Koovagam Festival: ಮದುವೆಯಾಗಿ ಅದೇ ದಿನ ವಿಧವೆಯರಾಗ್ತಾರೆ ಈ ಮಂಗಳಮುಖಿಯರು, ಏನಿದು ಸಂಪ್ರದಾಯ?

|

Updated on: May 12, 2024 | 11:41 AM

ತಮಿಳುನಾಡಿನ ಕೂವಾಗಂನಲ್ಲಿ ಅರವಾನ್‌ ಎಂಬ ಮಂಗಳಮುಖಿಯರ ವರ್ಷದ ಏಕೈಕ ಧಾರ್ಮಿಕ ವಿಶೇಷ ಆಚರಣೆ ನಡೆಯುತ್ತೆ. ಈ ಹಬ್ಬ ಹಿಂದೆ 18 ದಿನಗಳ ಕಾಲ ನಡೆಯುತ್ತಿತ್ತು. ಆದರೆ ಈಗ ಮೂರು ದಿನಕ್ಕೆ ಸೀಮಿತವಾಗಿದೆ. ಈ ಹಬ್ಬದ ಆಚರಣೆಯ ಕೊನೆಯ ದಿನ ಮಂಗಳಮುಖಿಯರಿಗೆ ಪೂಜಾರಿ ತಾಳಿ ಕಟ್ಟುತ್ತಾರೆ. ಅದೇ ದಿನ ಸಂಜೆ ತಾಳಿಯನ್ನು ತೆಗೆದು ವಿಧವೆ ಮಾಡಲಾಗುತ್ತೆ. ಈ ಹಬ್ಬದಲ್ಲಿ ಭಾಗವಹಿಸಲು ದೇಶ-ವಿದೇಶದಿಂದ ಮಂಗಳಮುಖಿಯರ ದಂಡೇ ಇಲ್ಲಿಗೆ ಹರಿದುಬರುತ್ತೆ.

Koovagam Festival: ಮದುವೆಯಾಗಿ ಅದೇ ದಿನ ವಿಧವೆಯರಾಗ್ತಾರೆ ಈ ಮಂಗಳಮುಖಿಯರು, ಏನಿದು ಸಂಪ್ರದಾಯ?
ಮದುವೆಯಾಗಿ ಅದೇ ದಿನ ವಿಧವೆಯರಾಗ್ತಾರೆ ಈ ಮಂಗಳಮುಖಿಯರು, ಏನಿದು ಸಂಪ್ರದಾಯ?
Follow us on

ಇತ್ತ ಸಂಪೂರ್ಣ ಪುರುಷರೂ ಅಲ್ಲದೆ, ಸ್ತ್ರೀಯೂ ಅಲ್ಲದೆ ಅವಮಾನ, ತಿರಸ್ಕಾರ, ಸಮಾಜದಿಂದಲೇ ಪ್ರತ್ಯೇಕವಾಗಿ ಬದುಕುತ್ತಿರುವ ಮಂಗಳಮುಖಿಯರ ಜೀವನದ ಬಗ್ಗೆ ಯಾರೂ ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಆಚಾರ-ವಿಚಾರಗಳಲ್ಲಿ ಬಹಳಷ್ಟು ನಿಗೂಢತೆಯನ್ನು ಕಾಪಾಡಿಕೊಂಡು ಬಂದಿರುವ ಇವರ ಬಗ್ಗೆ ಜನರಲ್ಲಿ ಅನೇಕ ಗೊಂದಲ, ಕುತೂಹಲಗಳಿವೆ. ಸಾಕ್ಷಾತ್ ಪರಶಿವನ ಅವತಾರ ಎನ್ನಲಾಗುವ ಮಂಗಳಮುಖಿಯರನ್ನು ಸಮಾಜ ತೀರಾ ಹೀನಾಯವಾಗಿ ನಡೆಸಿಕೊಳ್ಳುತ್ತೆ. ನಪುಂಸಕ, ಚಕ್ಕ, ಕೋಜಾ, ಹಿಜ್ರಾ, ದ್ವಿಲಿಂಗಿ, ಶಿಖಂಡಿ ಹೀಗೆ ನಾನಾ ಹೆಸರುಗಳಿಂದ ಕರೆದು ಅವಮಾನಿಸುವುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಂದು ಸ್ಥಳದಲ್ಲಿ ಮಾತ್ರ ಮಂಗಳಮುಖಿಯರಿಗೆ ಯಾವುದೇ ನಿರ್ಬಂಧನೆಗಳು, ಕಟ್ಟುಪಾಡುಗಳಿರುವುದಿಲ್ಲ. ಹೆಣ್ಮಕ್ಕಳನ್ನೇ ಮೀರಿಸುವಂತೆ ಅಲಂಕಾರ ಮಾಡಿಕೊಂಡು ಜಪ್ಪಾಳೆ ತಟ್ಟುತ್ತ, ಹಾಡು ಹಾಡುತ್ತ ನಲಿದು ಕುಪ್ಪಳಿಸುತ್ತಾರೆ. ಮಾಂಗಲ್ಯ ಕಟ್ಟಿಸಿಕೊಂಡು ಮದುವೆಯಾಗಿ ಸಂಭ್ರಮಿಸುತ್ತಾರೆ. ಆದರೆ ಅದೇ ದಿನ ತಾಳಿ ಕಿತ್ತು ವಿಧವೆಯರಾಗಿ ಶೋಕದಲ್ಲಿ ಮುಳುಗಿ ಮಿಂದೇಳುತ್ತಾರೆ. ಇಡೀ ಊರಲ್ಲಿ ಜಾತ್ರೆಯ ವಾತಾವರಣ ಕಳೆಗಟ್ಟಿರುತ್ತೆ. ತಮಟೆ, ವಾಲಗದ ಸದ್ದು ಮೇಲೈಸುತ್ತಿರುತ್ತೆ. ಬಣ್ಣ ಬಣ್ಣದ ಸೀರೆ ತೊಟ್ಟು ಡಜನ್ ಗಟ್ಟಲೆ ಬಳೆ, ಹೂ ಮುಡಿದು, ಕಣ್ಣನ್ನು ಕುಕ್ಕುವಂತೆ ಆಭರಣ ಧರಿಸಿ, ಕಣ್ಣಿಗೆ ಗೂಲಿಂಗ್ ಕ್ಲಾಸ್ ಹಾಕಿಕೊಂಡು ನಡು ಬೀದಿಯಲ್ಲೇ ಚಪ್ಪಾಳೆ ತಟ್ಟುತ್ತ ಹೆಜ್ಜೆ ಹಾಕುವ ಮಂಗಳಮುಖಿಯರು. ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಈ ರೀತಿಯ ದೃಶ್ಯ ಕಾಣಲು ಸಿಗೋದು ತಮಿಳುನಾಡಿನ ಕೂವಾಗಂನಲ್ಲಿ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ 25 ಕಿ.ಮೀ ದೂರದಲ್ಲಿರುವ ಚಿಕ್ಕ ಗ್ರಾಮ ಕೂವಾಗಂ. ಈ ಗ್ರಾಮವನ್ನು ನಿದ್ದೆಯ ಊರು ಎಂದು ಕರೆಯಲಾಗುತ್ತೆ. ಈ ಗ್ರಾಮಕ್ಕೆ ಜೀವಕಳೆ ಬರುವುದೇ ಮಂಗಳಮುಖಿಯರ ಅರವಾನ್ ಹಬ್ಬ ಶುರುವಾದಾಗ. ಇಲ್ಲಿ ಮಂಗಳಮುಖಿಯರು ವರ್ಷದ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ