸಿ ಕಾರ್ಯಕರ್ತರ ಈ ಗೂಂಡಾಗಿರಿಯ ವಿರುದ್ಧ ಇಂದು ಬಿಜೆಪಿ ರಾಷ್ಟ್ರಾದ್ಯಂತ ಧರಣಿ ಹಮ್ಮಿಕೊಂಡಿದೆ. ಇಂದು ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಅದೇ ದಿನ ಬಿಜೆಪಿ ತನ್ನ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲಲ್ಲ. ಯಾವಾಗಲೂ ರಾಜಕೀಯ ನಾಯಕರು ಅದರಲ್ಲೂ ಬಿಜೆಪಿ ಕಾರ್ಯಕರ್ತರು, ನಾಯಕರ ಮೇಲೆ ಹಲ್ಲೆ ನಡೆಯುತ್ತಲೇ ಇರುತ್ತದೆ. ಇದು ಕೊನೆಯಾಗಬೇಕು ಎಂದು ಕಮಲಪಕ್ಷ ಆಗ್ರಹಿಸಿದೆ.

ಧರಣಿ ನಿಮಿತ್ತ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ನಿನ್ನೆಯೇ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದಾರೆ. ಜೆಪಿ ನಡ್ಡಾ ಮತ್ತು ಇತರ ಬಿಜೆಪಿ ನಾಯಕರು ಇಂದು ಕೋಲ್ಕತ್ತದಲ್ಲಿರುವ ಪಕ್ಷದ ಪ್ರಧಾನ ಕಚೇರಿಯ ಬಳಿ ಧರಣಿ ನಡೆಸಲು ಸಿದ್ಧತೆ ನಡೆಸಿದ್ದರು. ಅದಕ್ಕಾಗಿ ವೇದಿಕೆಯನ್ನೂ ಕಟ್ಟಲಾಗಿತ್ತು. ಆದರೆ ಧರಣಿ ನಡೆಸಲು ನಿರ್ಮಿಸಲಾಗಿದ್ದ ವೇದಿಕೆಯನ್ನು ಕೋಲ್ಕತ್ತ ಪೊಲೀಸರು ಕೆಡವಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದಾರೆ. ನಾವು ಕೊವಿಡ್​ 19ನ ಎಲ್ಲ ಶಿಷ್ಟಾಚಾರಗಳನ್ನು ಪಾಲಿಸಿಯೇ ಧರಣಿ ನಡೆಸುತ್ತಿದ್ದರೂ, ಪೊಲೀಸರು ಅಡ್ಡಿಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಜೆ.ಪಿ.ನಡ್ಡಾ ಅವರು ಇಂದು ಸಂಜೆ ಪಶ್ಚಿಮಬಂಗಾಳದಲ್ಲಿ ಗೆದ್ದ 77 ಶಾಸಕರನ್ನು ಮತ್ತು  ಲೋಕಸಭಾ ಸದಸ್ಯರನ್ನು ಭೇಟಿಯಾಗಲಿದ್ದಾರೆ. ಚುನಾವಣೆ ಫಲಿತಾಂಶದ ನಂತರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಕಾರ್ಯಕರ್ತರ ಕುಟುಂಬವನ್ನು ಜೆಪಿ ನಡ್ಡಾ ಈಗಾಗಲೇ ಭೇಟಿಯಾದರು. ಹಾಗೇ, ಅನಾಗರಿಕತೆ, ಹಿಂಸಾಚಾರದ ವಿರುದ್ಧ ಪ್ರಜಾಪ್ರಭುತ್ವದ ಮಾರ್ಗದಲ್ಲೇ ಹೋರಾಟ ಮಾಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳಿದರು. ಪಶ್ಚಿಮಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಯನ್ನು ಇಡೀ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ವಿರೋಧಿಸುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Mamata Banerjee Swearing-in Ceremony: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮಮತಾ ಬ್ಯಾನರ್ಜಿ

ಛೇ! ಉನ್ನತ ಐಎಎಸ್, ಐಪಿಎಸ್ ಅಧಿಕಾರಿಗಳದ್ದೇ ನಿಗಾ ಇದ್ದರೂ ನಡೆಯುತ್ತಿತ್ತಾ ಕೋವಿಡ್​ ಬೆಡ್ ಬ್ಲಾಕಿಂಗ್ ದಂಧೆ!?

Published On - 11:40 am, Wed, 5 May 21